ಇಂಗ್ಲೆಂಡ್ ತಂಡದ 3ನೇ ವಿಕೆಟ್ ಪತನ-ತಿರುವು ಪಡೆಯುತ್ತಾ ಲಾರ್ಡ್ಸ್ ಟೆಸ್ಟ್?

By Web DeskFirst Published Aug 11, 2018, 5:22 PM IST
Highlights

ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ ಬೌಲರ್‌ಗಳು ಮೇಲುಗೈ ಸಾಧಿಸಿದ್ದಾರೆ. 2ನೇ ದಿನ ಇಂಗ್ಲೆಂಡ್  ವೇಗಿಗಳು ಆರ್ಭಟಿಸಿದ್ದರೆ, ಇದೀಗ ಭಾರತೀಯ ವೇಗಿಗಳು ಪ್ರಾಬಲ್ಯ ಸಾಧಿಸಿದ್ದಾರೆ. ತೃತೀಯ ದಿನದ ಅಪ್‌ಡೇಟ್ಸ್ ಇಲ್ಲಿದೆ.

ಲಾರ್ಡ್ಸ್(ಆ.11): ಟೀಂ ಇಂಡಿಯಾವನ್ನ 107 ರನ್‌ಗೆ ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 3ನೇ ವಿಕೆಟ್ ಕಳೆದುಕೊಂಡಿದೆ. ಈ ಮೂಲಕ ಲಾರ್ಡ್ಸ್ ಟೆಸ್ಟ್ ಕ್ಷಣ ಕ್ಷಣಕ್ಕೂ ತಿರುವು ಪಡೆದುಕೊಳ್ಳುತ್ತಿದೆ.

 

2nd Test. 21.2: WICKET! O Pope (28) is out, lbw Hardik Pandya, 77/3 https://t.co/hmeRhwkgfv

— BCCI (@BCCI)

 

ತೃತೀಯ ದಿನದಾಟದಲ್ಲಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಆರಂಭದಲ್ಲೇ  ಕೆಟನ್ ಜೆನ್ನಿಂಗ್ಸ್ 11 ರನ್ ಸಿಡಿಸಿ ಔಟಾದರು. ಇನ್ನ ಹಿರಿಯ ಬ್ಯಾಟ್ಸ್‌ಮನ್ ಆಲಿಸ್ಟ್ರೈರ್ ಕುಕ್ 21 ರನ್‌ಗೆ ನಿರ್ಮಿಸಿದರು.

ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಡೇವಿಡ್ ಮಲಾನ್ ಬದಲು ಅವಕಾಶ ಪಡೆದ ಯುವ ಬ್ಯಾಟ್ಸ್‌ಮನ್ ಒಲ್ಲಿ ಪೋಪ್ 28 ರನ್‌ ಕಾಣಿಕೆ ನೀಡಿ ನಿರ್ಗಮಿಸಿದರು. ಇಂಗ್ಲೆಂಡ್ 77 ರನ್‌ಗೆ 3 ವಿಕೆಟ್ ಕಳೆದುಕೊಂಡಿದೆ. ಆದರೆ ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಅಲ್ಪ ಮೊತ್ತ ಪೇರಿಸಿರೋ ಕಾರಣ ಮುನ್ನಡೆಗಾಗಿ ಇನ್ನು 30 ರನ್‌ಗಳ ಅವಶ್ಯಕತೆ ಇದೆ.

click me!