
ಹಾಸನ(ಅ.24): ಲೋಕಸಭಾ ಚುನಾವಣೆಗೆ ಬಿಜೆಪಿ ಈಗಲೇ ಭರ್ಜರಿ ಸಿದ್ದತೆ ನಡೆಸುತ್ತಿದೆ. ಈಗಾಗಲೇ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಹಾಗೂ ಗೌತಮ್ ಗಂಭೀರ್‌ಗೆ ಗಾಳ ಹಾಕಿರುವ ಬಿಜೆಪಿ ಇದೀಗ ಮಾಜಿ ಕ್ರಿಕೆಟಿಗ, ಕನ್ನಡಿಗ ಜಾವಗಲ್ ಶ್ರೀನಾಥ್ ಕಣಕ್ಕಿಳಿಸಲು ಪ್ಲಾನ್ ಮಾಡಿದೆ.
ಜೆಡಿಎಸ್ ಪ್ರಾಬಲ್ಯ ಹೊಂದಿರೋ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅಥವಾ ಕ್ಯಾಪ್ಟನ್ ಗೋಪಿನಾಥ್‌ಗೆ ಟಿಕೆಟ್ ಕೊಡಲು ಬಿಜೆಪಿ ತಯಾರಿ ನಡೆಸಿದೆ. ಈ ಮೂಲಕ 2019ರ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷವನ್ನ ಮಣಿಸಲು ಕರ್ನಾಟಕ ಬಿಜೆಪಿ ಮುಂದಾಗಿದೆ.
"
ಹಾಸನ ಕ್ಷೇತ್ರದಲ್ಲಿ ದೇವೇಗೌಡರ ಬದಲು ಪ್ರಜ್ವಲ್ ಸ್ಪರ್ಧೆ ಮಾಡಿದರೆ ಹಾಸನ ಜಿಲ್ಲೆಯವರೇ ಆಗಿರೊ ಶ್ರೀನಾಥ್ ಅಥವಾ ಗೋಪಿನಾಥ್ ಕಣಕ್ಕಿಳಿ, ಜೆಡಿಎಸ್‌ಗೆ ಸೋಲಿಸಲು ಬಿಜೆಪಿ ರಣತಂತ್ರ ಮಾಡಿದೆ. ಇಷ್ಟೇ ಅಲ್ಲ ಹಾಸನದಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಬಗ್ಗೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರಲ್ಲಿರೊ ಅಸಮಾಧಾನ ಲಾಭ ಪಡೆಯಲು ಬಿಜೆಪಿ ರೆಡಿಯಾಗಿದೆ.
ಜೆಡಿಎಸ್ ಕಾಂಗ್ರೆಸ್ ಮೈತ್ರಿಬಗ್ಗೆ ಅಸಮಧಾನ ಇರೋ ನಾಯಕರುಗಳನ್ನ ಬಿಜೆಪಿಗೆ ಸೆಳೆದು ಮೈತ್ರಿ ಪಕ್ಷವನ್ನ ವೀಕ್ ಮಾಡಲು ಬಿಜೆಪಿ ಮುಂದಾಗಿದೆ. ಇದರ ಮೊದಲ ಅಂಗವಾಗಿ ಕಾಂಗ್ರೆಸ್ ನ ಮಾಜಿ ಸಚಿವರುಗಳಾದ ಎ.ಮಂಜು,ಅಥವಾ ಬಿ.ಶಿವರಾಂ ರನ್ನ ಪಕ್ಷಕ್ಕೆ ಸೆಳೆಯೋ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಎಂದು ಸುವರ್ಣನ್ಯೂಸ್.ಕಾಂಗೆ ಬಿಜೆಪಿ ಉನ್ನತ ಮೂಲಗಳ ಮಾಹಿತಿ ನೀಡಿದೆ.
ಇಷ್ಟೇ ಅಲ್ಲ, ಜೆಡಿಎಸ್ ವರಿಷ್ಠರ ತವರಿನಲ್ಲೇ ಮೈತ್ರಿ ಪಕ್ಷಕ್ಕೆ ಬಿಗ್ ಶಾಕ್ ಕೊಡಲು ಅಮಿತ್ ಶಾ ಮತ್ತೊಂದು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಕಾಂಗ್ರೆಸ್ ನಾಯಕರು ಪಕ್ಷಕ್ಕೆ ಬರದಿದ್ದರೆ ಸೆಲೆಬ್ರೆಟಿಗಳನ್ನ ಕಣಕ್ಕಿಳಿಸಿ ಟಫ್ ಫೈಟ್ ನೀಡೋ ಕುರಿತು ಈಗಾಗಲೇ ಚರ್ಚೆ ನಡೆಸಲಾಗಿದೆ.
ಚುನಾವಣೆ ಆರು ತಿಂಗಳು ಬಾಕಿ ಇರುವಾಗಲೆ ಹಾಸನದ ಅಭ್ಯರ್ಥಿ ಆಯ್ಕೆ ಬಗ್ಗೆ ಬಿಜೆಪಿ ತಲೆಕೆಡಿಸಿಕೊಂಡಿದೆ. ಈ ಕುರಿತು ಬಿಜೆಪಿ ರಾಜ್ಯ ನಾಯಕರೊಂದಿಗೆ ಚರ್ಚಿಸಿರೊ ವರಿಷ್ಠರು ಶೀಘ್ರದಲ್ಲೇ ಪಕ್ಷದ ಅಭ್ಯರ್ಥಿಯನ್ನ ಅಂತಿಮಗೊಳಿಸಲು ನಿರ್ಧರಿಸಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.