ವೆಸ್ಟ್ ಇಂಡೀಸ್ ಮಣಿಸಿ ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ

By Web DeskFirst Published Oct 14, 2018, 5:21 PM IST
Highlights

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ 2ನೇ ಟೆಸ್ಟ್ ಪಂದ್ಯ ಮೂರೇ ದಿನಕ್ಕೆ ಮುಕ್ತಾಯಗೊಂಡಿದೆ. ಆರಂಭದಲ್ಲಿ ಅಬ್ಬರಿಸಿದ ವಿಂಡೀಸ್, ಬಳಿಕ ಚೇತರಿಸಿಕೊಳ್ಳಲೇ ಇಲ್ಲ. ಮೂರು ದಿನ ಭರ್ಜರಿ ಮೇಲುಗೈ ಸಾಧಿಸಿದ ಭಾರತ ಸರಣಿ ಕ್ಲೀನ್ ಸ್ವೀಪ್ ಮಾಡಿದೆ. ಇಲ್ಲಿದೆ ಪಂದ್ಯದ ಹೈಲೈಟ್ಸ್

ಹೈದರಾಬಾದ್(ಅ.14): ವೆಸ್ಟ್ಇಂಡೀಸ್ ವಿರುದ್ಧದ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ 10 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಗೆಲುವಿಗೆ 72 ರನ್ ಟಾರ್ಗೆಟ್ ಪಡೆದಿದ್ದ ಭಾರತ 16.1 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ಗುರಿ ತಲುಪಿತು.  ಈ ಮೂಲಕ  2-0 ಅಂತರದಲ್ಲಿಸರಣಿ ಗೆದ್ದು ಗೆದ್ದು  ಕ್ಲೀನ್ ಸ್ವೀಪ್ ಸಾಧನೆ ಮಾಡಿತು. 

ರಾಜ್‌ಕೋಟ್ ಟೆಸ್ಟ್ ಪಂದ್ಯದ ಬಳಿಕ ಹೈದರಾಬಾದ್ ಟೆಸ್ಟ್ ಪಂದ್ಯವನ್ನೂ ಮೂರೇ ದಿನಕ್ಕೆ ಮುಗಿಸಿದ ಹೆಗ್ಗಳಿಕೆಗೆ ಟೀಂ ಇಂಡಿಯಾ ಪಾತ್ರವಾಗಿದೆ. 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ವೆಸ್ಟ್ಇಂಡೀಸ್ ಮೊದಲ ಇನ್ನಿಂಗ್ಸ್‌ನಲ್ಲಿ 311 ರನ್ ಸಿಡಿಸಿತು. ರೋಸ್ಟನ್ ಚೇಸ್ ಸೆಂಚುರಿ ಸಿಡಿಸೋ ಮೂಲಕ ವಿಂಡೀಸ್ ತಂಡಕ್ಕೆ ಆಸರೆಯಾಗಿದ್ದರು.

ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 362 ರನ್ ಸಿಡಿಸಿ 56 ರನ್ ಮುನ್ನಡೆ ಪಡೆದುಕೊಂಡಿತು. ಪೃಥ್ವಿ ಶಾ 70, ಅಜಿಂಕ್ಯ ರಹಾನೆ 80 ಹಾಗೂ ರಿಷಬ್ ಪಂತ್ 92 ರನ್ ಕಾಣಿಕೆ ನೀಡಿದ್ದರು.

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕುಸಿತ ಕಂಡ ವೆಸ್ಟ್ಇಂಡೀಸ್ 127 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಭಾರತದ ಗೆಲುವಿಗೆ 72 ರನ್ ಟಾರ್ಗೆಟ್ ನೀಡಿತು. ಉಮೇಶ್ ಯಾದವ್ 4 ವಿಕೆಟ್ ಕಬಳಿಸೋ ಮೂಲಕ ಒಟ್ಟು ಹೈದರಾಬಾದ್ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಕಬಳಿಸಿದರು. 

ಸುಲಭ ಟಾರ್ಗೆಟ್ ಪಡೆದ ಟೀಂ ಇಂಡಿಯಾಗೆ ಪೃಥ್ವಿ ಶಾ ಹಾಗೂ ಕೆಎಲ್ ರಾಹುಲ್ ಅತ್ಯುತ್ತಮ ಆರಂಭ ನೀಡಿದರು. ಪೃಥ್ವಿ ಶಾ ಅಜೇಯ ರನ್ ಹಾಗೂ ಕೆಎಲ್ ರಾಹುಲ್ ಅಜೇಯ ರನ್ ಸಿಡಿಸಿದರು. ಈ ಮೂಲಕ ಭಾರತ 10 ವಿಕೆಟ್ ‌ಗೆಲುವು ಸಾಧಿಸಿತು. 2 ಪಂದ್ಯದ ಸರಣಿಯನ್ನ ಟೀಂ ಇಂಡಿಯಾ 2-0 ಅಂತರದಲ್ಲಿ ವಶಪಡಿಸಿಕೊಂಡಿತು.

click me!