ಇಂಡೋ-ಆಸಿಸ್ ಕ್ರಿಕೆಟ್ ಸರಣಿ-ಎಲ್ಲಿ?ಯಾವಾಗ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್!

By Web DeskFirst Published Nov 19, 2018, 4:08 PM IST
Highlights

ಭಾರತ ಹಾಗೂ ಆಸ್ಟ್ರೇಲಿಯಾ ಮುಖಾಮುಖಿ ಕ್ರಿಕೆಟ್ ಅಭಿಮಾನಿಗಳ ಕುತೂಹಲವನ್ನ ಇಮ್ಮಡಿಗೊಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಉಭಯ ತಂಡಗಳಿಗೂ ಇದು ಪ್ರತಿಷ್ಠೆಯ ಕದನ. ಹೀಗಾಗಿ ಇಲ್ಲಿ ಯಾರು ಕೂಡ  ಸೋಲನ್ನ ಸಹಿಸಲ್ಲ. ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸರಣಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

ಬ್ರಿಸ್ಬೇನ್(ನ.19): ಭಾರತ ಹಾಗೂ ಆಸ್ಟ್ರೇಲಿಯಾ ಸರಣಿಗೆ ಕೌಂಟ್‌ಡೌನ್ ಶುರುವಾಗಿದೆ. ಬರೋಬ್ಬರಿ 2 ತಿಂಗಳು ನಡೆಯಲಿರುವ ಈ ಪ್ರತಿಷ್ಠಿತ ಸರಣಿ ನ.21 ರಿಂದ ಆರಂಭವಾಗಲಿದೆ. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಈಗಾಗಲೇ ಆಸಿಸ್ ನಾಡಿನಲ್ಲಿ ಬೀಡುಬಿಟ್ಟಿದೆ. 

 ಇದನ್ನೂ ಓದಿ: ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾದ ಟೀಂ ಇಂಡಿಯಾ ಕ್ರಿಕೆಟಿಗರು ಯಾರು?

ಬಾಲ್ ಟ್ಯಾಂಪರಿಂಗ್ ಪ್ರಕರಣದಿಂದ ನಿಷೇಧಕ್ಕೊಳಗಾಗಿರುವ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಅನುಪಸ್ಥಿತಿಯಿಂದ ಆಸ್ಟ್ರೇಲಿಯಾ ಕಂಗಾಲಾಗಿದೆ. ಇದೇ ಅವಕಾಶವನ್ನ ಸರಿಯಾಗಿ ಉಪಯೋಗಿಸಿಕೊಳ್ಳಲು ಟೀಂ ಇಂಡಿಯಾ ರೆಡಿಯಾಗಿದೆ.  3 ಟಿ20, 4 ಟೆಸ್ಟ್ ಹಾಗೂ 3 ಏಕದಿನ ಪಂದ್ಯಗಳ ಸರಣಿ ನವೆಂಬರ್ 21 ರಿಂದ ಜನವರಿ 18ರವರೆಗೆ ನಡೆಯಲಿದೆ. ಟಿ20 ಸರಣಿ ಮುಗಿದ ಬಳಿಕ ನ.29 ರಿಂದ ಡಿ.01ರ ವರೆಗೆ ಅಭ್ಯಾಸ ಪಂದ್ಯ ಕೂಡ ನಡೆಯಲಿದೆ.

ಭಾರತ-ಆಸ್ಟ್ರೇಲಿಯಾ ಟಿ20 ಸರಣಿ:

ದಿನಾಂಕ ಪಂದ್ಯ-ಕ್ರೀಡಾಂಗಣ ಸಮಯ
ನ.21 1ನೇ ಟಿ20- ಬ್ರಿಸ್ಬೇನ್ 1.20 PM
ನ.23 2ನೇ ಟಿ20 -ಮೆಲ್ಬೋರ್ನ್ 1.20 PM
ನ.25 3ನೇ ಟಿ20- ಸಿಡ್ನಿ  1.20 PM

 

ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ:

ದಿನಾಂಕ ಪಂದ್ಯ-ಕ್ರೀಡಾಂಗಣ ಸಮಯ
ಡಿ.6 ರಿಂದ ಡಿ.10 (2018) 1ನೇ ಟೆಸ್ಟ್ - ಆಡಿಲೇಡ್ 5.30AM
ಡಿ.14 ರಿಂದ ಡಿ.18 (2018) 2ನೇ ಟೆಸ್ಟ್ - ಪರ್ತ್ 7.50 AM
ಡಿ.26 ರಿಂದ ಡಿ.30 (2018) 3ನೇ ಟೆಸ್ಟ್ -ಮೆಲ್ಬೋರ್ನ್ 5.00 AM
ಜ.03 ರಿಂದ ಜ.07 (2019) 4ನೇ ಟೆಸ್ಟ್- ಸಿಡ್ನಿ 5.00 AM

 

ಭಾರತ-ಆಸ್ಟ್ರೇಲಿಯಾ ಏಕದಿನ ಸರಣಿ:

ದಿನಾಂಕ ಪಂದ್ಯ-ಕ್ರೀಡಾಂಗಣ ಸಮಯ
ಜ.12, 2018 1ನೇ ಏಕದಿನ, ಸಿಡ್ನಿ 8.50 AM
ಜ.15, 2018 2ನೇ ಏಕದಿನ, ಆಡಿಲೇಡ್ 8.50 AM
ಜ.18, 2018 3ನೇ ಏಕದಿನ, ಮೆಲ್ಬೋರ್ನ್ 8.50 AM

ಇದನ್ನೂ ಓದಿ: ಇಂಡೋ-ಆಸಿಸ್ ಕ್ರಿಕೆಟ್: ಕಾಂಗರೂಗಳಿಗೆ ಶುರುವಾಯ್ತು ಹಿಟ್‌ಮ್ಯಾನ್ ಭಯ!

click me!
Last Updated Nov 19, 2018, 4:26 PM IST
click me!