ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಲು ಸಜ್ಜಾದ ವಿರಾಟ್ ಕೊಹ್ಲಿ!

Published : Oct 24, 2018, 09:28 AM IST
ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಲು ಸಜ್ಜಾದ ವಿರಾಟ್ ಕೊಹ್ಲಿ!

ಸಾರಾಂಶ

ಪ್ರತಿ ಪಂದ್ಯದಲ್ಲಿ ದಾಖಲೆ ಬರೆಯುತ್ತಿರುವ ನಾಯಕ ವಿರಾಟ್ ಕೊಹ್ಲಿ ಇದೀಗ ಎರಡನೇ ಏಕದಿನ ಪಂದ್ಯದಲ್ಲಿ ಐತಿಹಾಸಿಕ ಸಾಧನೆ ಮಾಡಲು ಮುಂದಾಗಿದ್ದಾರೆ. ಈ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಮತ್ತೊಂದು ದಾಖಲೆ ಮುರಿಯಲು ಕೊಹ್ಲಿ ರೆಡಿಯಾಗಿದ್ದಾರೆ.

ವಿಶಾಖಪಟ್ಟಣ(ಅ.24):  ಅದ್ಭುತ ಫಾರ್ಮ್‌ನಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ವಿಶಾಖಪಟ್ಟಣದಲ್ಲಿ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಪೂರೈಸಲು ಕೊಹ್ಲಿಗೆ ಇನ್ನೂ81 ರನ್ ಅವಶ್ಯಕವಾಗಿದೆ. ಈಗಷ್ಟೇ ಕೊಹ್ಲಿ 204 ಇನಿಂಗ್ಸ್‌ನಲ್ಲಿ ಆಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ವೇಗದ 10 ಸಾವಿರ ರನ್ ಪೂರೈಸಿದವರ ಪಟ್ಟಿಯಲ್ಲಿ ಸದ್ಯ ಭಾರತದ ಸಚಿನ್ ತೆಂಡುಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ. ಸಚಿನ್ ಈ ಸಾಧನೆ ಮಾಡಲು 259 ಇನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು. 

ಭಾರತದ ನಾಲ್ವರು ಆಟಗಾರರು ಏಕದಿನ ಕ್ರಿಕೆಟ್‌ನಲ್ಲಿ10 ಸಾವಿರ ರನ್‌ಗಳಿಸಿದ್ದಾರೆ. ಶ್ರೀಲಂಕಾದ ಮಹೇಲ ಜಯವರ್ಧನೆ 333 ಇನಿಂಗ್ಸ್‌ಗಳಲ್ಲಿ 10 ಸಾವಿರ ರನ್‌ಗಳಿಸಿದ್ದರು. ಉಳಿದಂತೆ ಭಾರತದ ಮಾಜಿ ನಾಯಕರಾದ ಸೌರವ್ ಗಂಗೂಲಿ (263) ಇನಿಂಗ್ಸ್, ರಾಹುಲ್ ದ್ರಾವಿಡ್ (287) ಇನಿಂಗ್ಸ್ ಮತ್ತು ಎಂ.ಎಸ್. ಧೋನಿ (273) ಇನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ. 

ಶರವೇಗದ 10 ಸಹಸ್ರ ರನ್ ಸರದಾರರು

ಆಟಗಾರಇನಿಂಗ್ಸ್
ಸಚಿನ್ ತೆಂಡುಲ್ಕರ್259
ಸೌರವ್ ಗಂಗೂಲಿ263
ರಿಕ್ಕಿ ಪಾಂಟಿಂಗ್266
ಜಾಕ್ ಕಾಲೀಸ್272
ಎಂ.ಎಸ್. ಧೋನಿ273

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

U19 Asia Cup ವೈಭವ್ ಸೂರ್ಯವಂಶಿ ದ್ವಿಶತಕ ಜಸ್ಟ್‌ ಮಿಸ್; ಉದ್ಘಾಟನಾ ಪಂದ್ಯದಲ್ಲೇ ಬೃಹತ್ ಮೊತ್ತ ಗಳಿಸಿದ ಭಾರತ!
U19 Asia Cup: ಮತ್ತೆ ಸಿಕ್ಸರ್ ಸುರಿಮಳೆ ಹರಿಸಿ ಸ್ಪೋಟಕ ಶತಕ ಚಚ್ಚಿದ ವೈಭವ್ ಸೂರ್ಯವಂಶಿ!