ಭಾರತ-ಐರ್ಲೆಂಡ್ ಟಿ20: ಐರ್ಲೆಂಡ್ ಗೆಲುವಿಗೆ 214 ರನ್ ಟಾರ್ಗೆಟ್

First Published Jun 29, 2018, 10:17 PM IST
Highlights

ಐರ್ಲೆಂಡ್ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ 213 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ. ಈ ಮೂಲಕ ಸರಣಿ ಕ್ಲೀನ್ ಸ್ವೀಪ್ ಗೆಲುವಿನ ಸೂಚನೆ ನೀಡಿದೆ. ಟೀಂ ಇಂಡಿಯಾ ಬ್ಯಾಟಿಂಗ್ ಹೈಲೈಟ್ಸ್ ಇಲ್ಲಿದೆ.

ಡಬ್ಲಿನ್(ಜೂ.29): ಐರ್ಲೆಂಡ್ ವಿರುದ್ಧದ 2ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಭಾರತ 4 ವಿಕೆಟ್ ನಷ್ಟಕ್ಕೆ 213 ರನ್ ಸಿಡಿಸಿದೆ. ಈ ಮೂಲಕ ಐರ್ಲೆಂಡ್ ಗೆಲುವಿಗೆ 214 ರನ್ ಟಾರ್ಗೆಟ್ ನೀಡಿದೆ.

ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ ಆರಂಭದಲ್ಲೇ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡಿತು. ಆದರೆ ಮೊದಲ ಟಿ20 ಪಂದ್ಯದಲ್ಲಿ ಅವಕಾಶ ವಂಚಿತರಾದ ರಾಹುಲ್, ದ್ವಿತೀಯ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ರಾಹುಲ್ 28 ಎಸೆತದಲ್ಲಿ ರಾಹುಲ್ ಹಾಫ್ ಸೆಂಚುರಿ ಬಾರಿಸಿದರು. ಆದರೆ ಅಬ್ಬರಿಸಿದ ರಾಹುಲ್ 36 ಎಸೆತದಲ್ಲಿ 3 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್ ನೆರವಿನಿಂದ 70 ರನ್ ಸಿಡಿಸಿ ಔಟಾದರು. 

Latest Videos

ರಾಹುಲ್ ಬೆನ್ನಲ್ಲೇ ರೋಹಿತ್ ಶರ್ಮಾ ವಿಕೆಟ್ ಕೈಚೆಲ್ಲಿದರು. ರೋಹಿತ್ ಶೂನ್ಯ ಸುತ್ತಿದರೆ, ಮೊದಲ ಪಂದ್ಯದಲ್ಲಿ ನಿರಾಸೆ ಅನುಭವಿಸಿದ ಸುರೇಶ್ ರೈನಾ, 2ನೇ ಪಂದ್ಯದಲ್ಲಿ ಅಬ್ಬರಿಸಿದರು. 45 ಎಸೆತದಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 69 ರನ್ ಸಿಡಿಸಿ ಔಟಾದರು.  

ಅಂತಿಮ ಹಂತದಲ್ಲಿ ಕನ್ನಡಿಗ ಮನೀಶ್ ಪಾಂಡೆ ಅಜೇಯ 21 ರನ್ ಸಿಡಿಸಿದರೆ, ಹಾರ್ದಿಕ್ ಪಾಂಡ್ಯ ಕೇವಲ 9 ಎಸೆತದಲ್ಲಿ 1 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ ಅಜೇಯ 32 ರನ್ ಸಿಡಿಸಿದರು. ಈ ಮೂಲಕ ಭಾರತ 4 ವಿಕೆಟ್ ನಷ್ಟಕ್ಕೆ 213 ರನ್ ಸಿಡಿಸಿತು. ಐರ್ಲೆಂಡ್ ಪರ ಕೆವಿನ್ ಒಬ್ರಿಯಾನ್ 3 ಹಾಗೂ ಪೀಟರ್ ಚೇಸ್ 1 ವಿಕೆಟ್ ಪಡೆದರು.

click me!