
ನಾಗ್ಪುರ(ಮಾ.05): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 2ನೇ ಏಕದಿನ ಪಂದ್ಯದಲ್ಲಿನ ಘಟನೆ ಇದೀಗ ಭಾರಿ ವೈರಲ್ ಆಗಿದೆ. ಟೀಂ ಇಂಡಿಯಾ ಬ್ಯಾಟಿಂಗ್ ಮುಗಿಸಿ, ಫೀಲ್ಡಿಂಗ್ ಇಳಿಯುತ್ತಿದ್ದಂತೆ, ಕ್ರೀಡಾಂಗಣದೊಳಕ್ಕೆ ನುಗ್ಗಿದ ಅಭಿಮಾನಿಗೆ ಎಂ.ಎಸ್. ಧೋನಿ ಚಮಕ್ ನೀಡಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ 2019: ಎಂ.ಎಸ್.ಧೋನಿಗೆ 4ನೇ ಕ್ರಮಾಂಕ?
ಟೀಂ ಇಂಡಿಯಾ ಫೀಲ್ಡಿಂಗ್ ಇಳಿಯುತ್ತಿದ್ದಂತೆ ಅಭಿಮಾನಿಯೊರ್ವ ಧೋನಿಯ ಪಾದ ಮುಟ್ಟಿ ನಮಸ್ಕರಿಸಲು ಮೈದಾನದೊಳಕ್ಕೆ ನುಗ್ಗಿದ್ದಾನೆ. ಧೋನಿ ಹತ್ತಿರ ಬಂದ ಅಭಿಮಾನಿ ಧೋನಿ ಜೊತೆ ಧೋನಿ ಆಟಕ್ಕೆ ಎಲ್ಲರೂ ನಕ್ಕು ಸುಸ್ತಾಗಿದ್ದಾರೆ. ರೋಹಿತ್ ಶರ್ಮಾ ಹಿಂಭಾಗದಲ್ಲಿ ಅವಿತುಕೊಂಡ ಧೋನಿ ಅಭಿಮಾನಿಯನ್ನ ಆಟಾಡಿಸಿದ್ದಾರೆ.
ಇದನ್ನೂ ಓದಿ: ಧೋನಿ ಹೇಳ್ದಂಗೆ ಕೇಳಿದ್ರೆ ಯಶಸ್ಸು ಖಚಿತ: ಜಾಧವ್
ಬಳಿಕ ಧೋನಿ ವೇಗವಾಗಿ ಮೈದಾನದಲ್ಲಿ ಓಡಿದ್ದಾರೆ. ಧೋನಿಯನ್ನು ಹಿಡಿಯಲು ಅಭಿಮಾನಿ ಕೂಡ ಓಡಿದ್ದಾರೆ. ಆದರೆ ಧೋನಿ ವೇಗಕ್ಕೆ ಅಭಿಮಾನಿ ಸುಸ್ತಾದ. ಪಿಚ್ ಬಳಿ ಬಂದಾಗ ಧೋನಿ ನಿಂತು ಬಿಟ್ಟರು. ಅಭಿಮಾನಿ ಪಿಚ್ ತುಳಿದು ಆವಾಂತರ ಮಾಡೋ ಬದಲು ಅಲ್ಲೇ ನಿಂತರು. ಧೋನಿಯನ್ನ ಅಪ್ಪಿಕೊಂಡು ಅಭಿಮಾನಿಯನ್ನ ಭದ್ರತಾ ಸಿಬ್ಬಂದಿಗಳು ಕರೆದೊಯ್ದರು. ಈ ವಿಡಿಯೋ ಇದೀಗ ಬಾರಿ ವೈರಲ್ ಆಗಿದೆ.
ಇದನ್ನೂ ಓದಿ: ಲಕ್ಕಿ ಬ್ಯಾಟ್’ಗೆ ಧೋನಿ ಗುಡ್’ಬೈ..! ಭಾರತೀಯ ಬ್ಯಾಟ್’ಗೆ ಜೈ..!
ಅಭಿಮಾನಿಗಳ ಜೊತೆ ಅಷ್ಟೇ ಸಲಿಗೆಯಿಂದ ಹಾಗೂ ಆತ್ಮೀಯದಿಂದ ನಡೆದುಕೊಂಡ ಧೋನಿಗೆ ಹ್ಯಾಟ್ಸ್ಆಫ್ ಹೇಳಿದ್ದಾರೆ. ಇದೇ ಕಾರಣಕ್ಕೆ ಧೋನಿ ಎಲ್ಲರಿಗೂ ಇಷ್ಟ ಆಗ್ತಾರೆ ಎಂದು ಟ್ವಿಟರ್‌ನಲ್ಲಿ ಅಭಿಮಾನಿಗಳು ಧೋನಿ ನಡೆಯನ್ನು ಕೊಂಡಾಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.