ಆಡಿಲೇಡ್ ಟೆಸ್ಟ್: 2003ರ ಗೆಲುವು ನನೆಪಿಸಿದ ಸಚಿನ್ ತೆಂಡೂಲ್ಕರ್!

By Web DeskFirst Published Dec 10, 2018, 8:06 PM IST
Highlights

ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಗೆಲುವಿಗೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಭಿನಂದನೆ ಸಲ್ಲಿಸಿದ್ದಾರೆ. ಇಷ್ಟೇ ಅಲ್ಲ ಸೌರವ್ ಗಂಗೂಲಿ ನಾಯಕತ್ವ ಟೀಂ ಇಂಡಿಯಾ ಗೆಲುವನ್ನ ನೆನಪಿಸಿದ್ದಾರೆ.
 

ಆಡಿಲೇಡ್(ಡಿ.10): ಆಸ್ಟ್ರೇಲಿಯಾ ಪ್ರವಾಸದಲ್ಲಿ ಮೊದಲ ಟೆಸ್ಟ್ ಪಂದ್ಯ ಗೆದ್ದು ಶುಭಾರಂಭ ಮಾಡಿದ ಟೀಂ ಇಂಡಿಯಾಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಟೀಂ ಇಂಡಿಯಾವನ್ನ ಅಭಿನಂದಿಸಿದ್ದಾರೆ. ಇಷ್ಟೇ ಅಲ್ಲ 2003ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಡಿಲೇಡ್ ಟೆಸ್ಟ್  ಗೆಲುವನ್ನ ನನೆಪಿಸಿದ್ದಾರೆ.

ಟೀಂ ಇಂಡಿಯಾ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿನ್ ತೆಂಡೂಲ್ಕರ್, ಇಬ್ಬರೂ ಬ್ಯಾಟ್ಸ್‌ಮನ್‌ಗಳಾದ ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ ಹಾಗೂ ನಾಲ್ವರು ಬೌಲರ್‌ಗಳ ಪ್ರದರ್ಶನವನ್ನೂ ಶ್ಲಾಘಿಸಿದ್ದಾರೆ. ಇಷ್ಟೇ ಅಲ್ಲ ಆಡಿಲೇಡ್ ಟೆಸ್ಟ್ ಗೆಲುವು, 2003ರ ಆಸಿಸ್ ಪ್ರವಾಸದ ಗೆಲುವನ್ನ ನೆನಪಿಸಿದೆ ಎಂದು ಟ್ವೀಟ್ ಮಾಡಿದ್ದಾರೆ.ಸಚಿನ್ ಟ್ವೀಟ್‌ಗೆ ಚೇತೇಶ್ವರ್ ಪೂಜಾರ ರಿ ಟ್ವೀಟ್ ಮಾಡಿದ್ದಾರೆ. 

 

What a way to start the series! never released the pressure. Superb batting by with crucial knocks in both innings, in the 2nd innings and excellent contributions by our 4 bowlers. This has brought back memories of 2003. pic.twitter.com/4gmviaKeCC

— Sachin Tendulkar (@sachin_rt)

 

Thank you so much Sachin Paaji! I'm delighted to know that it brought you back some happy memories!

— cheteshwar pujara (@cheteshwar1)

 

ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 31 ರನ್’ಗಳಿಂದ ಮಣಿಸುವ ಮೂಲಕ ಟೀಂ ಇಂಡಿಯಾ ಶುಭಾರಂಭ ಮಾಡಿದೆ. ಈ ಮೂಲಕ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0 ಮುನ್ನಡೆ ಕಾಯ್ದುಕೊಂಡಿದೆ. ಎರಡನೇ ಟೆಸ್ಟ್ ಪಂದ್ಯ ಡಿಸೆಂಬರ್ 14ರಂದು ಪರ್ತ್’ನಲ್ಲಿ ಆರಂಭವಾಗಲಿದೆ.

click me!