ಇಂಡಿಯಾ ಓಪನ್‌: ಪ್ರಣಯ್‌ ಹೋರಾಟ ಅಂತ್ಯ

Published : Jan 21, 2024, 11:56 AM IST
ಇಂಡಿಯಾ ಓಪನ್‌: ಪ್ರಣಯ್‌ ಹೋರಾಟ ಅಂತ್ಯ

ಸಾರಾಂಶ

ವಿಶ್ವ ರ್‍ಯಾಂಕಿಂಗ್‌ನಲ್ಲಿ 9ನೇ ಸ್ಥಾನದಲ್ಲಿರುವ ಪ್ರಣಯ್‌, ಶನಿವಾರ ನಡೆದ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಚೀನಾದ ಶಿಯು ಖಿ ವಿರುದ್ಧ 21-15, 21-5 ಗೇಮ್‌ಗಳಲ್ಲಿ ಸೋಲನುಭವಿಸಿದರು.

ನವದೆಹಲಿ(ಜ.21): ಇಂಡಿಯಾ ಓಪನ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ತಾರಾ ಟೆನಿಸಿಗ ಎಚ್‌.ಎಸ್‌.ಪ್ರಣಯ್‌ ಅಭಿಯಾನ ಕೊನೆಗೊಂಡಿದೆ.

ವಿಶ್ವ ರ್‍ಯಾಂಕಿಂಗ್‌ನಲ್ಲಿ 9ನೇ ಸ್ಥಾನದಲ್ಲಿರುವ ಪ್ರಣಯ್‌, ಶನಿವಾರ ನಡೆದ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಚೀನಾದ ಶಿಯು ಖಿ ವಿರುದ್ಧ 21-15, 21-5 ಗೇಮ್‌ಗಳಲ್ಲಿ ಸೋಲನುಭವಿಸಿದರು. ಟೂರ್ನಿಯುದ್ದಕ್ಕೂ ಅತ್ಯುತ್ತಮ ಆಟ ಪ್ರದರ್ಶಿಸಿದ್ದ ಪ್ರಣಯ್‌ ಪ್ರಶಸ್ತಿ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿದ್ದರು. ಆದರೆ ಸೆಮೀಸ್‌ನಲ್ಲಿ ವಿಶ್ವ ನಂ.2 ಶಿಯು ನೀಡಿದ ಸವಾಲು ಎದುರಿಸಿ ಪ್ರಣಯ್‌ಗೆ ಗೆಲ್ಲಲಾಗಲಿಲ್ಲ.

ಪ್ರೊ ಕಬಡ್ಡಿ ಲೀಗ್: ಕೊನೆಗೂ ಗೆದ್ದ ಟೈಟಾನ್ಸ್‌

ಹೈದರಾಬಾದ್‌: ಸತತ 7 ಹಾಗೂ ಒಟ್ಟಾರೆ 12 ಸೋಲುಗಳಿಂದ ಕಂಗೆಟ್ಟಿದ್ದ ತೆಲುಗು ಟೈಟಾನ್ಸ್‌ ಕೊನೆಗೂ ಗೆಲುವಿನ ಹಳಿಗೆ ಮರಳಿದೆ. ಈಗಾಗಲೇ ಪ್ಲೇ-ಆಫ್‌ ಕನಸನ್ನು ಬಹುತೇಕ ಭಗ್ನಗೊಳಿಸಿರುವ ಟೈಟಾನ್ಸ್, ಶನಿವಾರ ಯುಪಿ ಯೋಧಾಸ್ ವಿರುದ್ಧ 49-32 ಅಂಕಗಳಿಂದ ಜಯಗಳಿಸಿತು. ತಂಡಕ್ಕಿದು 14 ಪಂದ್ಯಗಳಲ್ಲಿ 2ನೇ ಗೆಲುವು. ಅತ್ತ ಯೋಧಾಸ್‌ 15ರಲ್ಲಿ 11ನೇ ಸೋಲನುಭವಿಸಿತು.

ಆರಂಭದಲ್ಲೇ ಪವನ್‌ ಶೆರಾವತ್‌ರ ಆಕರ್ಷಕ ರೈಡಿಂಗ್‌ ಟೈಟಾನ್ಸ್‌ ಮುನ್ನಡೆಗೆ ಕಾರಣವಾಯಿತು. ಮೊದಲಾರ್ಧದಲ್ಲಿ ತಂಡ 24-16ರಿಂದ ಮುನ್ನಡೆಯಲ್ಲಿತ್ತು. ಆ ಬಳಿಕವೂ ಪ್ರಾಬಲ್ಯ ಮುಂದುವರಿಸಿದ ಟೈಟಾನ್ಸ್‌ ಅಧಿಕಾರಯುತ ಗೆಲುವು ಸಾಧಿಸಿತು. ಪವನ್‌ 16 ಅಂಕ ಗಳಿಸಿದರು. ಪ್ರದೀಪ್ ನರ್ವಾಲ್‌(10) ವೈಫಲ್ಯ ತಂಡಕ್ಕೆ ಹಿನ್ನಡೆಯಾಯಿತು.

Australian Open 2024: ವಿಶ್ವ ನಂ.1 ಇಗಾ ಸ್ವಿಯಾಟೆಕ್‌ಗೆ ಸೋಲಿನ ಶಾಕ್‌!

