ಜಂಪಾ ಮೋಡಿ - ಸಂಕಷ್ಟದಲ್ಲಿ ಟೀಂ ಇಂಡಿಯಾ!

Published : Mar 13, 2019, 07:58 PM IST
ಜಂಪಾ ಮೋಡಿ - ಸಂಕಷ್ಟದಲ್ಲಿ ಟೀಂ ಇಂಡಿಯಾ!

ಸಾರಾಂಶ

ನಾಯಕ ವಿರಾಟ್ ಕೊಹ್ಲಿ ತವರು ದೆಹಲಿಯಲ್ಲಿ ನಡೆಯುತ್ತಿರುವ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಹಿನ್ನಡೆ ಅನುಭವಿಸಿದೆ. 2009ರ ಬಳಿಕ ಆಸಿಸ್ ವಿರುದ್ಧ ತವರಿನಲ್ಲಿ ಸರಣಿ ಸೋಲಿಲ್ಲದ ಸರದಾರನಾಗಿರುವ ಭಾರತ, ಇದೀಗ ಸರಣಿ ಸೋಲಿನ ಭೀತಿಯಲ್ಲಿದೆ.  

ದೆಹಲಿ(ಮಾ.13): ಆಸ್ಟ್ರೇಲಿಯಾ ವಿರುದ್ಧದ 5ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಿನತ್ತ ಮುಖಮಾಡಿದೆ.  ದೆಹಲಿಯಲ್ಲಿ ನಡೆಯುತ್ತಿರುವ ನಿರ್ಣಾಯಕ ಪಂದ್ಯದಲ್ಲಿ ಗೆಲುವಿಗೆ 273 ರನ್ ಟಾರ್ಗೆಟ್ ಪಡೆದಿರುವ ಭಾರತ ಇದೀಗ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ.

ಇದನ್ನೂ ಓದಿ: ಕೆ.ಎಲ್.ರಾಹುಲ್ ಪರ ಬ್ಯಾಟ್ ಬೀಸಿದ ಟ್ವಿಟರಿಗರು!

ಈಗಾಗಲೇ ಟಿ20 ಸರಣಿ ಗೆದ್ದಿರುವ ಆಸ್ಟ್ರೇಲಿಯಾ ಇದೀಗ ಏಕದಿನ ಸರಣಿಯಲ್ಲೂ ಭಾರತಕ್ಕೆ ಶಾಕ್ ನೀಡಲು ಸಜ್ಜಾಗಿದೆ. ರೋಹಿತ್ ಶರ್ಮಾ ಸಿಡಿಸಿದ ಅರ್ಧಶತಕ ಹೊರತು ಪಡಿಸಿದರೆ ಇತರ ಯಾವ ಬ್ಯಾಟ್ಸ್‌ಮನ್ ಕೂಡ ಅಬ್ಬರಿಸಲಿಲ್ಲ. ತವರಿನಲ್ಲಿ ಕೊಹ್ಲಿ ಬಾಯ್ಸ್, ಆ್ಯಡಮ್ ಜಂಪಾ ಸ್ಪಿನ್ ಮೋಡಿಗೆ ತತ್ತರಿಸಿದ್ದಾರೆ.

ರೋಹಿತ್ ಶರ್ಮಾ 89 ಎಸೆತದಲ್ಲಿ 56 ರನ್ ಸಿಡಿಸಿದರೆ, ಇತರ ಬ್ಯಾಟ್ಸ್‌ಮನ್‌ಗಳು ನಿರಾಸೆ ಮೂಡಿಸಿದರು. ಶಿಖರ್ ಧವನ್ 12,  ವಿರಾಟ್ ಕೊಹ್ಲಿ 20, ರಿಷಬ್ ಪಂತ್ 16, ರವೀಂದ್ರ ಜಡೇಜಾ ಶೂನ್ಯ ಸುತ್ತಿದರು. 132 ರನ್‌ಗೆ 6 ವಿಕೆಟ್ ಕಳೆದುಕೊಂಡು ಸರಣಿ ಸೋಲಿನ ಭೀತಿಯಲ್ಲಿದೆ.

ಇದನ್ನೂ ಓದಿ: ಚುನಾವಣಾ ದಿನಾಂಕ ನಿಗದಿ ಬೆನ್ನಲ್ಲೇ ಸಚಿನ್, ಕೊಹ್ಲಿ ನೆರವು ಕೇಳಿದ ಮೋದಿ!

ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 9 ವಿಕೆಟ್ ನಷ್ಟಕ್ಕೆ 272 ರನ್ ಸಿಡಿಸಿತು. ಉಸ್ಮಾನ್ ಖವಾಜ ಶತಕ ಸಿಡಿಸಿ ಅಬ್ಬರಿಸಿದರು. ಪೀಟರ್ ಹ್ಯಾಂಡ್ಸ್‌ಕಾಂಬ್ ಹಾಫ್ ಸೆಂಚುರಿ ಬಾರಿಸಿದರು. ಈ ಮೂಲಕ ಭಾರತಕ್ಕೆ 273 ರನ್ ಟಾರ್ಗೆಟ್ ನೀಡಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಪಿಎಲ್ ಹರಾಜಿನಲ್ಲಿ ₹25.20 ಕೋಟಿ ಪಡೆದ ಕ್ಯಾಮರೂನ್ ಗ್ರೀನ್‌ಗೆ ಕೊಡುವ ಮೊತ್ತ ₹18 ಕೋಟಿ ಮಾತ್ರ
ಕೇವಲ 30 ಲಕ್ಷ ಮೂಲ ಬೆಲೆ ಹೊಂದಿದ್ದ ಮಂಗೇಶ್ ಯಾದವ್ 5.2 ಕೋಟಿಗೆ ಆರ್‌ಸಿಬಿ ಪಾಲು? ಅಷ್ಟಕ್ಕೂ ಯಾರು ಈ ಎಡಗೈ ವೇಗಿ?