ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಶುಭಾರಂಭ ಮಾಡಿದೆ. ಪಾಂಡಿಚೇರಿ ವಿರುದ್ದ ಹೋರಾಟ ನಡಿಸಿದ ಬೆಂಗಳೂರಿನ ಗೆಲುವಿನ ನಗೆ ಬೀರಿದೆ. ಇಲ್ಲಿದೆ ಪಂದ್ಯದ ಹೈಲೈಟ್ಸ್ ಇಲ್ಲಿದೆ.
ಪುಣೆ(ಮೇ.15): ಬಾಲೆವಾಡಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ರೈನೋಸ್ ತಂಡ ಶುಭಾರಂಭ ಮಾಡಿದೆ. ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಬೆಂಗಗಳೂರು ತಂಡ, ಪಾಂಡಿಚೇರಿ ಪ್ರೇಡಟರ್ಸ್ ವಿರುದ್ಧ 39-32 ಅಂಕಗಳಿಂದ ಜಯ ಸಾಧಿಸಿತು.
ಇದನ್ನೂ ಓದಿ: ಬಂಡಾಯ ಕಬಡ್ಡಿ ಲೀಗ್- ಹರ್ಯಾಣ ವಿರುದ್ಧ ಪುಣೆಗೆ ಜಯ!
ಮೊದಲ ಕ್ವಾರ್ಟರ್‌ನಲ್ಲಿ ಉತ್ತಮ ಪ್ರದರ್ಶನದೊಂದಿಗೆ 13-5 ರಿಂದ ಬೆಂಗಳೂರು ಮುನ್ನಡೆ ಪಡೆಯಿತು. 2ನೇ ಕ್ವಾರ್ಟರ್ ಮುಕ್ತಾಯಕ್ಕೆ 20-17ರಿಂದ ಮುಂದಿದ್ದ ಬೆಂಗಳೂರು, ಕೊನೆ 2 ಕ್ವಾರ್ಟರ್‌ಗಳಲ್ಲೂ ಉತ್ತಮ ಆಟ ಪ್ರದರ್ಶಿಸಿ ಗೆಲುವು ಸಾಧಿಸಿತು.
ಉದ್ಘಾಟನಾ ಪಂದ್ಯದಲ್ಲಿ ಪುಣೆ ತಂಡ, ಎದುರಾಳಿ ಹರ್ಯಾಣ ವಿರುದ್ಧ 43-34 ಅಂಕಗಳ ಅಂತರದಲ್ಲಿ ಜಯ ಸಾಧಿಸಿತು. ಶೇಕ್ ಅಬ್ದುಲ್ಲಾ ಅದ್ಭುತ ಆಟದ ನೆರವಿನಿಂದ ಪುಣೆ ತಂಡ ಜಯಭೇರಿ ಬಾರಿಸಿತು. ಅಬ್ದುಲ್ಲಾ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಪ್ರೊ ಕಬಡ್ಡಿಯಲ್ಲಿ 20 ನಿಮಿಷಗಳಂತೆ 2 ಅವಧಿಗೆ ಪಂದ್ಯ ನಡೆಸಿದರೆ ಇಲ್ಲಿ ತಲಾ 10 ನಿಮಿಷಗಳ 4 ಕ್ವಾರ್ಟರ್‌ಗಳಲ್ಲಿ ಪಂದ್ಯ ನಡೆದಿದ್ದು ಭಿನ್ನವಾಗಿತ್ತು.