ಧೋನಿ-ಕೊಹ್ಲಿಯಿಂದ ಇಂದು ಎರಡೆರಡು ದಾಖಲೆ ನಿರ್ಮಾಣ..?

By Suvarna NewsFirst Published Jul 14, 2018, 4:13 PM IST
Highlights

ಭಾರತ ತಂಡದ ಮಟ್ಟಿಗೆ ಒಟ್ಟಾರೆ ಧೋನಿ, ಕೊಹ್ಲಿ ಹಾಗೂ ಕುಲ್ದೀಪ್ ಇಂದು ಬಹುತೇಕ 5 ದಾಖಲೆಗಳು ನಿರ್ಮಾಣವಾಗುವ ಸಾಧ್ಯತೆಯಿದೆ.

ನಾಟಿಂಗ್’ಹ್ಯಾಮ್[ಜು.14]: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ದುಕೊಂಡಿದೆ. ಊಭಯ ತಂಡಗಳು ಕಳೆದ ಪಂದ್ಯದಲ್ಲಿ ಆಡಿದ ತಂಡದೊಂದಿಗೆ ಕಣಕ್ಕಿಳಿಯುತ್ತಿವೆ.
ಭಾರತ ತಂಡದ ಮಟ್ಟಿಗೆ ಇಂದು ಬಹುತೇಕ 5 ದಾಖಲೆಗಳು ನಿರ್ಮಾಣವಾಗುವ ಸಾಧ್ಯತೆಯಿದೆ.
1. ಮಹೇಂದ್ರ ಸಿಂಗ್ ಧೋನಿ ಇನ್ನು ಕೇವಲ 33 ರನ್ ಬಾರಿಸಿದರೆ 10 ಸಾವಿರ ರನ್ ಪೂರೈಸಿದ ಬ್ಯಾಟ್ಸ್’ಮನ್’ಗಳ ಕ್ಲಬ್ ಸೇರಲಿದ್ದಾರೆ. ಈ ಮೂಲಕ 10 ಸಾವಿರ ರನ್ ಪೂರೈಸಿದ ಭಾರತದ ನಾಲ್ಕನೇ[ಸಚಿನ್, ಸೌರವ್, ದ್ರಾವಿಡ್] ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್’ಮನ್’ಗಳ ಪೈಕಿ[ಸಂಗಕ್ಕರ ಬಳಿಕ] ಎರಡನೇ ಆಟಗಾರ ಎನಿಸಲಿದ್ದಾರೆ.

2. ವಿರಾಟ್ ಕೊಹ್ಲಿ ಇನ್ನು ಕೇವಲ 4 ರನ್ ಬಾರಿಸಿದರೆ ಇಂಗ್ಲೆಂಡ್ ವಿರುದ್ಧ ಒಂದು ಸಾವಿರ ರನ್ ಪೂರೈಸಿದ ಸಾಧನೆ ಮಾಡಲಿದ್ದಾರೆ.

3. ಇನ್ನು ವಿರಾಟ್ ಕೊಹ್ಲಿ 57 ರನ್ ಬಾರಿಸಿದರೆ ಅತಿವೇಗವಾಗಿ ಮೂರು ಸಾವಿರ ರನ್ ಪೂರೈಸಿದ ನಾಯಕ ಎಂಬ ದಾಖಲೆಯನ್ನು ಬರೆಯಲಿದ್ದಾರೆ.

4. ಮಹೇಂದ್ರ ಸಿಂಗ್ ಧೋನಿ ಇನ್ನು ಕೇವಲ 2 ಕ್ಯಾಚ್ ಹಿಡಿದರೆ ಏಕದಿನ ಕ್ರಿಕೆಟ್’ನಲ್ಲಿ 300 ಕ್ಯಾಚ್ ಹಿಡಿದ ಭಾರತದ ಮೊದಲ ವಿಕೆಟ್ ಕೀಪರ್ ಎನ್ನುವ ದಾಖಲೆ ಬರೆಯಲಿದ್ದಾರೆ.

5. ಕಳೆದ ಪಂದ್ಯದ ಹೀರೋ ಕುಲ್ದೀಪ್ ಯಾದವ್ ಇಂದಿನ ಪಂದ್ಯದಲ್ಲಿ 5 ವಿಕೆಟ್ ಕಬಳಿಸಿದರೆ 50 ವಿಕೆಟ್ ಕಬಳಿಸಿದ ಬೌಲರ್ ಎನ್ನುವ ಮೈಲಿಗಲ್ಲನ್ನು ಸ್ಥಾಪಿಸಲಿದ್ದಾರೆ. 

click me!