ಆಂಗ್ಲರಿಗೆ ಮೊದಲ ಶಾಕ್ ಕೊಟ್ಟ ಟೀಂ ಇಂಡಿಯಾ

By Web DeskFirst Published Aug 11, 2018, 4:21 PM IST
Highlights

ಭಾರತ ಮೊದಲ ಇನ್ನಿಂಗ್ಸ್’ನಲ್ಲಿ ಕೇವಲ 107 ರನ್’ಗಳಿಗೆ ಆಲೌಟ್ ಆಗಿ ಸಂಕಷ್ಟಕ್ಕೆ ಸಿಲುಕಿತ್ತು. ಮೂರನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಭಾರತೀಯ ವೇಗಿಗಳು ಮಾರಕವಾಗಿ ಪರಿಣಮಿಸಿದ್ದಾರೆ. ಜೆನ್ನಿಂಗ್ಸ್ ಕೇವಲ 11 ರನ್ ಬಾರಿಸಿ ಶಮಿ ಬೌಲಿಂಗ್’ನಲ್ಲಿ ಎಲ್’ಬಿ ಬಲೆಗೆ ಬಿದ್ದರೆ, ಮರು ಓವರ್’ನಲ್ಲೇ ಕುಕ್ 21 ರನ್ ಬಾರಿಸಿ ಇಶಾಂತ್ ಶರ್ಮಾಗೆ ವಿಕೆಟ್ ಒಪ್ಪಿಸಿದ್ದಾರೆ.

ಲಾರ್ಡ್ಸ್[ಆ.11]: ಭಾರತ-ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್’ನ ಮೂರನೇ ದಿನದ ಆರಂಭದಲ್ಲೇ ಮೊಹಮ್ಮದ್ ಶಮಿ ಇಂಗ್ಲೆಂಡ್ ಆರಂಭಿಕ ಕೇತನ್ ಜೆನ್ನಿಂಗ್ಸ್ ಅವರನ್ನು ಪೆವಿಲಿಯನ್’ಗೆ ಅಟ್ಟಿದರು. ಇದರ ಬೆನ್ನಲ್ಲೇ ಮತ್ತೋರ್ವ ಆರಂಭಿಕ ಬ್ಯಾಟ್ಸ್’ಮನ್ ಅಲಿಸ್ಟರ್ ಕುಕ್ ಬಲಿ ಪಡೆಯುವಲ್ಲಿ ಇಶಾಂತ್ ಶರ್ಮಾ ಯಶಸ್ವಿಯಾಗಿದ್ದಾರೆ.

ಭಾರತ ಮೊದಲ ಇನ್ನಿಂಗ್ಸ್’ನಲ್ಲಿ ಕೇವಲ 107 ರನ್’ಗಳಿಗೆ ಆಲೌಟ್ ಆಗಿ ಸಂಕಷ್ಟಕ್ಕೆ ಸಿಲುಕಿತ್ತು. ಮೂರನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ಭಾರತೀಯ ವೇಗಿಗಳು ಮಾರಕವಾಗಿ ಪರಿಣಮಿಸಿದ್ದಾರೆ. ಜೆನ್ನಿಂಗ್ಸ್ ಕೇವಲ 11 ರನ್ ಬಾರಿಸಿ ಶಮಿ ಬೌಲಿಂಗ್’ನಲ್ಲಿ ಎಲ್’ಬಿ ಬಲೆಗೆ ಬಿದ್ದರೆ, ಮರು ಓವರ್’ನಲ್ಲೇ ಕುಕ್ 21 ರನ್ ಬಾರಿಸಿ ಇಶಾಂತ್ ಶರ್ಮಾಗೆ ವಿಕೆಟ್ ಒಪ್ಪಿಸಿದ್ದಾರೆ. ಇದೀಗ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದ್ದು ಆಂಗ್ಲರ ಪಾಳಯದಲ್ಲಿ ಆತಂಕಕ್ಕೆ ಕಾರಣವಾಗಿದೆ.

ಭಾರತ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್’ನ ಮೊದಲ ದಿನದಾಟ ಮಳೆಯಿಂದ ರದ್ದಾಗಿತ್ತು. ಎರಡನೇ ದಿನ ಮಳೆಯಾಟದ ನಡುವೆಯೇ ವಿರಾಟ್ ಪಡೆ 107 ರನ್’ಗಳಿಗೆ ಸರ್ವಪತನ ಕಂಡಿತ್ತು. ಆ್ಯಂಡರ್’ಸನ್ 20 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದ್ದರು.   

click me!