U-23 ಸರಣಿಗೆ ಭಾರತ ತಂಡ ಪ್ರಕಟ; ಇಬ್ಬರು ಕನ್ನಡಿಗರಿಗೆ ಸ್ಥಾನ!

Published : Aug 20, 2019, 05:52 PM IST
U-23 ಸರಣಿಗೆ ಭಾರತ ತಂಡ ಪ್ರಕಟ; ಇಬ್ಬರು ಕನ್ನಡಿಗರಿಗೆ ಸ್ಥಾನ!

ಸಾರಾಂಶ

ಅಂಡರ್ 23 ಭಾರತ ತಂಡ ಪ್ರಕಟಗೊಂಡಿದೆ. ಸೆಪ್ಟೆಂಬರ್ 19ರಿಂದ ಆರಂಭಗೊಳ್ಳಲಿರುವ ಬಾಂಗ್ಲಾದೇಶ ವಿರುದ್ಧದ ಸರಣಿಗೆ ತಂಡ ಪ್ರಕಟಿಸಲಾಗಿದೆ. ಈ ತಂಡದಲ್ಲಿ ಇಬ್ಬರು ಕನ್ನಡಿಗರು ಸ್ಥಾನ  ಪಡೆದಿದ್ದಾರೆ.

ಮುಂಬೈ(ಆ.20): ಬಾಂಗ್ಲಾದೇಶ ವಿರುದ್ಧದ ಅಂಡರ್ -23 ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಸೆಪ್ಟೆಂಬರ್ 19 ರಿಂದ 27ರ ವರೆಗೆ ನಡೆಯಲಿರುವ 5 ಏಕದಿನ ಪಂದ್ಯಕ್ಕೆ ಭಾರತ ಕಿರಿಯರ ತಂಡವನ್ನು ಪ್ರಕಟಿಸಲಾಗಿದ್ದು, ಪ್ರಿಯಾಮ್ ಗರ್ಗ್‌ ನಾಯಕನಾಗಿ ಆಯ್ಕೆಯಾಗಿದ್ದಾರೆ. ವಿಶೇಷ ಅಂದರೆ  ಕರ್ನಾಟಕದ ಪ್ರತಿಭಾನ್ವಿತ ಕ್ರಿಕೆಟಿಗರಾದ ಶುಭಾಂಗ್ ಹೆಗ್ಡೆ ಹಾಗೂ ಬಿಆರ್ ಶರತ್  ಅಂಡರ್ 23 ತಂಡಕ್ಕೆ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಕ್ಯಾಪ್ಟನ್ ನಾಪತ್ತೆ: ಟೂರ್ನಿ ಆಡಲು ಆಟಗಾರರೇ ಇಲ್ಲ..!

ಭಾರತ ಅಂಡರ್ -23 ತಂಡ
ಪ್ರಿಯಾಮ್ ಗರ್ಗ್(ನಾಯಕ), ಯಶಸ್ವಿ ಜೈಸ್ವಾಲ್, ಮಾಧವ್ ಕೌಶಿಕ್, ಬಿಆರ್ ಶರತ್(ವಿಕೆಟ್ ಕೀಪರ್), ಸಮರ್ಥ್ ವ್ಯಾಸ್, ಆರ್ಯನ್ ಜಯಲ್(ವಿಕೆಟ್ ಕೀಪರ್), ರಿತ್ವಿಕ್ ರಾಯ್ ಚೌಧರಿ, ಕುಮಾರ್ ಸೂರಜ್, ಆತೀಥ್ ಸೇಥ್, ಶುಭಾಂಗ್ ಹೆಗ್ಡೆ, ಹೃತೀಕ್ ಶೊಕೀನ್, ದ್ರುಶಾಂತ್ ಸೋನಿ, ಅರ್ಶದೀಪ್ ಸಿಂಗ್, ಕಾರ್ಕಿತ್ ತ್ಯಾಗಿ, ಹರ್ಪೀತ್ ಬ್ರಾರ್

ಇದನ್ನೂ ಓದಿ: ಭಾರತ ‘ಎ’ ತಂಡಕ್ಕೆ ಮನೀಶ್‌ ಪಾಂಡೆ ನಾಯಕ

ಭಾರತ-ಭಾಂಗ್ಲಾದೇಶ ಏಕದಿನ ಸರಣಿ
ಸೆ.19 - 1ನೇ ಏಕದಿನ : ರಾಯ್‌ಪುರ
ಸೆ.21 - 2ನೇ ಏಕದಿನ  : ರಾಯ್‌ಪುರ
ಸೆ.23 - 3ನೇ ಏಕದಿನ : ರಾಯ್‌ಪುರ
ಸೆ.25 - 4ನೇ ಏಕದಿನ : ರಾಯ್‌ಪುರ
ಸೆ.27 - 5ನೇ ಏಕದಿನ : ರಾಯ್‌ಪುರ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?