ದಿಟ್ಟ ಪ್ರತಿರೋಧದಲ್ಲೂ ಹಿನ್ನಡೆ ಅನುಭವಿಸಿದ ಬಾಂಗ್ಲಾದೇಶ

Published : Feb 11, 2017, 01:32 PM ISTUpdated : Apr 11, 2018, 12:43 PM IST
ದಿಟ್ಟ ಪ್ರತಿರೋಧದಲ್ಲೂ ಹಿನ್ನಡೆ ಅನುಭವಿಸಿದ ಬಾಂಗ್ಲಾದೇಶ

ಸಾರಾಂಶ

ಚಹಾ ವಿರಾಮದ ಹೊತ್ತಿಗೇ 6 ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾದೇಶ ಫಾಲೋಆನ್ ಸುಳಿಗೆ ಸಿಲುಕುವುದು ಬಹುತೇಕ ಖಚಿತ ಎಂಬಂತಾಗಿತ್ತು.

ಹೈದರಾಬಾದ್(ಫೆ.11): ಆಲ್ರೌಂಡರ್ ಶಕೀಬ್ ಅಲ್ ಹಸನ್ (82) ಹಾಗೂ ನಾಯಕ ಮುಷ್ಪೀಕರ್ ರಹೀಮ್ (81) ಮತ್ತು ಮೆಹದಿ ಹಸನ್ ಮಿರಾಜ್ (51) ಅವರುಗಳ ತ್ರಿವಳಿ ಅರ್ಧಶತಕದ ಮಧ್ಯದಲ್ಲೂ ಪ್ರವಾಸಿ ಬಾಂಗ್ಲಾದೇಶ ತಂಡ ಆತಿಥೇಯ ಭಾರತದ ಎದುರು ಹಿನ್ನಡೆ ಅನುಭವಿಸಿದೆ.

ಇಲ್ಲಿನ ರಾಜೀವ್‌ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದ ಮೂರನೇ ದಿನದಾಂತ್ಯಕ್ಕೆ ಬಾಂಗ್ಲಾದೇಶ 104 ಓವರ್‌'ಗಳಲ್ಲಿ 6 ವಿಕೆಟ್ ನಷ್ಟಕ್ಕೆ 322 ರನ್ ಕಲೆಹಾಕಿದೆ. 6 ವಿಕೆಟ್‌ಗೆ 687 ರನ್‌'ಗಳಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿರುವ ಭಾರತದ ಎದುರು ಇನ್ನೂ 365 ರನ್ ಹಿನ್ನಡೆಯಲ್ಲಿರುವ ಬಾಂಗ್ಲಾದೇಶ ಹಾದಿ ಇನ್ನೂ ದುರ್ಗಮವಾಗಿದೆ.

ಏಳನೇ ವಿಕೆಟ್‌ಗೆ ಮುರಿಯದ 87 ರನ್ ಕಲೆಹಾಕಿರುವ ಮುಷ್ಪೀಕರ್ ರಹೀಮ್ ಹಾಗೂ ಮೆಹೆದಿ ಜೋಡಿ ನಾಲ್ಕನೇ ದಿನದಂದು ನೀಡುವ ಪ್ರದರ್ಶನದ ಆಧಾರದಲ್ಲಿ ಅದರ ಅಳಿವು-ಉಳಿವು ನಿರ್ಧರಿಸಿದೆ.

ಚಹಾ ವಿರಾಮದ ಹೊತ್ತಿಗೇ 6 ವಿಕೆಟ್ ಕಳೆದುಕೊಂಡಿದ್ದ ಬಾಂಗ್ಲಾದೇಶ ಫಾಲೋಆನ್ ಸುಳಿಗೆ ಸಿಲುಕುವುದು ಬಹುತೇಕ ಖಚಿತ ಎಂಬಂತಾಗಿತ್ತು. ಆದರೆ, ಮುಷ್ಪೀಕರ್ ಹಾಗೂ ಮೆಹೆದಿ ತೋರಿದ ದಿಟ್ಟ ಪ್ರತಿರೋಧ ಆ ಅಪಾಯದಿಂದ ತಂಡವನ್ನು ಪಾರು ಮಾಡಿತು. ಆದಾಗ್ಯೂ ಫಾಲೋಆನ್‌'ನಿಂದ ಬಚಾವಾಗಲು ಅದು ಇನ್ನೂ 165 ರನ್ ಪೇರಿಸಬೇಕಿದ್ದು, ಬಾಂಗ್ಲಾದೇಶದ ಬಹುದೊಡ್ಡ ಸವಾಲೇ ಇದೆ.

ಸ್ಕೋರ್ ವಿವರ

ಭಾರತ ಮೊದಲ ಇನ್ನಿಂಗ್ಸ್ ; 687/6

ಬಾಂಗ್ಲಾದೇಶ ಮೊದಲ ಇನ್ನಿಂಗ್ಸ್: 322/6

ಶಕೀಬ್ ಅಲ್ ಹಸನ್ :82

ಮುಷ್ಪೀಕರ್ ರಹೀಮ್ : 81*

ಮೆಹದಿ ಹಸನ್ ಮಿರಾಜ್ : 51*

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

T20 ವಿಶ್ವಕಪ್‌ನಿಂದ ಹೊರಬಿದ್ದ ಬೆನ್ನಲ್ಲೇ ಈ ಟೂರ್ನಿ ಆಡಲು ರೆಡಿಯಾದ ಶುಭ್‌ಮನ್ ಗಿಲ್! ಹೆಗಲಿಗೆ ಮಹತ್ವದ ಜವಾಬ್ದಾರಿ?
ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾ ರೆಡಿ; ಯಾವ ಐಪಿಎಲ್‌ ತಂಡದ ಆಟಗಾರರು ಎಷ್ಟಿದ್ದಾರೆ? ಯಾರದ್ದು ಸಿಂಹಪಾಲು?