ಫುಟ್ಬಾಲ್: ನೇಪಾಳ ವಿರುದ್ಧ ಭಾರತಕ್ಕೆ 2-0 ಜಯ

By Suvarna Web DeskFirst Published Jun 7, 2017, 7:25 AM IST
Highlights

ಸುನೀಲ್ ಛೇಟ್ರಿ, ಉದಾಂತ ಸಿಂಗ್ ಮೊದಲಾದ ಪ್ರಮುಖ ಆಟಗಾರರಿಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡಲು ಕೋಚ್ ಸ್ಟೀಫಲ್ ಕಾನ್ಸ್'ಟಂಟೈನ್ ನಿರ್ಧರಿಸಿದ್ದರು. ಕಿರ್ಗಿಸ್ತಾನ್ ಗಣರಾಜ್ಯ ವಿರುದ್ಧದ ಪಂದ್ಯಕ್ಕೆ ಈ ಆಟಗಾರರನ್ನು ಉಳಿಸಿಕೊಳ್ಳುವುದು ಕೋಚ್ ಉದ್ದೇಶವಾಗಿತ್ತು. ಈ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲೂ ಭಾರತ ತಂಡ ನೇಪಾಳ ವಿರುದ್ಧ ಜಯಭೇರಿ ಭಾರಿಸಿದ್ದು ಗಮನಾರ್ಹ.

ಮುಂಬೈ: ಸ್ಟಾರ್‌ ಮಿಡ್‌'ಫೀಲ್ಡರ್‌ ಜೆಜೆ ಲಾಲ್‌'ಪೆಕುಲಾ ಮತ್ತು ಡಿಫೆಂಡರ್‌ ಸಂದೇಶ್‌ ಜಿನ್‌'ಗಾನ್‌ ಅವರ ಅದ್ಭುತ ಪ್ರದರ್ಶನದ ನೆರವಿನಿಂದ ಭಾರತ ತಂಡ, ನೇಪಾಳ ವಿರುದ್ಧದ ಸೌಹಾರ್ದ ಪಂದ್ಯದಲ್ಲಿ 2-0 ಗೋಲುಗಳ ಗೆಲುವು ಸಾಧಿಸಿದೆ. ಇಲ್ಲಿನ ಅಂದೇರಿ ಕ್ರೀಡಾ ಸಂಕೀರ್ಣದ ಫುಟ್ಬಾಲ್‌ ಅರೇನಾದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲೂ ಉತ್ತಮ ಪ್ರದರ್ಶನ ತೋರಿತು. 

ಪಂದ್ಯದ 15ನೇ ನಿಮಿಷದಲ್ಲೇ ಜಿನ್‌ಗಾನ್‌ ಗೋಲು ಬಾರಿಸಿ ತಂಡಕ್ಕೆ ಆರಂಭಿಕ ಮುನ್ನಡೆ ಒದಗಿಸಿದರು. ಮೊದಲಾರ್ಧದ ಅಂತ್ಯಕ್ಕೆ 1-0 ಮುನ್ನಡೆ ಕಾಯ್ದುಕೊಂಡ ಭಾರತಕ್ಕೆ 79ನೇ ನಿಮಿಷದಲ್ಲಿ ಜೆಜೆ 2ನೇ ಗೋಲು ತಂದುಕೊಟ್ಟರು.

ಇದೇ 13ರಂದು ಬೆಂಗಳೂರಿನಲ್ಲಿ ಕಿರ್ಗಿಸ್ತಾನ ವಿರುದ್ಧದ ಮಹತ್ವದ ಏಷ್ಯಾ ಕಪ್ ಕ್ವಾಲಿಫೈಯರ್ ಪಂದ್ಯಕ್ಕೆ ಇದು ಅಭ್ಯಾಸ ಪಂದ್ಯವಾಗಿತ್ತು. ಸುನೀಲ್ ಛೇಟ್ರಿ, ಉದಾಂತ ಸಿಂಗ್ ಮೊದಲಾದ ಪ್ರಮುಖ ಆಟಗಾರರಿಗೆ ಈ ಪಂದ್ಯದಲ್ಲಿ ವಿಶ್ರಾಂತಿ ನೀಡಲು ಕೋಚ್ ಸ್ಟೀಫಲ್ ಕಾನ್ಸ್'ಟಂಟೈನ್ ನಿರ್ಧರಿಸಿದ್ದರು. ಕಿರ್ಗಿಸ್ತಾನ್ ಗಣರಾಜ್ಯ ವಿರುದ್ಧದ ಪಂದ್ಯಕ್ಕೆ ಈ ಆಟಗಾರರನ್ನು ಉಳಿಸಿಕೊಳ್ಳುವುದು ಕೋಚ್ ಉದ್ದೇಶವಾಗಿತ್ತು. ಈ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲೂ ಭಾರತ ತಂಡ ನೇಪಾಳ ವಿರುದ್ಧ ಜಯಭೇರಿ ಭಾರಿಸಿದ್ದು ಗಮನಾರ್ಹ.

click me!