CSK ಟಾಸ್ ಗೆದ್ರೆ ಧೋನಿಗೆ ನಿಮ್ಮ ಸಲಹೆ ಏನು? IIT ಸೆಮಿಸ್ಟರ್ ಪರೀಕ್ಷೆಯಲ್ಲಿ ಪ್ರಶ್ನೆ!

By Web Desk  |  First Published May 8, 2019, 4:05 PM IST

ಐಪಿಎಲ್ ಪಂದ್ಯಗಳು ಇದೀಗ ಸೆಮಿಸ್ಟರ್‌ ಪರೀಕ್ಷೆಯಲ್ಲೂ ಸದ್ದು ಮಾಡುತ್ತಿದೆ. IIT ಸೆಮಿಸ್ಟರ್ ಪರೀಕ್ಷೆಯಲ್ಲಿ 12ನೇ ಆವೃತ್ತಿ IPL ಟೂರ್ನಿಯ ಮೊದಲ ಕ್ವಾಲಿಫೈಯರ್ ಪಂದ್ಯದ ಕುರಿತು ಪ್ರಶ್ನೆ ಕೇಳಲಾಗಿತ್ತು. ಆದರೆ ಫ್ರೋಫೆಸರ್ ಕೇಳಿದ ಪ್ರಶ್ನೆಗೆ ಸ್ವತಃ CSK ನಾಯಕ ಧೋನಿ ಉತ್ತರಿಸುವುದು ಕಷ್ಟ.  ಇಲ್ಲಿದೆ ಸೆಮಿಸ್ಟರ್‌ ಪ್ರಶ್ನೆ.


ಚೆನ್ನೈ(ಮೇ.08): ಐಪಿಎಲ್ ಟೂರ್ನಿ ಕ್ರಿಕೆಟ್ ಪ್ರೇಮಿಗಳನ್ನ ಮಾತ್ರ ಆವರಿಸಿಕೊಂಡಿಲ್ಲ, ಲೋಕಸಭಾ ಚುನಾವಣೆ ಎದುರಿಸುತ್ತಿರುವ ರಾಜಕೀಯ ಮುಖಂಡರಿಂದ ಹಿಡಿದು, ಎಲ್ಲರಲ್ಲೂ ಚುಟುಕು ಹಬ್ಬದ ಜ್ವರ ಆವರಿಸಿದೆ. ಇದೀಗ ಮದ್ರಾಸ್ IIT ಸೆಮಿಸ್ಟರ್ ಪರೀಕ್ಷೆಗೂ IPL ಫೀವರ್ ತಟ್ಟಿದೆ.  IIT ಸೆಮಿಸ್ಟರ್ ಪರೀಕ್ಷೆಯಲ್ಲಿ 12ನೇ ಆವೃತಿಯ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ IPL ಪ್ರಶ್ನೆ ಕೇಳಲಾಗಿದೆ.

ಇದನ್ನೂ ಓದಿ: CSK ಮಣಿಸಿ ಫೈನಲ್‌ಗೆ ಎಂಟ್ರಿ ಕೊಟ್ಟ ಮುಂಬೈ ಇಂಡಿಯನ್ಸ್!

Latest Videos

undefined

ಮದ್ರಾಸ್ IIT ಸೆಮಿಸ್ಟರ್ ಪರೀಕ್ಷೆಯಲ್ಲಿ ಕೇಳಲಾದ IPL ಪ್ರಶ್ನೆ ಇದೀಗ ಭಾರಿ ವೈರಲ್ ಆಗಿದೆ. ಐಸಿಸಿ ಕೂಡ ಸಾಮಾಜಿಕ ಜಾಲತಾಣದಲ್ಲಿ IIT ಸೆಮಿಸ್ಟರ್ ಪರೀಕ್ಷೆ ಪ್ರಶ್ನೆಯನ್ನು ಪೋಸ್ಟ್ ಮಾಡಿದೆ.  ಇಷ್ಟೇ ಅಲ್ಲ ಈ ಪ್ರಶ್ನೆಗೆ ಸ್ವತಃ ಧೋನಿ ಉತ್ತರಿಸುವುದು ಕಷ್ಟ ಅನ್ನೋ ಮಾತುಗಳು ಕೇಳಿಬಂದಿದೆ.  

