ಪಟ್ಟು ಬಿಡದ ಟೀಂ ಇಂಡಿಯಾ; ಭಾರತದ ಗೆಲುವಿಗೆ ಏಳೇ ಮೆಟ್ಟಿಲು

Published : Feb 12, 2017, 01:23 PM ISTUpdated : Apr 11, 2018, 12:56 PM IST
ಪಟ್ಟು ಬಿಡದ ಟೀಂ ಇಂಡಿಯಾ; ಭಾರತದ ಗೆಲುವಿಗೆ ಏಳೇ ಮೆಟ್ಟಿಲು

ಸಾರಾಂಶ

ಭಾರತ ಪರ ಅಶ್ವಿನ್ ಎರಡು ವಿಕೆಟ್ ಪಡೆದರೆ, ಜಡೇಜಾ ಒಂದು ವಿಕೆಟ್ ಪಡೆದರು. ಹೀಗಾಗಿ ಕೊನೆಯ ದಿನ ಪಿಚ್ ತಿರುವು ಪಡೆದುಕೊಳ್ಳುತ್ತಿರುವ ಬಗ್ಗೆ ಸ್ಷಷ್ಟ ಸೂಚನೆ ಸಿಕ್ಕಂತಾಗಿದೆ.    

ಹೈದರಾಬಾದ್(ಫೆ.12): ಟೀಂ ಇಂಡಿಯಾ ನೀಡಿರುವ ಬೃಹತ್ ಮೊತ್ತ ಬೆನ್ನತ್ತಿರುವ ಬಾಂಗ್ಲಾದೇಶ ಆರಂಭದಲ್ಲಿ ವಿಕೆಟ್ ಕಳೆದು ಕೊಂಡಿದ್ದರೂ, ಜಿಗುಟು ಆಟ ಮುಂದುವರೆಸಿರುವ ಆಲ್ರೌಂಡರ್ ಶಕೀಬ್ ಅಲ್ ಹಸನ್ ಮೇಲೆ ಪ್ರವಾಸಿಗರ ಸೋಲು-ಗೆಲುವು ನಿರ್ಧರಿತವಾಗಿದೆ. ಇನ್ನು ಅಂತಿಮ ದಿನದಲ್ಲಿ ಏಳು ವಿಕೆಟ್ ಉರುಳಿಸಿ ಏಕೈಕ ಪಂದ್ಯದ ಟೆಸ್ಟ್ ಸರಣಿಯನ್ನು ಕೈವಶ ಮಾಡಿಕೊಳ್ಳಲು ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಹವಣಿಸುತ್ತಿದೆ. ಹಾಗಾಗಿ ಐದನೇ ದಿನದ ಪಂದ್ಯ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

ನಾಲ್ಕನೇ ದಿನವಾದ ಇಂದು 322 ರನ್'ಗಳಿಂದ ಇನಿಂಗ್ಸ್ ಆರಂಭಿಸಿದ ಬಾಂಗ್ಲಾ ಪಡೆಗೆ ಆರಂಭದಲ್ಲೇ ಭುವನೇಶ್ವರ್ ಕುಮಾರ್ ಆಘಾತ ನೀಡಿದರು. ಅರ್ಧಶತಕ ಗಳಿಸಿದ್ದ ಮೆಹದಿ ಹಸನ್ ತಮ್ಮ ಖಾತೆಗೆ ಒಂದೂ ರನ್ ಆನ್ನೂ ಸೇರಿಸದೆ ಭುವಿಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಇತ್ತ ಏಕಾಂಗಿ ಹೋರಾಟ ನಡೆಸಿದ ನಾಯಕ ಮುಷ್ಫಿಕರ್ ರಹೀಮ್ ಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ಆದರೆ ಬಾಲಂಗೋಚಿಗಳು ರಹೀಮ್'ಗೆ ತಕ್ಕ ಸಾಥ್ ನೀಡದೇ ಇದ್ದಿದ್ದರಿಂದ ಬಾಂಗ್ಲಾದೇಶ 388 ರನ್'ಗಳಿಗೆ ಸರ್ವಪತನ ಕಂಡಿತು.

