ಅಂತಿಮ ಟೆಸ್ಟ್’ನಲ್ಲಿ ಶತಕ ಸಿಡಿಸಿದ ರಾಹುಲ್

By Web DeskFirst Published 11, Sep 2018, 5:56 PM IST
Highlights

ಐದನೇ ದಿನದಾಟದ ಊಟದ ವಿರಾಮದ ವೇಳೆಗೆ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 167 ರನ್ ಬಾರಿಸಿದ್ದು, ಇನ್ನೂ ಗೆಲ್ಲಲು 297 ರನ್’ಗಳ ಅವಶ್ಯಕತೆಯಿದೆ. 

ಓವಲ್[ಸೆ.11]: ಇಂಗ್ಲೆಂಡ್ ವಿರುದ್ಧದ ಟೆಸ್ಟ್’ನಲ್ಲಿ ಸತತ ವೈಫಲ್ಯ ಅನುಭವಿಸುತ್ತಿದ್ದ ಕರ್ನಾಟಕದ ಪ್ರತಿಭೆ ಕೆ.ಎಲ್ ರಾಹುಲ್ ಕೊನೆಗೂ ಶತಕ ಸಿಡಿಸಿ ನಿಟ್ಟುಸಿರು ಬಿಟ್ಟಿದ್ದಾರೆ. ಇದು ಟೆಸ್ಟ್ ಕ್ರಿಕೆಟ್’ನಲ್ಲಿ ರಾಹುಲ್ ಬಾರಿಸಿದ 5ನೇ ಶತಕವಾಗಿದೆ. ಟೂರ್ನಿಯುದ್ದಕ್ಕೂ ಪದೇಪದೇ ವಿಕೆಟ್ ಕೈಚೆಲ್ಲುತ್ತಿದ್ದ ರಾಹುಲ್ ಕೊನೆಗೂ ಫಾರ್ಮ್ ಕಂಡುಕೊಳ್ಳಲು ಸಫಲರಾಗಿದ್ದಾರೆ. ಇದು ಈ ಸರಣಿಯಲ್ಲಿ ಭಾರತೀಯ ಬ್ಯಾಟ್ಸ್’ಮನ್ ಸಿಡಿಸಿದ ಗರಿಷ್ಠ ವೈಯುಕ್ತಿಕ ಮೊತ್ತವಾಗಿದೆ. 

ಐದನೇ ದಿನದಾಟದ ಊಟದ ವಿರಾಮದ ವೇಳೆಗೆ ಟೀಂ ಇಂಡಿಯಾ 5 ವಿಕೆಟ್ ನಷ್ಟಕ್ಕೆ 167 ರನ್ ಬಾರಿಸಿದ್ದು, ಇನ್ನೂ ಗೆಲ್ಲಲು 297 ರನ್’ಗಳ ಅವಶ್ಯಕತೆಯಿದೆ. ರಾಹುಲ್ 108 ಹಾಗೂ ರಿಶಭ್ ಪಂತ್ 12 ರನ್ ಬಾರಿಸಿ ಕ್ರೀಸ್’ನಲ್ಲಿದ್ದಾರೆ. 

ಇಂಗ್ಲೆಂಡ್ ನೀಡಿದ್ದ 463 ರನ್’ಗಳ ಗುರಿ ಬೆನ್ನತ್ತಿರುವ ಟೀಂ ಇಂಡಿಯಾ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ರಹಾನೆ-ರಾಹುಲ್ ಜೋಡಿ 118 ರನ್’ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಅಲ್ಪ ಆಸರೆಯಾದರು. ಆದರೆ ರಹಾನೆ ಕೆಟ್ಟ ಹೊಡೆತ್ಕೆ ಕೈಹಾಕಿ ಮೊಯಿನ್ ಅಲಿಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಹನುಮಾ ವಿಹಾರಿ ಕೂಡ ಶೂನ್ಯ ಸುತ್ತಿ ಪೆವಿಲಿಯನ್ ಸೇರಿಕೊಂಡರು. 
 

Last Updated 19, Sep 2018, 9:23 AM IST