2019ರ ಐಪಿಎಲ್ ಟೂರ್ನಿ ಮುನ್ನವೇ ಆರ್‌ಸಿಬಿ ಎಡವಟ್ಟು!

By Web DeskFirst Published Nov 19, 2018, 2:09 PM IST
Highlights

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 2019ರ ಐಪಿಎಲ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಆದರೆ ಟೂರ್ನಿ ಆರಂಭಕ್ಕೂ ಮುನ್ನವೇ ಆರ್‌ಸಿಬಿ ಎರಡು ತಪ್ಪು ಮಾಡಿದೆ. ಅಷ್ಟಕ್ಕೂ ಆರ್‌ಸಿಬಿ ಮಾಡಿದ ತಪ್ಪೇನು? ಇಲ್ಲಿದೆ ಹೆಚ್ಚಿನ ವಿವರ.
 

ಬೆಂಗಳೂರು(ನ.19): 2019ರ ಐಪಿಎಲ್ ಟೂರ್ನಿಗೆ ತಯಾರಿ ಆರಂಭಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತಂಡದಲ್ಲಿ ಕೆಲ ಬದಲಾವಣೆ ಮಾಡಿದೆ. ಆದರೆ ಇದೀಗ ಈ ಬದಲಾವಣೆ ವಿರುದ್ದ ಅಸಮಧಾನ ವ್ಯಕ್ತವಾಗಿದೆ. ಆಟಗಾರರ ರಿಟೈನ್ ಹಾಗೂ ರಿಲೀಸ್‌ನಲ್ಲಿ ತಪ್ಪು ಮಾಡಿದೆ ಅನ್ನೋ ಮಾತುಗಳು ಕೇಳಿಬಂದಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ತಪ್ಪು ಪವನ್ ನೇಗಿಯನ್ನ ತಂಡದಲ್ಲಿ ಉಳಿಸಿಕೊಂಡಿದ್ದು. 2018ರಲ್ಲಿ ಆರ್‌ಸಿಬಿ ಪರ ಕೇವಲ 2 ಪಂದ್ಯ ಆಡಿದ ಪವನ್ ನೇಗಿ ಕೇವಲ 1 ವಿಕೆಟ್ ಕಬಳಿಸಿದ್ದಾರೆ. ಇನ್ನು 2016ರಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಬರೋಬ್ಬರಿ 8.5 ಕೋಟಿ ರೂಪಾಯಿ ನೀಡಿ ಪವನ್ ನೇಗಿ ಖರೀದಿ ಮಾಡಿತ್ತು. ಆದರೆ 8 ಪಂದ್ಯದಿಂದ ಪವನ್ ನೇಗಿ ಗಳಿಸಿದ್ದು 1 ವಿಕೆಟ್ ಮಾತ್ರ.

ಕಳಪೆ ಪ್ರದರ್ಶನ ಹಾಗೂ ಇದುವರೆಗೂ ಇಂಪಾಕ್ಟ್ ಪ್ರದರ್ಶನ ನೀಡಿದ ಪವನ್ ನೇಗಿಯನ್ನ ಉಳಿಸಿಕೊಂಡಿರುವ ಆರ್‌ಸಿಬಿ, ವಿದೇಶಿ ಕ್ರಿಕೆಟಿಗ ಕ್ರಿಸ್ ವೋಕ್ಸ್‌ರನ್ನ ಕೈಬಿಟ್ಟಿದೆ. ಆಲ್ರೌಂಡ್ ಪ್ರದರ್ಶನ ನೀಡಿರುವ ಕ್ರಿಸ್ ವೋಕ್ಸ್ ಇತ್ತೀಚೆಗೆ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆದರೆ ವೋಕ್ಸ್‌ರನ್ನ ಉಳಿಸಿಕೊಂಡಿಲ್ಲ. ಈ ಎರಡು ನಿರ್ಧಾರಗಳು ಆರ್‌ಸಿಬಿಗೆ ಹೊಡೆತ ನೀಡಲಿದೆ ಅನ್ನೋ ಮಾತು ಬಲವಾಗಿ ಕೇಳಿಬರುತ್ತಿದೆ.

click me!
Last Updated Nov 19, 2018, 3:09 PM IST
click me!