ಶನಿವಾರದ ಮತ್ತೊಂದು ಪಂದ್ಯದಲ್ಲಿ ಯು ಮುಂಬಾ ವಿರುದ್ಧ ದಬಾಂಗ್‌ ಡೆಲ್ಲಿ 39-33 ಅಂಕಗಳ ಗೆಲುವು ಸಾಧಿಸಿತು.

ಇಂದಿನ ಪಂದ್ಯಗಳು

ಬೆಂಗಳೂರು-ತಮಿಳ್‌ ತಲೈವಾಸ್‌, ರಾತ್ರಿ 8ಕ್ಕೆ

ಗುಜರಾತ್‌-ಪುಣೇರಿ ಪಲ್ಟನ್‌, ರಾತ್ರಿ 9ಕ್ಕೆ

ಶೂಟಿಂಗ್: ಒಲಿಂಪಿಕ್ಸ್‌ಗೆ ರೈಜಾ, ಅನಂತ್ ಜೀತ್

ಕುವೈತ್: ಭಾರತದ ಶೂಟರ್‌ಗಳಾದ ರೈಜಾ ಧಿಲ್ಲೊನ್‌, ಅನಂತ್ ಜೀತ್ ಸಿಂಗ್ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ಈ ಮೂಲಕ ಭಾರತದ 19 ಶೂಟರ್‌ಗಳಿಗೆ ಒಲಿಂಪಿಕ್ಸ್‌ ಟಿಕೆಟ್ ಸಿಕ್ಕಂತೆ ಆಗಿದೆ. ಶನಿವಾರ ಏಷ್ಯಾ ಒಲಿಂಪಿಕ್ ಅರ್ಹತಾ ಟೂರ್ನಿಯ ಶಾಟ್‌ಗನ್ ವಿಭಾಗದ ಮಹಿಳಾ ಸ್ಕೀಟ್‌ನಲ್ಲಿ 19 ವರ್ಷದ  ಧಿಲ್ಲೋನ್ ಬೆಳ್ಳಿ ಪದಕ ಗೆದ್ದರು. ಪುರುಷರ ವಿಭಾಗದಲ್ಲಿ ಅನಂತ್ ಜೀತ್ ಬೆಳ್ಳಿಯೊಂದಿಗೆ ಒಲಿಂಪಿಕ್ಸ್‌ ಅರ್ಹತೆ ಪಡೆದರು.

ಸಾನಿಯಾಗೆ ಮಲಿಕ್ ಮದುವೆಯಾಗಲು ಸ್ವಲ್ಪವೂ ಇಷ್ಟವಿರಲಿಲ್ಲ, ಆದ್ರೂ ಪಾಕ್ ಕ್ರಿಕೆಟಿಗನ ಬಲೆಗೆ ಬಿದ್ದಿದ್ದು ಹೇಗೆ?

ಎಸ್‌ಎಫ್‌ಎ ಕೂಟ: ಇಂದು ಟೆನಿಸ್, ವಾಲಿಬಾಲ್ ಫೈನಲ್

ಬೆಂಗಳೂರು: ಇಲ್ಲಿನ ನಡೆಯುತ್ತಿರುವ ಎಸ್‌ಎಫ್‌ಎ ಚಾಂಪಿಯನ್‌ಶಿಪ್‌ನ 5ನೇ ದಿನ 500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪಾಲ್ಗೊಂಡರು. ವಿಶೇಷವಾಗಿ 'ಶ್ರೀ ಇಸ್ ಗೋಲ್ಡ್" ಘೋಷವಾಕ್ಯದ ಮೂಲಕ ಮಹಿಳಾ ಕ್ರೀಡಾಕೂಟವನ್ನು  ಉದ್ಘಾಟಿಸಲಾಯಿತು. ಟೆನಿಸ್, ಬ್ಯಾಡ್ಮಿಂಟನ್, ವಾಲಿಬಾಲ್ ಸೇರಿದಂತೆ ಹಲವು ಕ್ರೀಡಾ ವಿಭಾಗಗಳಲ್ಲಿ ಪ್ರತಿಭಾವಂತ ಮಹಿಳಾ ಕ್ರೀಡಾಪಟುಗಳು ತಮ್ಮ ಕೌಶಲ್ಯ ಪ್ರದರ್ಶಿಸಿದರು. 6ನೇ ದಿನ ಈಜು, ಟೇಬಲ್ ಟೆನಿಸ್, ಕರಾಟೆ, ಟೆನಿಸ್ ಮತ್ತು ವಾಲಿಬಾಲ್ ಫೈನಲ್‌ಗಳು ನಡೆಯಲಿವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಂಡರ್‌-19 ಏಕದಿನ ವಿಶ್ವಕಪ್‌ ಟೂರ್ನಿಗೆ ಬಲಿಷ್ಠ ಭಾರತ ಕ್ರಿಕೆಟ್ ತಂಡ ಪ್ರಕಟ!
ಲಂಕಾ ಎದುರು ಸತತ ನಾಲ್ಕನೇ ಗೆಲುವಿನ ಮೇಲೆ ಕಣ್ಣಿಟ್ಟ ಹರ್ಮನ್‌ಪ್ರೀತ್ ಕೌರ್ ಪಡೆ!