ಅಚ್ಚರಿಯಾದರೂ ನಿಜ- ದ್ರಾವಿಡ್-ಪೂಜಾರ ಇಬ್ಬರ ಅಂಕಿ ಅಂಶ ಒಂದೇ!

By Web DeskFirst Published Dec 10, 2018, 8:34 PM IST
Highlights

ಟೀಂ ಇಂಡಿಯಾ ಮಾಜಿ ನಾಯಕ ರಾಹುಲ್ ದ್ರಾವಿಡ್ ಹಾಗೂ ಕ್ರಿಕೆಟಿಗ ಚೇತೇಶ್ವರ್ ಪೂಜಾರ ಅಂಕಿ ಅಂಶ ಒಂದೇ ರೀತಿ ಇದೆ. ದ್ರಾವಿಡ್ ಹಾದಿಯಲ್ಲೇ ಪೂಜಾರ ಸಾಗುತ್ತಿದ್ದಾರೆ. ಇದೀಗ ಆಡಿಲೇಡ್ ಟೆಸ್ಟ್ ಪಂದ್ಯದ ಬಳಿಕವೂ ಇದು ಸಾಬೀತಾಗಿದೆ.

ಆಡಿಲೇಡ್(ಡಿ.10): ಆಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಅದ್ಬುತ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣರಾದ ಚೇತೇಶ್ವರ್ ಪೂಜಾರ ,  ಮಾಜಿ ನಾಯಕ ರಾಹುಲ್ ದ್ರಾವಿಡ್ ಹಾದಿಯಲ್ಲೇ ಸಾಗುತ್ತಿದ್ದಾರೆ. ಇದಕ್ಕೆ ಅಂಕಿ ಅಂಶಗಳೇ ಸಾಕ್ಷಿ.

ಆಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಸೆಂಚುರಿ ಸಿಡಿಸಿದ ಪೂಜಾರ 2ನೇ ಇನ್ನಿಂಗ್ಸ್‌ನಲ್ಲಿ ಅರ್ಧಶತಕ ಸಿಡಿಸಿ ಗೆಲುವಿಗೆ ಕಾರಣರಾಗಿದ್ದರು. 2003ರಲ್ಲಿ ರಾಹುಲ್ ದ್ರಾವಿಡ್ ಆಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಹಾಗೂ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಹಾಫ್ ಸೆಂಚುರಿ ಸಿಡಿಸಿದ್ದರು. ಇಷ್ಟೇ ಅಲ್ಲ ಇಬ್ಬರು ಕೂಡ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಇಷ್ಟೇ ಅಲ್ಲ, ಪೂಜಾರ ರನ್ ಗಳಿಕೆ ಕೂಡ ದ್ರಾವಿಡ್ ಹಾದಿಯಲ್ಲೇ ಇದೇ. ಇದಕ್ಕೆ ಈ ಕೆಳಗಿನ ಅಂಕಿ ಅಂಶಗಳೇ ಉತ್ತರ ನೀಡುತ್ತಿದೆ.

ದ್ರಾವಿಡ್ ಹಾದಿಯಲ್ಲಿ ಪೂಜಾರ

ರನ್ ಇನ್ನಿಂಗ್ಸ್
3000 67
4000 84
5000 108

ರಾಹುಲ್ ದ್ರಾವಿಡ್ ರನ್‌ಗಳಿಕೆ

ರನ್ ಇನ್ನಿಂಗ್ಸ್
3000 67
4000 84
5000 108
click me!