ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಲು ಸಜ್ಜಾದ ವಿರಾಟ್ ಕೊಹ್ಲಿ!

By Web DeskFirst Published Oct 16, 2018, 5:40 PM IST
Highlights

ವೆಸ್ಟ್ಇಂಡೀಸ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ದಾಖಲೆ ಬರೆದ ನಾಯಕ ವಿರಾಟ್ ಕೊಹ್ಲಿ ಇದೀಗ ಮುಂಬರುವ ಏಕದಿನ ಸರಣಿಯಲ್ಲಿ ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಲು ರೆಡಿಯಾಗಿದ್ದಾರೆ.  ಅಷ್ಟಕ್ಕೂ ಕೊಹ್ಲಿ ನಿರ್ಮಿಸಲಿರುವ ಹೊಸ ದಾಖಲೆ ಯಾವುದು?

ಬೆಂಗಳೂರು(ಅ.16): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪ್ರತಿ ಪಂದ್ಯ, ಪ್ರತಿ ಸರಣಿಯಲ್ಲಿ ದಾಖಲೆ ನಿರ್ಮಿಸುತ್ತಿದ್ದಾರೆ. ವೆಸ್ಟ್ಇಂಡೀಸ್ ವಿರುದ್ಧದ  ಟೆಸ್ಟ್ ಸರಣಿಯಲ್ಲಿ ಗರಿಷ್ಠ ರನ್ ಸಿಡಿಸಿ ಏಷ್ಯಾ ಟೆಸ್ಟ್ ನಾಯಕ ಅನ್ನೋ  ದಾಖಲೆ ಬರೆದಿದ್ದಾರೆ. ಇದೀಗ ವೆಸ್ಟ್ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಮಾಸ್ಟರ್ ಬ್ಲಾಸ್ಟರ್  ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಲು ಸಜ್ಜಾಗಿದ್ದಾರೆ.

ವೆಸ್ಟ್ಇಂಡೀಸ್ ವಿರುದ್ಧದ 5 ಏಕದಿನ ಪಂದ್ಯಗಳ ಸರಣಿಯಲ್ಲಿ ನಾಯಕ ವಿರಾಟ್ ದಾಖಲೆ ಬರೆಯಲು ರೆಡಿಯಾಗಿದ್ದಾರೆ. ಏಕದಿನ ಮಾದರಿಯಲ್ಲಿ ವೆಸ್ಟ್ಇಂಡೀಸ್ ವಿರುದ್ಧದ ಗರಿಷ್ಠ ರನ್ ಸಿಡಿಸಿ ಹೆಗ್ಗಳಿಕೆಗೆ ಸಚಿನ್ ತೆಂಡೂಲ್ಕರ್ ಪಾತ್ರವಾಗಿದ್ದಾರೆ. ವಿಂಡೀಸ್ ವಿರುದ್ಧ ಸಚಿನ್ 39 ಏಕದಿನ ಪಂದ್ಯದಿಂದ 1573 ರನ್ ಸಿಡಿಸಿದ್ದಾರೆ.

ಸಚಿನ್ ತೆಂಡೂಲ್ಕರ್ ಈ ದಾಖಲೆಯನ್ನ ಮುರಿಯಲು ವಿರಾಟ್ ಕೊಹ್ಲಿಗಿನ್ನು ಕೇವಲ 187 ರನ್‌ಗಳ ಅವಶ್ಯಕತೆ ಇದೆ. ಕೊಹ್ಲಿ ವಿಂಡೀಸ್ ವಿರುದ್ದದ 27 ಏಕದಿನ ಪಂದ್ಯದಿಂದ 1387 ರನ್ ಸಿಡಿಸಿದ್ದಾರೆ. ಇನ್ನು ಬ್ಯಾಟಿಂಗ್ ಸರಾಸರಿ 60.30. 4 ಶತಕ ಹಾಗೂ 9 ಅರ್ಧಶತಕ ಸಿಡಿಸಿದ್ದಾರೆ.

ವೆಸ್ಟ್ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗರಿಷ್ಟ ರನ್ ಸಿಡಿಸಿದ ಭಾರತೀಯರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 3ನೇ ಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನವನ್ನು ರಾಹುಲ್ ದ್ರಾವಿಡ್ ಅಲಂಕರಿಸಿದ್ದಾರೆ. ದ್ರಾವಿಡ್ 40 ಏಕದಿನ ಪಂದ್ಯದಿಂದ 1348 ರನ್ ಸಿಡಿಸಿದ್ದಾರೆ.
 

click me!