ರಾಹುಲ್ ದ್ರಾವಿಡ್ ದಾಖಲೆ ಸರಿಗಟ್ಟಿದ ಕೆಎಲ್ ರಾಹುಲ್

Published : Sep 09, 2018, 11:13 AM ISTUpdated : Sep 09, 2018, 09:41 PM IST
ರಾಹುಲ್ ದ್ರಾವಿಡ್ ದಾಖಲೆ ಸರಿಗಟ್ಟಿದ ಕೆಎಲ್ ರಾಹುಲ್

ಸಾರಾಂಶ

ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ದಾಖಲೆ ಬರೆದಿದ್ದಾರೆ. ವಿಶೇಷ ಅಂದರೆ ಮಾಜಿ ನಾಯಕ, ಕನ್ನಡಿಗ ರಾಹುಲ್ ದ್ರಾವಿಡ್ ದಾಖಲೆಯನ್ನ ಮತ್ತೊರ್ವ ಕನ್ನಡಿಗ ರಾಹುಲ್ ಸರಿಗಟ್ಟಿದ್ದಾರೆ. ಇಲ್ಲಿದೆ ರಾಹುಲ್ ದಾಖಲೆ ವಿವರ.

ಓವಲ್(ಸೆ.09): ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸರಣಿಯಲ್ಲಿ ಭಾರತ ಹಿನ್ನಡೆ ಅನುಭವಿಸಿದೆ ನಿಜ. ಆದರೆ ಸರಣಿಯಲ್ಲಿ ಹಲವು ದಾಖಲೆ ಬರೆಯುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿದೆ. ಇದೀಗ ಕನ್ನಡಿಗ ಕೆಎಲ್ ರಾಹುಲ್ ಗರಿಷ್ಠ ಕ್ಯಾಚ್ ಹಿಡಿಯೋ ಮೂಲಕ ದಾಖಲೆ ಬರೆದಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 13 ಕ್ಯಾಚ್ ಹಿಡಿಯುವ ಮೂಲಕ ಕೆ. ಎಲ್. ರಾಹುಲ್, ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್ ದಾಖಲೆಯನ್ನು
ಸರಿಗಟ್ಟಿದ್ದಾರೆ.  ದ್ರಾವಿಡ್ 2004ರ ಆಸ್ಟ್ರೇಲಿಯಾ ಸರಣಿಯಲ್ಲಿ 13 ಕ್ಯಾಚ್ ಹಿಡಿದಿದ್ದರು. 

1972-73ರಲ್ಲಿ ಭಾರತದ ಮಾಜಿ ಆಲ್ರೌಂಡರ್ ಏಕ್‌ನಾಥ್  ಸೋಲ್ಕರ್ ಇಂಗ್ಲೆಂಡ್ ವಿರುದ್ಧ ದ ಟೆಸ್ಟ್ ಸರಣಿಯಲ್ಲಿ 12 ಕ್ಯಾಚ್ ಹಿಡಿದಿದ್ದರು. ಇದೀಗ ರಾಹುಲ್, ಸೋಲ್ಕಾರ್‌ರನ್ನು ಹಿಂದಿಕ್ಕಿದ್ದಾರೆ. ಸರಣಿಯಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಭಾರತೀಯ ಕ್ಷೇತ್ರರಕ್ಷಕರಲ್ಲಿ ದ್ರಾವಿಡ್ ಮೊದಲ ಮತ್ತು ರಾಹುಲ್ 2ನೇ ಸ್ಥಾನದಲ್ಲಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶೀ ಕ್ರಿಕೆಟ್‌ನ Uncapped ಜೋಡೆತ್ತು ಖರೀದಿಸಲು ದಾಖಲೆ ಮೊತ್ತ ಖರ್ಚು ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್‌!
ಕ್ಯಾಮರೋನ್ ಗ್ರೀನ್ ಬಳಿಕ ಮತ್ತೋರ್ವ ಕಾಸ್ಟ್ಲಿ ಆಟಗಾರನನ್ನು ಖರೀದಿಸಿದ ಕೋಲ್ಕತಾ! ಕೆಕೆಆರ್ ಈಗ ಮತ್ತಷ್ಟು ಬಲಿಷ್ಠ