
ದುಬೈ(ಜೂ.30): ಕಬಡ್ಡಿ ಮಾಸ್ಟರ್ಸ್ ದುಬೈ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಕೀರಿಟಕ್ಕೆ ಮುತ್ತಿಕ್ಕಿದೆ. ಇರಾನ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತ 44-26 ಅಂತರದಲ್ಲಿ ಭರ್ಜರಿ ಗೆಲವು ದಾಖಲಿಸಿದೆ.
ಮೊದಾಲಾರ್ಧದ ಆರಂಭದಲ್ಲೇ ಭಾರತ ಮುನ್ನಡೆ ಸಾಧಿಸಿತು. ಮೊದಲ ರೈಡ್‌ನಿಂದಲೇ ಅಂಕ ಕಬಳಿಸಲು ಆರಂಭಿಸಿದ ಭಾರತ 4-0 ಅಂತರದ ಮುನ್ನಡೆ ಸಾಧಿಸಿತು. ಟ್ಯಾಕಲ್‌ನಲ್ಲೂ ಭಾರತದ ಡಿಫೆಂಡರ್‌ಗಳು ಅದ್ಬುತ ಪ್ರದರ್ಶನ ನೀಡಿದರು.
ಅಷ್ಟೇ ವೇಗದಲ್ಲಿ ಇರಾನ್ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಿತು. ಆದರೆ ಭಾರತ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಹೀಗಾಗಿ ಮೊದಲಾರ್ಧದಲ್ಲಿ ಭಾರತ 18-11 ಅಂತರದಲ್ಲಿ ಮೇಲುಗೈ ಸಾಧಿಸಿತು.
ದ್ವಿತಿಯಾರ್ಧದಲ್ಲಿ ಭಾರತದ ಮೋನು ಗಯಾತ್ ರೈಡ್‌ನಿಂದ ಅಂಕ ಭೇಟೆ ಆರಂಭಿಸಿತು. ಆದರೆ ಇರಾನ್ ಡಿಫೆಂಡರ್‌ಗಳು ಮಿಂಚಿನ ಪ್ರದರ್ಶನ ನೀಡೋ ಮೂಲಕ ಭಾರತಕ್ಕೆ ಶಾಕ್ ನೀಡೋ ಪ್ರಯತ್ನ ಮಾಡಿತು. ಆದರೆ ಪ್ರಯೋಜನವಾಗಲಿಲ್ಲ.
ಅಜಯ್ ಠಾಕೂರ್, ಮೋನು ಗೋಯಾತ್ ಅದ್ಬುತ ರೈಡ್ ಹಾಗೂ ಡಿಫೆಂಡರ್‌ಗಳ ಸೂಪರ್ ಟ್ಯಾಕಲ್‌ನಿಂದ ಭಾರತ 44-26 ಅಂತರದಲ್ಲಿ ಇರಾನ್ ತಂಡವನ್ನ ಮಣಿಸಿತು. ಈ ಮೂಲಕ ಕಬಡ್ಡಿ ಮಾಸ್ಟರ್ಸ್ ದುಬೈ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.