ಸೆಪ್ಟೆಂಬರ್‌ನಲ್ಲಿ ಭಾರತ-ಪಾಕ್‌ ಡೇವಿಸ್‌ ಕಪ್‌

By Web DeskFirst Published Feb 7, 2019, 10:43 AM IST
Highlights

ಡೇವಿಸ್ ಕಪ್ ವೇಳಾಪಟ್ಟಿ ಪ್ರಕಟಗೊಂಡಿದೆ. ಸೆಪ್ಟೆಂಬರ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಲಿದೆ. ಇಷ್ಟೇ ಅಲ್ಲ ಈ ಪಂದ್ಯಕ್ಕೆ ಪಾಕಿಸ್ತಾನ ಆತಿಥ್ಯ ವಹಿಸಲಿದೆ. ಆದರೆ ಸದ್ಯ ಭಾರತ ಡೇವಿಸ್‌ಕಪ್‌ಗಾಗಿ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದೆಯಾ ಅನ್ನೋದು ಕುತೂಹಲ ಮೂಡಿಸಿದೆ.

ನವದೆಹಲಿ(ಫೆ.07): ಭಾರತ-ಪಾಕಿಸ್ತಾನ ತಂಡಗಳು ಇದೇ ಸೆಪ್ಟೆಂಬರ್‌ನಲ್ಲಿ ಡೇವಿಸ್‌ ಕಪ್‌ ಟೆನಿಸ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಬುಧವಾರ ಲಂಡನ್‌ನಲ್ಲಿ ಈ ವರ್ಷದ ವೇಳಾಪಟ್ಟಿಪ್ರಕಟಗೊಳಿಸಲಾಯಿತು. ಪಂದ್ಯದ ಆತಿಥ್ಯವನ್ನು ಪಾಕಿಸ್ತಾನಕ್ಕೆ ನೀಡಲಾಗಿದೆ. 

ಇದನ್ನೂ ಓದಿ: ಕಾಫಿ ವಿವಾದ: ಪಾಂಡ್ಯ ರಾಹುಲ್‌ ವಿರುದ್ಧ ದೂರು!

ಆದರೆ ಭಾರತ ಸರ್ಕಾರ ತನ್ನ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರಾಕರಿಸಬಹುದಾದ ಸಾಧ್ಯತೆ ದಟ್ಟವಾಗಿದ್ದು, ಪಂದ್ಯ ತಟಸ್ಥ ಸ್ಥಳದಲ್ಲಿ ನಡೆಯಲಿದೆ ಎನ್ನಲಾಗಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ವಿಶ್ವ ಗುಂಪು ಅರ್ಹತಾ ಸುತ್ತಿಗೆ ಪ್ರವೇಶ ಪಡೆಯಲಿದೆ. 

ಇದನ್ನೂ ಓದಿ: IPL 2019: ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದ RCB

1964ರ ಬಳಿಕ ಭಾರತ ತಂಡ ಪಾಕಿಸ್ತಾನ ಪ್ರವಾಸ ಕೈಗೊಂಡಿಲ್ಲ. ಕೊನೆಯ ಬಾರಿಗೆ ಲಾಹೋರ್‌ನಲ್ಲಿ ನಡೆದ ಡೇವಿಸ್ ಕಪ್ ಪಂದ್ಯದಲ್ಲಿ ಭಾರತ 4-0 ಅಂತರದಲ್ಲಿ ಗೆಲುವು ಸಾಧಿಸಿತ್ತು. ಪಾಕ್‌ ವಿರುದ್ಧ ಭಾರತ 6 ಬಾರಿ ಮುಖಾಮುಖಿಯಾಗಿದ್ದು, ಪ್ರತಿ ಬಾರಿ ಅಜೇಯವಾಗಿ ಉಳಿದಿದೆ.

click me!