ಲಾರ್ಡ್ಸ್ ಟೆಸ್ಟ್: ಟೀಂ ಇಂಡಿಯಾ ಕಾಪಾಡಬೇಕಾದ ವಿರಾಟ್ ಕೊಹ್ಲಿ ಔಟ್

Published : Aug 10, 2018, 10:55 PM ISTUpdated : Sep 09, 2018, 09:23 PM IST
ಲಾರ್ಡ್ಸ್ ಟೆಸ್ಟ್:  ಟೀಂ ಇಂಡಿಯಾ ಕಾಪಾಡಬೇಕಾದ ವಿರಾಟ್ ಕೊಹ್ಲಿ ಔಟ್

ಸಾರಾಂಶ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಲಾರ್ಡ್ಸ್ ಟೆಸ್ಟ್ ಪಂದ್ಯ ಅಭಿಮಾನಿಗಳ ನಿರೀಕ್ಷೆಗಳನ್ನ ಬುಡಮೇಲು ಮಾಡಿದೆ. ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಇಳಿದಿರುವ ಟೀಂ ಇಂಡಿಯಾ ಬ್ಯಾಟಿಂಗ್ ಪ್ರದರ್ಶನ ಹೇಗಿದೆ? ಇಲ್ಲಿದೆ ಅಪ್‌ಡೇಟ್ಸ್.  

ಲಾರ್ಡ್ಸ್(ಆ.10): ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಅಲ್ಪಮೊತ್ತಕ್ಕೆ ಕುಸಿಯೋ ಭೀತಿ ಎದುರಿಸುತ್ತಿದೆ. ಆರಂಭದಲ್ಲೇ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಭಾರತ ತಂಡ್ಕೆ ನಾಯಕ ವಿರಾಟ್ ಕೊಹ್ಲಿ ಆಸರೆಯಾಗಿದ್ದರು. ಆದರೆ ಕೊಹ್ಲಿ 23 ರನ್ ಸಿಡಿಸಿ ಔಟಾಗಿದರೆ, ಹಾರ್ದಿಕ್ ಪಾಂಡ್ಯ 11 ರನ್ ಸಿಡಿಸಿ ಪೆವಿಲಿಯನ್ ಸೇರಿದ್ದಾರೆ.

ಲಾರ್ಡ್ಸ್ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮಳೆಯಿಂದಾಗಿ ರದ್ದಾಗಿತ್ತು. ಹೀಗಾಗಿ 2ನೇ ದಿನ ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತಕ್ಕೆ ಮಳೆರಾಯನ ಜೊತೆ ಇಂಗ್ಲೆಂಡ್ ತಂಡ ಕೂಡ ಕಾಡಿತು. ರನ್ ಖಾತೆ ಆರಂಭಿಸೋ ಮೂದಲೇ ಮುರಳಿ ವಿಜಯ್ ಪೆವಿಲಿಯನ್ ಸೇರಿಕೊಂಡರು.

ಕೆಎಲ್ ರಾಹುಲ್ 2 ಬೌಂಡರಿ ಬಾರಿಸಿ ಔಟಾದರು. ಇನ್ನು 2ನೇ ಟೆಸ್ಟ್ ಪಂದ್ಯದಲ್ಲಿ ಅವಕಾಶ ಪಡೆದ ಚೇತೇಶ್ವರ್ ಪೂಜಾರ 1 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಅಷ್ಟರಲ್ಲೇ 2 ಬಾರಿ ಮಳೆಗೆ ಸ್ಥಗಿತಗೊಂಡಿದ್ದ ಪಂದ್ಯ ಮತ್ತೆ ಸುದೀರ್ಘ ಅವಧಿಗೆ ಸ್ಥಗಿತಗೊಂಡಿತು. 

ಮಳೆ  ಬಳಿಕ ಪಂದ್ಯ ಆರಂಭಗೊಂಡಾಗ ನಾಯಕ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ತಂಡಕ್ಕೆ ಆಸರೆಯಾಗಿದ್ದರು. ಆದರೆ ಕೊಹ್ಲಿ ವಿಕೆಟ್ ಪತನದೊಂದಿಗೆ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ ಶೋಚನೀಯವಾಯಿತು. ಇನ್ನು ಹಾರ್ದಿಕ್ ಪಾಂಡ್ಯ 11 ರನ್ ಸಿಡಿಸಿ ಔಟಾದರು. ಇನ್ನು ದಿನೇಶ್ ಕಾರ್ತಿಕ್ 1 ರನ್ ಸಿಡಿಸಿ ಔಟಾದರು. ಸದ್ಯ ಭಾರತ 62 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಮಳೆಗಾಗಿ ಪ್ರಾರ್ಥಿಸುತ್ತಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Spain Cricket Team: ಕ್ರಿಕೆಟ್ ಲೋಕದಲ್ಲಿ ಹೊಸ ಇತಿಹಾಸ: ಆಸ್ಟ್ರೇಲಿಯಾದ ಆಲ್-ಟೈಮ್ ರೆಕಾರ್ಡ್ ಬ್ರೇಕ್ ಮಾಡಿದ ಸ್ಪೇನ್!
BCCI Centre of Excellence: ಬೆಂಗಳೂರಲ್ಲಿದೆ ಭಾರತದ ಕ್ರಿಕೆಟ್‌ ಫ್ಯಾಕ್ಟ್ರಿ; ₹500 ಕೋಟಿ ವೆಚ್ಚ