ಬೃಹತ್ ಗುರಿ ನೀಡಿದ ಟೀಂ ಇಂಡಿಯಾ

ಮೊದಲ ಇನಿಂಗ್ಸ್'ನಲ್ಲಿ 299ರನ್'ಗಳ ಮುನ್ನೆಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಉತ್ತಮ ಆರಂಭವನ್ನು ಪಡೆಯುವಲ್ಲಿ ಮತ್ತೊಮ್ಮೆ ವಿಫಲವಾಯಿತು. ತಂಡದ ಮೊತ್ತ 12 ರನ್'ಗಳಿದ್ದಾಗ ಮುರುಳಿ ವಿಜಯ್ ಕೇವಲ 7 ರನ್'ಗಳಿಸಿ ಪೆವಿಲಿಯನ್ ಸೇರಿದರೆ, ಇನ್ನೊಬ್ಬ ಆರಂಭಿಕ ಕೆ.ಎಲ್ ಮತ್ತೊಮ್ಮೆ ವಿಫಲರಾದರು. ರಾಹುಲ್ ಆಟ ಕೇವಲ 10 ರನ್'ಗಳಿಗೆ ಸೀಮಿತವಾಯಿತು. ನಂತರ ಮೂರನೇ ವಿಕೆಟ್'ಗೆ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಚೇತೇಶ್ವರ ಪೂಜಾರ ಚುರುಕು ಗತಿಯಲ್ಲಿ ರನ್'ಗಳಿಸಲು ಮುಂದಾದರು. ವಿರಾಟ್ 38 ರನ್'ಗಳಿಸಿ ಶಕಿಬ್'ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ರಹಾನೆ ಆಟ ಕೂಡ ಹೆಚ್ಚುಹೊತ್ತು ನಡೆಯಲಿಲ್ಲ. ರಹಾನೆ 28 ರನ್'ಗಳಿಗೆ ಔಟ್ ಆದರು. ಪೂಜಾರ ಕೇವಲ 58 ಎಸೆತಗಳಲ್ಲಿ 54 ರನ್'ಗಳಿಸಿ ಅಜೇಯರಾಗುಳಿದರು. ಹಾಗೆಯೇ ರವೀಂದ್ರ ಜಡೇಜಾ 16 ಗಳಿಸಿದ್ದಾಗ ತಂಡ ಮೊತ್ತ 458ರನ್ ಮುನ್ನೆಡೆಯಲಿದ್ದಾಗ ನಾಯಕ ಕೊಹ್ಲಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು.

ಕುತೂಹಲ ಕೆರಳಿಸಿದ ಕೊನೆಯ ದಿನ

ಈ ಬೃಹತ್ ಮೊತ್ತ ಬೆನ್ನತ್ತಿದ ಬಾಂಗ್ಲಾ ಪಡೆ ಆರಂಭದಲ್ಲೇ ಮುಗ್ಗರಿಸಿತು. ತಮೀಮ್ ಇಕ್ಬಾಲ್ ಮೂರು ರನ್ ಗಳಿಸಿ ಅಶ್ವಿನ್'ಗೆ ವಿಕೆಟ್ ಒಪ್ಪಿಸಿದರೆ, ಭರ್ಜರಿ 7 ಬೌಂಡರಿ ಬಾರಿಸಿ ಭರವಸೆ ಮೂಡಿಸಿದ್ದ ಸೌಮ್ಯ ಸರ್ಕಾರ್(42) ಜಡೇಜಾಗೆ ವಿಕೆಟ್ ಒಪ್ಪಿಸಿದರು. ಇನ್ನು ಮೊಮಿನುಲ್ ಹಕ್ ಆಟ 27 ರನ್'ಗಳಿಗೆ ಸೀಮಿತವಾಯಿತು. ಶಕೀಬ್ ಅಲ್ ಹಸನ್ ಹಾಗೂ ಮೊಹಮ್ಮದ್ ಉಲ್ಲಾ ರಿಯಾದ್ ಐದನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಹಾಗಾಗಿ ಅಂತಿಮ ದಿನ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಭಾರತ ಪರ ಅಶ್ವಿನ್ ಎರಡು ವಿಕೆಟ್ ಪಡೆದರೆ, ಜಡೇಜಾ ಒಂದು ವಿಕೆಟ್ ಪಡೆದರು. ಹೀಗಾಗಿ ಕೊನೆಯ ದಿನ ಪಿಚ್ ತಿರುವು ಪಡೆದುಕೊಳ್ಳುತ್ತಿರುವ ಬಗ್ಗೆ ಸ್ಷಷ್ಟ ಸೂಚನೆ ಸಿಕ್ಕಂತಾಗಿದೆ.    

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ರೆಡಿ; ಯಾವ ಐಪಿಎಲ್‌ ತಂಡದ ಆಟಗಾರರು ಎಷ್ಟಿದ್ದಾರೆ? ಯಾರದ್ದು ಸಿಂಹಪಾಲು?
2025 ಭಾರತೀಯ ಕ್ರಿಕೆಟ್ ಪಾಲಿಗೆ ಮುಟ್ಟಿದ್ದೆಲ್ಲಾ ಚಿನ್ನ; ಇಲ್ಲಿವೆ ನೋಡಿ 5 ಅವಿಸ್ಮರಣೀಯ ಕ್ಷಣಗಳು!