ಟೀಂ ಇಂಡಿಯಾ ಎದುರಿನ ಮೊದಲೆರಡು ಪಂದ್ಯಕ್ಕೆ ವಿಂಡೀಸ್ ತಂಡ ಪ್ರಕಟ

By Suvarna Web DeskFirst Published Jun 19, 2017, 8:02 PM IST
Highlights

ವೆಸ್ಟ್'ಇಂಡಿಸ್ ತಂಡ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ ಅರ್ಹತೆಯನ್ನೇ ಕಳೆದುಕೊಂಡಿತ್ತು.

ಕಿಂಗ್ಸ್‌ಟನ್(ಜೂ.19): ಭಾರತ ವಿರುದ್ಧದ ಜೂ.23ರಿಂದ ಆರಂಭಗೊಳ್ಳಲಿರುವ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಿಗೆ ವೆಸ್ಟ್‌ಇಂಡೀಸ್ ಕ್ರಿಕೆಟ್ ಮಂಡಳಿಯು 13 ಆಟಗಾರರ ತಂಡವನ್ನು ಪ್ರಕಟಿಸಿದೆ.

ಕೆರಿಬಿಯನ್ ತಂಡ ತವರಿನಲ್ಲಿ ವಿರಾಟ್ ಕೊಹ್ಲಿ ಪಡೆ ವಿರುದ್ಧ 5 ಏಕದಿನ ಹಾಗೂ ಒಂದು ಟಿ20 ಪಂದ್ಯದ ಸರಣಿಯನ್ನು ಆಡಲಿದೆ.

ನಾಯಕರಾಗಿ ಜೇಸನ್ ಹೋಲ್ಡರ್ ಮುಂದುವರಿದಿದ್ದು, ಇನ್ನುಳಿದಂತೆ ಆಫ್ಘಾನಿಸ್ತಾನ ವಿರುದ್ಧ ಆಡಿದ ತಂಡವನ್ನೇ ಉಳಿಸಿಕೊಳ್ಳಲಾಗಿದೆ. ಆಫ್ಘಾನಿಸ್ತಾನ ಸರಣಿ ವೇಳೆ ಗಾಯಗೊಂಡಿದ್ದ ವೇಗಿ ಶಾನನ್ ಗೇಬ್ರಿಯಲ್‌'ಗೆ ವಿಶ್ರಾಂತಿ ನೀಡಲಾಗಿದೆ.

ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಫೈನಲ್'ನಲ್ಲಿ ಸೋಲಿನ ಬಳಿಕ ವೆಸ್ಟ್'ಇಂಡಿಸ್ ಸರಣಿಯತ್ತ ಗಮನ ಹರಿಸಿದೆ. ವೆಸ್ಟ್'ಇಂಡಿಸ್ ತಂಡ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ ಅರ್ಹತೆಯನ್ನೇ ಕಳೆದುಕೊಂಡಿತ್ತು.

ತಂಡದ ವಿವರ: ಜೇಸನ್ ಹೋಲ್ಡರ್ (ನಾಯಕ), ದೇವೇಂದ್ರ ಬಿಶೊ, ಜೋನಾಥಾನ್ ಕಾರ್ಟರ್, ರಸ್ಟನ್ ಚೇಸ್, ಮಿಗುಯೆಲ್ ಕಮಿನ್ಸ್, ಶಾಯಿ ಹೋಪ್ (ಕೀಪರ್), ಅಲ್ಜಾರಿ ಜೋಸೆಫ್, ಇವಿನ್ ಲೂಯಿಸ್, ಜೇಸನ್ ಮೊಹಮ್ಮದ್, ಆಶ್ಲೆ ನರ್ಸ್, ಕೀರನ್ ಪೊವೆಲ್, ರೊವ್ಮನ್ ಪೊವೆಲ್, ಕೆಸ್ರಿಕ್ ವಿಲಿಯಮ್ಸ್.

ಭಾರತ ತಂಡದ ವಿವರ: ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ರಿಶಬ್ ಪಂತ್, ಅಜಿಂಕ್ಯ ರಹಾನೆ, ಎಂ.ಎಸ್ ಧೋನಿ, ಯುವರಾಜ್ ಸಿಂಗ್, ಕೇದಾರ್ ಜಾಧವ್, ಹಾರ್ಧಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ಭುವನೇಶ್ವರ್ ಕುಮಾರ್, ಕುಲ್ದೀಪ್ ಯಾದವ್, ದಿನೇಶ್ ಕಾರ್ತಿಕ್.

ಕಿಂಗ್ಸ್‌ಟನ್(ಜೂ.19): ಭಾರತ ವಿರುದ್ಧದ ಜೂ.23ರಿಂದ ಆರಂಭಗೊಳ್ಳಲಿರುವ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಿಗೆ ವೆಸ್ಟ್‌ಇಂಡೀಸ್ ಕ್ರಿಕೆಟ್ ಮಂಡಳಿಯು 13 ಆಟಗಾರರ ತಂಡವನ್ನು ಪ್ರಕಟಿಸಿದೆ.

ಕೆರಿಬಿಯನ್ ತಂಡ ತವರಿನಲ್ಲಿ ವಿರಾಟ್ ಕೊಹ್ಲಿ ಪಡೆ ವಿರುದ್ಧ 5 ಏಕದಿನ ಹಾಗೂ ಒಂದು ಟಿ20 ಪಂದ್ಯದ ಸರಣಿಯನ್ನು ಆಡಲಿದೆ.

ನಾಯಕರಾಗಿ ಜೇಸನ್ ಹೋಲ್ಡರ್ ಮುಂದುವರಿದಿದ್ದು, ಇನ್ನುಳಿದಂತೆ ಆಫ್ಘಾನಿಸ್ತಾನ ವಿರುದ್ಧ ಆಡಿದ ತಂಡವನ್ನೇ ಉಳಿಸಿಕೊಳ್ಳಲಾಗಿದೆ. ಆಫ್ಘಾನಿಸ್ತಾನ ಸರಣಿ ವೇಳೆ ಗಾಯಗೊಂಡಿದ್ದ ವೇಗಿ ಶಾನನ್ ಗೇಬ್ರಿಯಲ್‌'ಗೆ ವಿಶ್ರಾಂತಿ ನೀಡಲಾಗಿದೆ.

ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಫೈನಲ್'ನಲ್ಲಿ ಸೋಲಿನ ಬಳಿಕ ವೆಸ್ಟ್'ಇಂಡಿಸ್ ಸರಣಿಯತ್ತ ಗಮನ ಹರಿಸಿದೆ. ವೆಸ್ಟ್'ಇಂಡಿಸ್ ತಂಡ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುವ ಅರ್ಹತೆಯನ್ನೇ ಕಳೆದುಕೊಂಡಿತ್ತು. ಮೇಲ್ನೋಟಕ್ಕೆ ವೆಸ್ಟ್'ಇಂಡಿಸ್ ತಂಡವು ಸಾಕಷ್ಟು ಅನನುಭವಿ ಆಟಗಾರರನ್ನು ಹೊಂದಿದ್ದರೂ, ಯಾವುದೇ ಸಂದರ್ಭದಲ್ಲೂ ಅಚ್ಚರಿ ಫಲಿತಾಂಶ ನೀಡುವ ಸಾಮರ್ಥ್ಯ ಹೊಂದಿದೆ.

click me!