ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿ ಇದೀಗ ರೋಚಕ ಘಟ್ಟ ತಲುಪಿದೆ. ರಾಂಚಿ ಪಂದ್ಯದಲ್ಲಿ ಗೆಲುವಿನ ಸಿಹಿ ಕಂಡಿರುವ ಆಸಿಸ್ ಇದೀಗ ಮೋಹಾಲಿ ಪಂದ್ಯವನ್ನು ಎದುರು ನೋಡುತ್ತಿದೆ. ಇತ್ತ ಟೀಂ ಇಂಡಿಯಾ ಕೆಲ ಬದಲಾವಣೆಗಳೊಂದಿಗೆ ಕಣಕ್ಕಿಳಿಯಲು ನಿರ್ಧರಿಸಿದೆ.
ರಾಂಚಿ(ಮಾ.09): ಆಸ್ಟ್ರೇಲಿಯಾ ವಿರುದ್ಧದ ರಾಂಚಿ ಪಂದ್ಯ ಸೋತ ಭಾರತ ಇದೀಗ 4ನೇ ಪಂದ್ಯದ ಗೆಲುವಿಗೆ ಗೇಮ್ ಪ್ಲಾನ್ ರೂಪಿಸುತ್ತಿದೆ. ಸದ್ಯ ಟೀಂ ಇಂಡಿಯಾ 2-1 ಅಂತರದ ಮುನ್ನಡೆಯಲ್ಲಿದೆ. ಇದೀಗ ಅಂತಿಮ 2 ಏಕದಿನ ಪಂದ್ಯಗಳಿಗೆ ತಂಡದಲ್ಲಿ ಬದಲಾವಣೆ ಮಾಡಲು ಟೀಂ ಮ್ಯಾನೇಜ್ಮೆಂಟ್ ನಿರ್ಧರಿಸಿದೆ.
ಇದನ್ನೂ ಓದಿ: ರಾಂಚಿ ಪಂದ್ಯ ಸೋತರೂ ಭಾರತೀಯರ ಮನ ಗೆದ್ದ ಟೀಂ ಇಂಡಿಯಾ!
ಆಸ್ಪ್ರೇಲಿಯಾ ವಿರುದ್ಧ ಅಂತಿಮ 2 ಏಕದಿನ ಪಂದ್ಯಗಳಿಗೆ ಎಂ.ಎಸ್.ಧೋನಿಗೆ ವಿಶ್ರಾಂತಿ ನೀಡುವುದಾಗಿ ಭಾರತ ತಂಡದ ಬ್ಯಾಟಿಂಗ್ ಕೋಚ್ ಸಂಜಯ್ ಬಾಂಗರ್ ತಿಳಿಸಿದ್ದಾರೆ. 3ನೇ ಏಕದಿನದಲ್ಲಿ ತಂಡ ಸೋಲುಂಡ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಧೋನಿ ವಿಶ್ರಾಂತಿ ಬಯಸಿದ್ದಾರೆ ಎನ್ನುವ ವಿಚಾರ ಬಹಿರಂಗಗೊಳಿಸಿದರು.
ಇದನ್ನೂ ಓದಿ: INDvsAUS:ಹುತಾತ್ಮ ಯೋಧರಿಗೆ ವೀಕ್ಷಕ ವಿವರಣೆಗಾರರ ಸಲಾಂ!
ಧೋನಿ ಸ್ಥಾನದಲ್ಲಿ ರಿಷಭ್ ಪಂತ್ ಆಡಲಿದ್ದಾರೆ. ಮಾರ್ಚ್ 10 ರಂದು ಮೊಹಾಲಿಯಲ್ಲಿ 4ನೇ ಏಕದಿನ ಪಂದ್ಯ ಆಯೋಜಿಸಿದ್ದರೆ, 5ನೇ ಹಾಗೂ ಅಂತಿಮ ಏಕದಿನ ಪಂದ್ಯ ದೆಹಲಿಯಲ್ಲಿ ನಡೆಯಲಿದೆ.