
ನವದೆಹಲಿ(ಅ.06): ಅಂಡರ್-17 ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಉದ್ಘಾಟನಾ ಪಂದ್ಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಚೊಚ್ಚಲ ಪಂದ್ಯ ಉದ್ಘಾಟನೆಗೂ ಮುನ್ನ ಭಾರತ ತಂಡದ ಆಟಗಾರರು ತಮ್ಮ ಪೋಷಕರನ್ನು ಭೇಟಿ ಮಾಡಿದ್ದಾರೆ.
ಅಖಿಲ ಭಾರತ ಫುಟ್ಬಾಲ್ ಫೆಡರೇಷನ್ (ಎಎಫ್‌ಎಫ್‌ಐ), ಆಟಗಾರರು ತಂಗಿದ್ದ ಹೋಟೆಲ್'ನಲ್ಲಿ ಪೋಷಕರು ಮಕ್ಕಳನ್ನು ಭೇಟಿ ಮಾಡಲು ವ್ಯವಸ್ಥೆ ಮಾಡಿತ್ತು. ತಮ್ಮ ಮಕ್ಕಳನ್ನು ನೋಡಿ ಪೋಷಕರು ಭಾವುಕರಾದರು. ಆಟಗಾರರು ಸಹ ಸಂತಸಗೊಂಡರು.
ಭಾರತ ತಂಡದ ಆಟಗಾರರ ಪೋಷಕರಿಗೆ ಭಾರತದ ಪಂದ್ಯಗಳನ್ನು ಉಚಿತವಾಗಿ ನೋಡುವ ವ್ಯವಸ್ಥೆಯನ್ನು ಎಎಫ್‌ಎಫ್‌ಐ ಕಲ್ಪಿಸಿದೆ.
ಚೊಚ್ಚಲ ಬಾರಿಗೆ ಅಂಡರ್-17 ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸುತ್ತಿದೆ. ಇಂದು ಭಾರತದ ಯುವ ಪಡೆಯು ಜವಹರ್ ಲಾಲ್ ನೆಹರು ಸ್ಟೇಡಿಯಂನಲ್ಲಿ ಯುಎಸ್ಎ ತಂಡದ ವಿರುದ್ಧ ಸೆಣಸಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.