ಕಳೆದ ಆಗಸ್ಟ್‌ನಲ್ಲಿ ಗ್ಯಾರಿ ಅವರನ್ನು ಆರ್‌ಸಿಬಿ ಕೋಚ್ ಆಗಿ ನೇಮಿಸಲಾಗಿತ್ತು. ಡಿ. 18ಕ್ಕೆ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯಲಿದೆ. ಇದಕ್ಕೂ ಮುನ್ನವೇ ಗ್ಯಾರಿ ಅವರ ಈ ನಡೆಯಿಂದಾಗಿ ಆರ್‌ಸಿಬಿ ಆತಂಕಗೆ ಆತಂಕ ಎದುರಾಗಿದೆ ಎಂದು ಆರ್‌ಸಿಬಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ನವದೆಹಲಿ(ಡಿ.16): ಭಾರತ ಮಹಿಳಾ ತಂಡದ ಪ್ರಧಾನ ಕೋಚ್ ಹುದ್ದೆಯ ರೇಸ್‌ನಲ್ಲಿ ಆರ್‌ಸಿಬಿ ತಂಡದ ಕೋಚ್ ಗ್ಯಾರಿ ಕರ್ಸ್ಟನ್ ಹೊಸದಾಗಿ ಸೇರ್ಪಡೆಗೊಂಡಿದ್ದಾರೆ. ಗ್ಯಾರಿ ಅವರ ನಡೆಗೆ ಸ್ವತಃ ಆರ್‌ಸಿಬಿಯೇ ಅಚ್ಚರಿ ವ್ಯಕ್ತಪಡಿಸಿದೆ.
ಕಳೆದ ಆಗಸ್ಟ್‌ನಲ್ಲಿ ಗ್ಯಾರಿ ಅವರನ್ನು ಆರ್‌ಸಿಬಿ ಕೋಚ್ ಆಗಿ ನೇಮಿಸಲಾಗಿತ್ತು. ಡಿ. 18ಕ್ಕೆ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯಲಿದೆ. ಇದಕ್ಕೂ ಮುನ್ನವೇ ಗ್ಯಾರಿ ಅವರ ಈ ನಡೆಯಿಂದಾಗಿ ಆರ್‌ಸಿಬಿ ಆತಂಕಗೆ ಆತಂಕ ಎದುರಾಗಿದೆ ಎಂದು ಆರ್‌ಸಿಬಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 2018ರಲ್ಲಿ ಆರ್’ಸಿಬಿ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕವಾಗಿದ್ದ ಗ್ಯಾರಿ, 2019ರ ಆವೃತ್ತಿಗೆ ಪ್ರಧಾನ ಕೋಚ್ ಆಗಿ ಆಯ್ಕೆಯಾಗಿದ್ದರು. ಟೀಂ ಇಂಡಿಯಾ ಕ್ರಿಕೆಟ್ ಕಂಡ ಅತ್ಯಂತ ಯಶಸ್ವಿ ಕೋಚ್’ಗಳ ಪೈಕಿ ಅಗ್ರಸ್ಥಾನದಲ್ಲಿ ನಿಲ್ಲುವ ಗ್ಯಾರಿ ಕರ್ಸ್ಟನ್ 2011ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಸದ್ಯ ಕೋಚ್ ರೇಸ್‌ನಲ್ಲಿ ದ.ಆಫ್ರಿಕಾದ ಹರ್ಷಲ್ ಗಿಬ್ಸ್, ಮನೋಜ್ ಪ್ರಭಾಕರ್ ಮತ್ತು ಡೇವ್ ವಾಟ್ಮೋರ್ ಸೇರಿ ಹಲವರು ಇದ್ದಾರೆ. ಡಿ.20ರಂದು ಮುಂಬೈನಲ್ಲಿ ಸಂದರ್ಶನ ನಡೆಯಲಿದೆ. ಒಂದು ವೇಳೆ ಗ್ಯಾರಿ ಮಹಿಳಾ ತಂಡದ ಕೋಚ್ ಆಗಿ ನೇಮಕಗೊಂಡರೆ, ಆರ್’ಸಿಬಿ ಕೋಚ್ ಸ್ಥಾನ ತೊರೆಯಬೇಕಾಗುತ್ತದೆ.