2030ರ ಕಾಮನ್‌ವೆಲ್ತ್‌ನಲ್ಲಿ ಎಲ್ಲಾ ಕ್ರೀಡೆ ಆಡಿಸಲು ಭಾರತ ಪ್ಲಾನ್!

Published : Feb 22, 2025, 10:39 AM ISTUpdated : Feb 22, 2025, 10:43 AM IST
2030ರ ಕಾಮನ್‌ವೆಲ್ತ್‌ನಲ್ಲಿ ಎಲ್ಲಾ ಕ್ರೀಡೆ ಆಡಿಸಲು ಭಾರತ ಪ್ಲಾನ್!

ಸಾರಾಂಶ

ಭಾರತವು 2030ರ ಕಾಮನ್‌ವೆಲ್ತ್ ಗೇಮ್ಸ್ ಆಯೋಜಿಸಲು ಆಸಕ್ತಿ ಹೊಂದಿದೆ. 2026ರ ಗೇಮ್ಸ್‌ನಲ್ಲಿ ಕೈಬಿಟ್ಟ ಕ್ರೀಡೆಗಳನ್ನು 2030ರಲ್ಲಿ ಸೇರಿಸಲು ಚಿಂತನೆ ನಡೆಸಿದೆ. 2026ರ ಗೇಮ್ಸ್‌ನಲ್ಲಿ ಹಣ ಉಳಿಸಲು ಕೆಲವು ಕ್ರೀಡೆಗಳನ್ನು ಕೈಬಿಡಲಾಗಿದೆ. ಭಾರತವು ಪ್ರಮುಖ ಕ್ರೀಡೆಗಳನ್ನು ಸೇರಿಸಲು ಆಸಕ್ತಿ ಹೊಂದಿದೆ. ಆತಿಥ್ಯ ಹಕ್ಕಿಗೆ ಬಿಡ್ ಸಲ್ಲಿಸಲು ಮಾರ್ಚ್ 31 ಕೊನೆಯ ದಿನಾಂಕ. (50 ಪದಗಳು)

ನವದೆಹಲಿ: 2030ರಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಆಯೋಜಿಸಲು ಆಸಕ್ತಿ ತೋರಿರುವ ಭಾರತ,  ಕ್ರೀಡಾಕೂಟದಲ್ಲಿ ಬಹುತೇಕ ಎಲ್ಲಾ ಕ್ರೀಡೆಗಳನ್ನು ಆಡಿಸುವ ಯೋಜನೆಯಲ್ಲಿದೆ. ಈ ಬಗ್ಗೆ ಕ್ರೀಡಾ ಸಚಿವಾಲಯದ ಮೂಲಗಳು ಮಾಹಿತಿ ನೀಡಿದ್ದು, '2026ರ ಕಾಮನ್‌ವೆಲ್ತ್ ಗೇಮ್ಸ್ ನಿಂದ ಹೊರಗಿಡಲಾಗುವ ಕ್ರೀಡೆ ಗಳನ್ನು 2030ರ ಗೇಮ್ಸ್‌ನಲ್ಲಿ ಮತ್ತೆ ಸೇರಿಸಲು ಚಿಂತನೆ ನಡೆಸುತ್ತಿದ್ದೇವೆ' ಎಂದಿದೆ. 

2026ರ ಗೇಮ್ ಸ್ಕಾಟ್ಲಂಡ್‌ನ ಗ್ಲಾಸ್ಕೋದಲ್ಲಿ ನಡೆಯಲಿದೆ ಆದರೆ ಹಾಕಿ, ಬ್ಯಾಡ್ಮಿಂಟನ್, ಕ್ರಿಕೆಟ್, ಕುಸ್ತಿ, ಶೂಟಿಂಗ್ ಸೇರಿ ಪ್ರಮುಖ ಕ್ರೀಡೆಗಳನ್ನು ನಡೆದಿರಲು ಆಯೋಜಕರು ನಿರ್ಧರಿಸಿದ್ದಾರೆ. ಹಣ ಉಳಿಸುವ ನಿಟ್ಟಿನಲ್ಲಿ ಕೇವಲ 10 ಕ್ರೀಡೆಗಳನ್ನು ಮಾತ್ರ ಆಡಿಸಲು ಸಜ್ಜಾಗಿದ್ದಾರೆ. ಆದರೆ ಈ ಕ್ರೀಡೆಗಳಲ್ಲಿ ಭಾರತ ಹೆಚ್ಚಿನ ಪ್ರಾಬಲ್ಯ ಹೊಂದಿರುವುದರಿಂದ ಅದನ್ನು 2030ರಲ್ಲಿ ನಡೆಯುವ ಗೇಮ್ಸ್‌ನಲ್ಲಿ ಸೇರಿಸಲು ಚಿಂತನೆ ನಡೆಸುತ್ತಿದೆ. ಗೇಮ್ಸ್ ಆತಿಥ್ಯ ಹಕ್ಕಿಗೆ ಬಿಡ್ ಸಲ್ಲಿಸಲು ಮಾ.31 ಕೊನೆ ದಿನ.

ಚಾಂಪಿಯನ್ಸ್ ಟ್ರೋಫಿ: ಭಾರತ ಪಂದ್ಯದ ಲೈವ್‌ ವೇಳೆ ಪಾಕ್‌ ಹೆಸರಿಲ್ಲದ್ದಕ್ಕೆ ಐಸಿಸಿಗೆ ಪಿಸಿಬಿ ದೂರು!

ಫುಟ್ಬಾಲ್‌: 2-0 ಗೋಲಿನಲ್ಲಿ ಗೆದ್ದ ಬೆಂಗಳೂರು ಎಫ್‌ಸಿ

ಶಿಲ್ಲಾಂಗ್‌: ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ ತಂಡ ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌)ನ ಶುಕ್ರವಾರದ ಪಂದ್ಯದಲ್ಲಿ ನಾರ್ಥ್ಈಸ್ಟ್‌ ಯುನೈಟೆಡ್‌ ಎಫ್‌ಸಿ ವಿರುದ್ಧ 2-0 ಗೋಲುಗಳಿಂದ ಗೆಲುವು ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮತ್ತೆ ಮೇಲೇರಿದೆ. ತಂಡ 21 ಪಂದ್ಯಗಳನ್ನಾಡಿದ್ದು, 10 ಗೆಲುವಿನೊಂದಿಗೆ 34 ಅಂಕ ಗಳಿಸಿ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ಪಂದ್ಯದಲ್ಲಿ ಬಿಎಫ್‌ಸಿ ಪರ ಆಲ್ಬೆರ್ಟೊ ಹಾಗೂ ವಿಲಿಯಮ್ಸ್‌ ಗೋಲು ಬಾರಿಸಿದರು. ಫೆ.25ಕ್ಕೆ ಬಿಎಫ್‌ಸಿ ತಂಡ ಚೆನ್ನೈಯಿನ್‌ ವಿರುದ್ಧ ಆಡಲಿದೆ. ಮತ್ತೊಂದೆಡೆ ಟೂರ್ನಿಯಲ್ಲಿ 6ನೇ ಸೋಲು ಕಂಡಿರುವ ನಾರ್ಥ್‌ಈಸ್ಟ್‌ 22 ಪಂದ್ಯಗಳಲ್ಲಿ 32 ಅಂಕಗಳೊಂದಿಗೆ 5ನೇ ಸ್ಥಾನಕ್ಕೆ ಕುಸಿದಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ಟೂರ್ನಿಯ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ
ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?