ಇಂಗ್ಲೆಂಡ್ ಲಯನ್ಸ್ ವಿರುದ್ಧ ಭಾರತ ಎ ತಂಡಕ್ಕೆ 2ನೇ ಗೆಲುವು!

Published : Jan 25, 2019, 05:25 PM IST
ಇಂಗ್ಲೆಂಡ್ ಲಯನ್ಸ್ ವಿರುದ್ಧ ಭಾರತ ಎ ತಂಡಕ್ಕೆ 2ನೇ ಗೆಲುವು!

ಸಾರಾಂಶ

ಭಾರತ ಎ ಹಾಗೂ ಇಂಗ್ಲೆಂಡ್ ಲಯನ್ಸ್ ನಡುವಿನ 2ನೇ ಏಕದಿನ ಪಂದ್ಯ ಅಭಿಮಾನಿಗಳ ಭರಪೂರ ಮನರಂಜನೆ ನೀಡಿತು. ದ್ವಿತೀಯ ಪಂದ್ಯದಲ್ಲೂ ಅಬ್ಬರಿಸಿದ ರಹಾನೆ ಸೈನ್ಯ ಸತತ 2ನೇ ಗೆಲುವು ಸಾಧಿಸಿದೆ.  

ತಿರುವನಂತಪುರಂ(ಜ.25): ಅಲ್ರೌಂಡರ್ ಪ್ರದರ್ಶನದ ಮೂಲಕ  ಇಂಗ್ಲೆಂಡ್ ಲಯನ್ಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಭಾರತ  138 ರನ್ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 5 ಏಕದಿನ ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಪಡೆದುಕೊಂಡಿದೆ. 

ಇದನ್ನೂ ಓದಿ: ಐಪಿಎಲ್’ನ ಚಾಂಪಿಯನ್ ತಂಡ ಖರೀದಿಸಲು ಮುಂದಾದ ಬಚ್ಚನ್ ಕುಟುಂಬ..!

ನಾಯಕ ಅಜಿಂಕ್ಯ ರಹಾನೆ 91, ಹನುಮಾ ವಿಹಾರಿ 92, ಶ್ರೇಯಸ್ ಅಯ್ಯರ್ 65 ರನ್ ನೆರವಿನಿಂದ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 303 ರನ್ ಸಿಡಿಸಿತು. 304 ರನ್ ಬೃಹತ್ ಟಾರ್ಗೆಟ್ ಪಡೆದ ಇಂಗ್ಲೆಂಡ್ ಮಯಾಂಕ್ ಮಾರ್ಕಂಡೆ, ಶಾರ್ದೂಲ್ ಠಾಕೂರ್ ಹಾಗೂ ಅಕ್ಸರ್ ಪಟೇಲ್ ದಾಳಿಗೆ ಕುಸಿತಂ ಕಂಡಿತು.

ಇದನ್ನೂ ಓದಿ: ಇಂಡೋ-ಕಿವೀಸ್ ಕ್ರಿಕೆಟ್: ಅಂತಿಮ 2 ಏಕದಿನ, ಟಿ20 ಸರಣಿಯಿಂದ ಕೊಹ್ಲಿಗೆ ರೆಸ್ಟ್!

ಅಲೆಕ್ಸ್ ಡೇವಿಸ್ 48, ಲಿವಿಸ್ ಗ್ರೆಗೋರಿ 38 ರನ್ ಹೊರತು ಪಡಿಸಿದರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳಿಂದ ರನ್ ಹರಿದು ಬರಲಿಲ್ಲ. 37.4 ಓವರ್‌ಗಳಲ್ಲಿ 165 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಟೀಂ ಇಂಡಿಯಾ 138 ರನ್ ಗೆಲುವು ಸಾಧಿಸಿತು. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂಬೈನಲ್ಲಿ ಸಚಿನ್, ಛೆಟ್ರಿ ಭೇಟಿಯಾಗಲಿರುವ ಮೆಸ್ಸಿ; ಈ ಲಿಸ್ಟ್‌ನಲ್ಲಿದ್ದಾರೆ ಹಲವು ಸೆಲಿಬ್ರಿಟೀಸ್!
U19 Asia Cup: ಪಾಕಿಸ್ತಾನ ಎದುರು ಮುಗ್ಗರಿಸಿದ 14 ವರ್ಷದ ವೈಭವ್ ಸೂರ್ಯವಂಶಿ; ಸ್ಪರ್ಧಾತ್ಮಕ ಮೊತ್ತದತ್ತ ಯುವ ಪಡೆ ದಾಪುಗಾಲು