ಇದನ್ನೂ ಓದಿ: RCB ಸೋಲಿಗೆ ಕಾರಣ ತಿಳಿಸಿದ ವಿಜಯ್ ಮಲ್ಯ!

ಡೇ ಅಂಡ್ ನೈಟ್ ಕ್ರಿಕೆಟ್ ಪಂದ್ಯಗಳಲ್ಲಿ ಇಬ್ಬನಿ(ಡ್ಯೂ) ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಮೈದಾನದ ಹುಲ್ಲಿನ ಮೇಲೆ ಇಬ್ಬನಿ ಇದ್ದರೆ ಬಾಲ್ ಒದ್ದೆಯಾಗುತ್ತೆ. ಇದರಿಂದ ಸ್ಪಿನ್ನರ್‌ಗಳಿಗೆ ಬಾಲ್ ಗ್ರಿಪ್ ಸಿಗುವುದಿಲ್ಲ. ಇನ್ನು ವೇಗಿಗಳಿಗೆ ಲೈನ್ ಅಂಡ್ ಲೆಂಥ್ ಬೌಲಿಂಗ್ ಮಾಡಲು ಸಾಧ್ಯವಾಗುವುದಿಲ್ಲ. ಇನ್ನು ಫೀಲ್ಡರ್‌ಗಳಿಗೂ ಕಷ್ಟ. ಹೀಗಾಗಿ ಬೌಲಿಂಗ್ ಮಾಡುವು ತಂಡಕ್ಕೆ ಹಿನ್ನಡೆಯಾಗುವು ಸಾಧ್ಯತಗಳೇ ಹೆಚ್ಚು. ಮೇ 7 ರಂದು ನಡೆಯಲಿರುವ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ತಂಡ ಆಡಲಿದೆ. ಮೇ 7 ರಂದು ಚೆನ್ನೈ ಹ್ಯುಮಿಡಿಟಿ ಶೇಕಡಾ 70 ರಷ್ಟು ಇರಲಿದೆ. ಇನ್ನು ತಾಪಮಾನ 39 ಡಿಗ್ರಿ . ಇನ್ನು 2ನೇ ಇನ್ನಿಂಗ್ಸ್ ವೇಳೆ ತಾಪಮಾನ 27 ಡಿಗ್ರಿಗೆ ಇಳಿಯಲಿದೆ. ಇಂತಹ ಸಂದರ್ಭದಲ್ಲಿ CSK ನಾಯಕ ಧೋನಿ ಟಾಸ್ ಗೆದ್ದರೆ, ಯಾವುದು ಆಯ್ಕೆ ಮಾಡಲು ನೀವು ಸೂಚಿಸುವಿರಿ? ಎಂದು ಸೆಮಿಸ್ಟರ್‌ನಲ್ಲಿ ಪ್ರಶ್ನೆ ಕೇಳಲಾಗಿದೆ.

 

 

ಮೊದಲ ಕ್ವಾಲಿಫೈಯರ್ ಪಂದ್ಯಕ್ಕೂ ಮುನ್ನ ನಡೆದ ಸೆಮಿಸ್ಟರ್ ಪರೀಕ್ಷೆಯಲ್ಲಿ ಈ ಪ್ರಶ್ನೆ ಕೇಳಲಾಗಿತ್ತು. ಇದೀಗ ಮೊದಲ ಕ್ವಾಲಿಫೈಯರ್ ಪಂದ್ಯ ಮುಕ್ತಾಯಗೊಂಡಿದೆ. ಟಾಸ್ ಗೆದ್ದ ಧೋನಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಚೆನ್ನೈ 4 ವಿಕೆಟ್ ನಷ್ಟಕ್ಕೆ 131 ರನ್ ಸಿಡಿಸಿತು. ಸುಲಭ ಮೊತ್ತವನ್ನು ಚೇಸ್ ಮಾಡಿದ ಮುಂಬೈ 6 ವಿಕೆಟ್ ಗೆಲುವು ಸಾಧಿಸಿ ನೇರವಾಗಿ ಫೈನಲ್ ಪ್ರವೇಶಿಸಿದೆ.

click me!