ಭಾರತ-ಆಸ್ಟ್ರೇಲಿಯಾ ಬೆಂಗಳೂರು ಟಿ20 ಪಂದ್ಯ-ಎಲ್ಲಿ ಸಿಗಲಿದೆ ಟಿಕೆಟ್?

Published : Feb 15, 2019, 08:57 PM IST
ಭಾರತ-ಆಸ್ಟ್ರೇಲಿಯಾ ಬೆಂಗಳೂರು ಟಿ20 ಪಂದ್ಯ-ಎಲ್ಲಿ ಸಿಗಲಿದೆ ಟಿಕೆಟ್?

ಸಾರಾಂಶ

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 2ನೇ ಟಿ20 ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದ ಟಿಕೆಟ್ ಎಲ್ಲಿ ಸಿಗಲಿದೆ? ಈ ಕುರಿತ ಮಾಹಿತಿ ಇಲ್ಲಿದೆ.

ಬೆಂಗಳೂರು(ಫೆ.15): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ಸರಣಿ ಜ್ವರ ಹೆಚ್ಚಾಗುತ್ತಿದೆ. ನ್ಯೂಜಿಲೆಂಡ್ ಪ್ರವಾಸದ ಬಳಿಕ ವಿಶ್ರಾಂತಿಗೆ ಜಾರಿರುವ ಟೀಂ ಇಂಡಿಯಾ ಇದೀಗ ಅಭ್ಯಾಸ ಆರಂಭಿಸಲಿದೆ. ಆಯ್ಕೆ ಸಮಿತಿ ಬಲಿಷ್ಠ ಭಾರತ ತಂಡವನ್ನ ಪ್ರಕಟಿಸಿದೆ. ಫೆ.24 ರಿಂದ ಆಸಿಸ್ ವಿರುದ್ಧದ ಸರಣಿ ಆರಂಭಗೊಳ್ಳಲಿದೆ.

ಇದನ್ನೂ ಓದಿ:ಭಾರತ-ಆಸ್ಟ್ರೇಲಿಯಾ ಟಿ20, ಏಕದಿನ ಸರಣಿ ವೇಳಾಪಟ್ಟಿ ಇಲ್ಲಿದೆ!

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2ನೇ ಟಿ20 ಪಂದ್ಯ ನಡೆಯಲಿದೆ. ಫೆ.16ರಿಂದ ಆನ್‌ಲೈನ್ ಟಿಕೆಟ್ ಮಾರಾಟ ಆರಂಭಗೊಳ್ಳಲಿದೆ. ಬೆಳಗ್ಗೆ 10 ಗಂಟೆಯಿಂದ ಆನ್‌ಲೈನ್ ಮಾರಾಟ ಆರಂಭವಾಗಲಿದೆ. ಇನ್ನು ಫೆ.19 ರಿಂದ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಇರೋ ಗೇಟ್ ಕೌಂಟರ್‌ಗಳು ಪಂದ್ಯದ ಟಿಕೆಟ್ ಮಾರಾಟ ಆರಂಭವಾಗಲಿದೆ.

ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟ!

750 ರೂಪಾಯಿಯಿಂದ 10,000 ರೂಪಾಯಿ ವರೆಗಿನ ಟಿಕೆಟ್‌ಗಳು ಲಭ್ಯವಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮಾಧ್ಯಮ ವಕ್ತಾರ ವಿನಯ್ ಮೃತ್ಯುಂಜಯ್ ಹೇಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಭಾರತ 2 ಟಿ20 ಹಾಗೂ 5 ಏಕದಿನ ಪಂದ್ಯಗಳ ಸರಣಿ ಆಡಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಚಿನ್ ತೆಂಡೂಲ್ಕರ್ ಮತ್ತೊಂದು ದಾಖಲೆ ನುಚ್ಚುನೂರು; ಕೇವಲ 521 ಇನ್ನಿಂಗ್ಸ್‌ನಲ್ಲೇ ಹೊಸ ದಾಖಲೆ ಬರೆದ ಜೋ ರೂಟ್..! ಆದ್ರೂ ಕೊಹ್ಲಿ ರೆಕಾರ್ಡ್ ಸೇಫ್
BCCI Chief Selector: ಅಜಿತ್ ಅಗರ್ಕರ್ ರಾಜೀನಾಮೆ ಖಚಿತ..! ಹೊಸ ಅಪ್‌ಡೇಟ್ ಕೊಟ್ಟ ಬಿಸಿಸಿಐ, ಯಾರಾಗ್ತಾರೆ ಮುಂದಿನ ಚೀಫ್ ಸೆಲೆಕ್ಟರ್?