ಪರ್ತ್ ಟೆಸ್ಟ್: ಸ್ಪಿನ್ನರ್ ಕಣಕ್ಕಿಳಿಸದೇ ಎಡವಟ್ಟು ಮಾಡಿತಾ ಭಾರತ?

By Web Desk  |  First Published Dec 14, 2018, 3:32 PM IST

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನ ಉಭಯ ತಂಡಗಳು ಕಠಿಣ ಹೋರಾಟ ನಡೆಸಿದೆ. ಆಸ್ಟ್ರೇಲಿಯಾ ಮೊದಲ ದಿನದಲ್ಲಿ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದೆ. ಭಾರತ  ಸ್ಪೆಷಲಿಸ್ಟ್ ಸ್ಪಿನ್ನರ್ ಇಲ್ಲದೇ ನಾಲ್ವರು ವೇಗಿಗಳೊಂದಿಗೆ ಕಣಕ್ಕಿಳಿದಿದೆ. ಇಲ್ಲಿದೆ ಮೊದಲ ದಿನದ ಹೈಲೈಟ್ಸ್ 


ಪರ್ತ್(ಡಿ.14): ಪರ್ತ್‌ನ ಬೌನ್ಸಿ ಹಾಗೂ ಫಾಸ್ಟ್ ಪಿಚ್‌ಗೆ ಅನುಗುಣವಾಗಿ ಯಾವುದೇ ಸ್ಪೆಷಲಿಸ್ಟ್ ಸ್ಪಿನ್ನರ್ ಇಲ್ಲದೇ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿದ ಭಾರತ ಮೊದಲ ದಿನ ನಿರೀಕ್ಷಿತ ಯಶಸ್ಸು ಸಾಧಿಸಿಲ್ಲ. ಪರ್ತ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಆಸ್ಟ್ರೇಲಿಯಾ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದೆ. 6 ವಿಕೆಟ್ ನಷ್ಟಕ್ಕೆ 277 ರನ್ ಸಿಡಿಸಿ ಬೃಹತ್ ಮೊತ್ತದ ಸೂಚನೆ ನೀಡಿದೆ.

ಇದನ್ನೂ ಓದಿ: ಕ್ರಿಕೆಟಿಗರ ಹೃದಯ ಗೆದ್ದ ವಿರುಷ್ಕಾ ಜೋಡಿಯ ತ್ಯಾಗ!

Tap to resize

Latest Videos

 

That's Stumps on Day 1 of the 2nd Test. Australia 277/6

Updates - https://t.co/kN8fhGXH6O pic.twitter.com/gnhZ80sZVb

— BCCI (@BCCI)

 

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಆಸ್ಟ್ರೇಲಿಯಾ ಅತ್ಯುತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್‌ಗೆ ಮಾರ್ಕಸ್ ಹ್ಯಾರಿಸ್ ಹಾಗೂ ಆ್ಯರೋನ್ ಫಿಂಚ್ ಶತಕದ ಜೊತೆಯಾಟ ನೀಡಿದರು. ಫಿಂಚ್ ಹಾಫ್ ಸೆಂಚುರಿ ಸಿಡಿಸಿ ಔಟಾದರು. ಆದರೆ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಉಸ್ಮಾನ್ ಖವಾಜ ಕೇವಲ 5 ರನ್‌ಗಳಿಸಿ ನಿರಾಸೆ ಅನುಭವಿಸಿದರು.

ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಮಾರ್ಕಸ್ 70  ರನ್ ಸಿಡಿಸಿ ಔಟಾದರು. ಪೀಟರ್ ಹ್ಯಾಂಡ್ಸ್‌ಕಾಂಬ್ ಕೇವಲ 7 ರನ್ ಸಿಡಿಸಿ ನಿರ್ಗಮಿಸಿದರು. ಶಾನ್ ಮಾರ್ಶ್ ಹಾಗೂ ಟ್ರಾವಿಸ್ ಹೆಡ್ ಜೊತೆಯಾಟದಿಂದ ಆಸಿಸ್ ಬೃಹತ್ ಮೊತ್ತದ ಸೂಚನೆ ನೀಡಿತು. ಮಾರ್ಶ್ 45 ರನ್ ಸಿಡಿಸಿ ಔಟಾದರು.

ಇದನ್ನೂ ಓದಿ: ಅಚ್ಚರಿಯಾದರೂ ನಿಜ- ದ್ರಾವಿಡ್-ಪೂಜಾರ ಇಬ್ಬರ ಅಂಕಿ ಅಂಶ ಒಂದೇ!

ಹೋರಾಟ ನೀಡಿದ ಟ್ರಾವಿಸ್ ಹೆಡ್ 58 ರನ್ ಕಾಣಿಕೆ ನೀಡಿದರು. ಈ ಮೂಲಕ ಆಸಿಸ್ 250 ರನ್ ಗಡಿ ದಾಟಿತು. ನಾಯಕ ಟಿಮ್ ಪೈನೆ ಹಾಗೂ ಪ್ಯಾಟ್ ಕಮಿನ್ಸ್ ಕ್ರೀಸ್ ಕಾಯ್ದುಕೊಂಡಿದ್ದಾರೆ. ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 6 ವಿಕೆಟ್ ನಷ್ಟಕ್ಕೆ 277 ರನ್ ಸಿಡಿಸಿದೆ. 

ಟೀಂ ಇಂಡಿಯಾ ಪ್ರಮುಖ ಸ್ಪಿನ್ನರ್ ಇಲ್ಲದೆ ಅಲ್ಪ ಹಿನ್ನಡೆ ಅನುಭವಿಸಿದ್ದು ಸುಳ್ಳಲ್ಲ. ಭಾರತದ ಪರ ಇಶಾಂತ್ ಶರ್ಮಾ ಹಾಗೂ ಹನುಮಾ ವಿಹಾರಿ ತಲಾ 2 ವಿಕೆಟ್ ಕಬಳಿಸಿದ್ದಾರೆ. ಇನ್ನು ಜಸ್‌ಪ್ರೀತ್ ಬುಮ್ರಾ ಹಾಗೂ ಉಮೇಶ್ ಯಾದವ್ ತಲಾ 1 ವಿಕೆಟ್ ಕಬಳಿಸಿದರು.

ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!