
ಬೆಂಗಳೂರು(ಸೆ.09) : ಮಳೆ, ಪಿಚ್ ಸರಿಯಿಲ್ಲ, ಮಂದ ಬೆಳಕು ಹೀಗೆ ಹಲವು ಕಾರಣಗಳಿಂದ ಪಂದ್ಯಗಳನ್ನು ಮುಂದೂಡಿದ್ದು ಅಥವಾ ರದ್ದುಗೊಳಿಸಿದ್ದನ್ನು ಕೇಳಿದ್ದೇವೆ. ಆದರೆ, ಟ್ರಾಫಿಕ್ ಜಾಮ್‌ನಿಂದ ಟೆಸ್ಟ್ ಪಂದ್ಯದ ಒಂದು ಅವಧಿ (ಸೆಷನ್) ಅನ್ನು ಅರ್ಧ ಗಂಟೆ ವಿಸ್ತರಣೆ ಮಾಡಿದ್ದನ್ನು ಕೇಳಿದ್ದೀರಾ?.
ಇಂತಹ ಅಪರೂಪದ ಘಟನೆಗೆ ನಡೆದಿದ್ದು ನಮ್ಮ ಬೆಂಗಳೂರಿನಲ್ಲಿ. ಬೆಂಗಳೂರು ಟ್ರಾಫಿಕ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದರ ಬಿಸಿ ಅನಧೀಕೃತ ಟೆಸ್ಟ್ ಪಂದ್ಯಕ್ಕೂ ತಟ್ಟಿದೆ.
ಬೆಂಗಳೂರು ಹೊರ ವಲಯದ ಆಲೂರಿನಲ್ಲಿ ಭಾರತ ‘ಎ’ ಹಾಗೂ ಆಸ್ಟ್ರೇಲಿಯಾ ‘ಎ’ ನಡುವಿನ 2ನೇ ಅನಧಿಕೃತ ಟೆಸ್ಟ್ ಶನಿವಾರದಿಂದ ಪಂದ್ಯ ಆರಂಭವಾಗಿದ್ದು,
ಸಂಚಾರ ದಟ್ಟಣೆ ಕಾರಣ ಸೂಕ್ತ ಸಮಯಕ್ಕೆ ಆಟಗಾರರಿಗೆ ತಲುಪಬೇಕಿದ್ದ ಆಹಾರ ಕ್ರೀಡಾಂಗಣ ತಲುಪಲಿಲ್ಲ. ಆದಕಾರಣ ಬೆಳಿಗ್ಗೆ 11.30ಕ್ಕೆ ಮುಕ್ತಾಯಗೊಳ್ಳಬೇಕಾದ ಮೊದಲ ಅವಧಿಯನ್ನು 12ರ ವರೆಗೆ ವಿಸ್ತರಿಸಲಾಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.