ದುಬೈ ಮಾಸ್ಟರ್ಸ್ ಕಬಡ್ಡಿ: ಸೌ.ಕೊರಿಯಾ ಮಣಿಸಿ ಫೈನಲ್ ಪ್ರವೇಶಿಸಿದ ಭಾರತ

First Published Jun 29, 2018, 10:29 PM IST
Highlights

ದುಬೈ ಮಾಸ್ಟರ್ಸ್ ಕಬಡ್ಡಿ ಟೂರ್ನಿಯಲ್ಲಿ ಭಾರತ ಸೋಲಿಲ್ಲದ ಸರದಾನಾಗಿ ಫೈನಲ್ ಪ್ರವೇಶಿಸಿದೆ. ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಕೊರಿಯಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಭಾರತ ಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ರೋಚಕ ಪಂದ್ಯದ ಹೈಲೈಟ್ಸ್ ಇಲ್ಲಿದೆ.

ದುಬೈ(ಜೂ.29): ಕಬಡ್ಡಿ ಮಾಸ್ಟರ್ಸ್ ದುಬೈ ಟೂರ್ನಿಯಲ್ಲಿ ಭಾರತ ಫೈನಲ್ ಪ್ರವೇಶಿಸಿದೆ. ಸೆಮಿಫೈನಲ್ ಪಂದ್ಯದಲ್ಲಿ ಸೌತ್ ಕೊರಿಯಾ ತಂಡವನ್ನ 36 -20 ಅಂಕಗಳ ಅಂತರದಲ್ಲಿ ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಫೈನಲ್ ಪಂದ್ಯದಲ್ಲಿ ಭಾರತ, ಇರಾನ್ ತಂಡವನ್ನ ಎದುರಿಸಲಿದೆ.

ಮೊದಲು ರೈಡ್ ಮಾಡಿದ ಸೌತ್ ಕೊರಿಯಾ ಆರಂಭದಲ್ಲೇ ಅಂಕ ಖಾತೆ ತೆರೆಯಿತು. ಭಾರತ ಮೊದಲ ರೈಡ್‌ನಲ್ಲಿ ಅಂಕ ಪಡೆಯದೇ ವಾಪಸ್ಸಾಯಿತು. ಆದರೆ ಅಜಯ್ ಠಾಕೂರ್ ಭಾರತಕ್ಕೆ ಮೊದಲ ಅಂಕ ತಂದುಕೊಟ್ಟರು. 

7-3 ಅಂಕಗಳ ಮುನ್ನಡೆ  ಸಾಧಿಸಿದ  ಸೌತ್ ಕೊರಿಯಾ ಭಾರತೀಯ ಪಾಳಯದಲ್ಲಿ ಆತಂಕಕ್ಕೆ ಸೃಷ್ಟಿಸಿತು. ಆದರೆ ಅಜಯ್ ಠಾಕೂರ್ ಸೂಪರ್ ರೈಡ್ ನಿಂದ ಭಾರತ ಸಮಭಲಗೊಳಿಸಿತು. ಮೋನು ಗೊಯತ್  ರೈಡ್‌ನಿಂದ ಭಾರತ ಮುನ್ನಡೆ ಸಾಧಿಸಿತು. ಮುನ್ನಡೆ ಬಳಿಕ ಭಾರತ ಎಂದಿನ ಆಟಕ್ಕೆ ಮರಳಿತು. ಸೂಪರ್ ರೈಡ್, ಅದ್ಬುತ ಟ್ಯಾಕಲ್ ಮೂಲಕ ಮೊದಲಾರ್ಧದ ಅಂತ್ಯದಲ್ಲಿ 17-10 ಅಂಕಗಳ ಮುನ್ನಡೆ ಸಾಧಿಸಿತು. 

ದ್ವಿತಿಯಾರ್ಧದ ಆರಂಭದಲ್ಲೇ ಸೌತ್ ಕೊರಿಯಾ ತಂಡವನ್ನ ಆಲೌಟ್ ಮಾಡಿದ ಭಾರತ ಮುನ್ನಡೆ ಅಂತರವನ್ನ ಹೆಚ್ಚಿಸಿತು. ಅಂತ್ಯದಲ್ಲಿ ಭಾರತ 36-20 ಅಂಕಗಳ ಅಂತರದಲ್ಲಿ ಸೌತ್ ಕೊರಿಯಾ ತಂಡವನ್ನ ಮಣಿಸಿ ಕಬಡ್ಡಿ ಮಾಸ್ಟರ್ಸ್ ದುಬೈ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತು. ಕಬಡ್ಡಿ ಮಾಸ್ಟರ್ಸ್ ದುಬೈ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ, ಇರಾನ್ ತಂಡವನ್ನ ಎದುರಿಸಲಿದೆ. ನಾಳೆ(ಜೂ.30) ರಾತ್ರಿ 8 ಗಂಟೆಗೆ ನಡೆಯಲಿದೆ.
 

click me!