ಭಾರತ-ಐರ್ಲೆಂಡ್ ಟಿ20: ಅರ್ಧಶತಕ ಸಿಡಿಸಿ ಕೆಎಲ್ ರಾಹುಲ್ ಔಟ್

First Published Jun 29, 2018, 9:36 PM IST
Highlights

ಐರ್ಲೆಂಡ್ ವಿರುದ್ಧದ 2ನೇ ಟಿ220 ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಮೂಲಕ ಅಭಿಮಾನಿಗಳ ಭರಪೂರ ಮನರಂಜನೆ ನೀಡಿದ್ದಾರೆ. ಟೀಂ ಇಂಡಿಯಾ ಬ್ಯಾಟಿಂಗ್ ಹೈಲೈಟ್ಸ್ ಇಲ್ಲಿದೆ.
 

ಡಬ್ಲಿನ್(ಜೂ.29): ಐರ್ಲೆಂಡ್ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಆರಂಭಿಕ ಆಘಾತ ಅನುಭವಿಸಿದ ಭಾರತ ಇದೀಗ ಚೇತರಿಸಿಕೊಂಡಿದೆ. ನಾಯಕ ವಿರಾಟ್ ಕೊಹ್ಲಿ 9 ರನ್‌ಗಳಿಸಿ ನಿರ್ಗಮಿಸಿದ ಬಳಿಕ, ಕೆಎಲ್ ರಾಹುಲ್ ಹಾಗೂ ಸುರೇಶ್ ರೈನಾ ಉತ್ತಮ ಜೊತೆಯಾಟ ನೀಡಿದರು.

ಮೊದಲ ಟಿ20 ಪಂದ್ಯದಲ್ಲಿ ಅವಕಾಶ ವಂಚಿತರಾದ ರಾಹುಲ್, ದ್ವಿತೀಯ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ರಾಹುಲ್ 28 ಎಸೆತದಲ್ಲಿ ರಾಹುಲ್ ಹಾಫ್ ಸೆಂಚುರಿ ಬಾರಿಸಿದರು. ಆದರೆ ಅಬ್ಬರಿಸಿದ ರಾಹುಲ್ 36 ಎಸೆತದಲ್ಲಿ 3 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್ ನೆರವಿನಿಂದ 70 ರನ್ ಸಿಡಿಸಿ ಔಟಾದರು. 

ರಾಹುಲ್ ಬೆನ್ನಲ್ಲೇ ರೋಹಿತ್ ಶರ್ಮಾ ವಿಕೆಟ್ ಕೈಚೆಲ್ಲಿದರು. ರೋಹಿತ್ ಶೂನ್ಯ ಸುತ್ತಿದರು. ಭಾರತ ದಿಢೀರ್ ವಿಕೆಟ್ ಕಳೆದುಕೊಂಡ ಕಾರಣ ರನ್ ಆರ್ಭಟಕ್ಕೆ ಅಲ್ಪ ಬ್ರೇಕ್ ಬಿದ್ದಿದೆ. ಸದ್ಯ ಭಾರತ 3 ವಿಕೆಟ್ ಕಳೆದುಕೊಂಡು 128 ರ ಗಡಿ ದಾಟಿದೆ. 11ರ ರನ್‌ರೇಟ್‌ನಲ್ಲಿ ಬ್ಯಾಟ್ ಬೀಸುತ್ತಿದ್ದ ಟೀಂ ಇಂಡಿಯಾ ಇದೀಗ 10ರ ಸರಾಸರಿಯಲ್ಲಿ ಬ್ಯಾಟಿಂಗ್ ನಡೆಸಿತ್ತಿದೆ. 

click me!