ಬಂಡಾಯ ಕಬಡ್ಡಿ ಲೀಗ್- ಹರ್ಯಾಣ ವಿರುದ್ಧ ಪುಣೆಗೆ ಜಯ!

Published : May 14, 2019, 10:24 AM ISTUpdated : May 14, 2019, 10:25 AM IST
ಬಂಡಾಯ ಕಬಡ್ಡಿ ಲೀಗ್- ಹರ್ಯಾಣ ವಿರುದ್ಧ ಪುಣೆಗೆ ಜಯ!

ಸಾರಾಂಶ

ಪ್ರೋ ಕಬಡ್ಡಿ ಲೀಗ್ ಟೂರ್ನಿಗೆ ಬಂಡಾಯವಾಗಿ ಆರಂಭವಾಗಿ IIPKL ಕಬಡ್ಡಿ ಟೂರ್ನಿ ಅದ್ಧೂರಿಯಾಗಿ ಆರಂಭಗೊಂಡಿದೆ. ಪ್ರೋ ಕಬಡ್ಡಿ ಯಶಸ್ಸಿನ ಬೆನ್ನಲ್ಲೇ ಆರಂಭಗೊಂಡಿರುವ ಕಬಡ್ಡಿ ಟೂರ್ನಿಗೆ ಆರಂಭದಲ್ಲೇ ಪ್ರೇಕ್ಷಕರ ಕೊರತೆ ಕಂಡುಬಂತು.   

ಪುಣೆ(ಮೇ.14): ಪ್ರೊ ಕಬಡ್ಡಿಗೆ ಪರ್ಯಾಯವಾಗಿ ಆರಂಭವಾಗಿರುವ ಇಂಡೋ ಇಂಟರ್‌ನ್ಯಾಷನಲ್‌ ಪ್ರಿಮೀಯರ್‌ ಕಬಡ್ಡಿ ಲೀಗ್‌ನಲ್ಲಿ ಆತಿಥೇಯ ಪುಣೆ ಪ್ರೈಡ್‌ ತಂಡ ಶುಭಾರಂಭ ಮಾಡಿದೆ. ಇಲ್ಲಿನ ಬಾಲೆವಾಡಿ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ಅದ್ಧೂರಿ ಉದ್ಘಾಟನೆ ಕಂಡ ಐಐಪಿಕೆಎಲ್‌ಗೆ ಪ್ರೇಕ್ಷಕರ ಕೊರತೆ ಎದ್ದು ಕಂಡಿತು. 

ಇದನ್ನೂ ಓದಿ: ದಾಂಪತ್ಯಕ್ಕೆ ಕಾಲಿಟ್ಟ ಕಬಡ್ಡಿ ತಾರೆ ಅಜಯ್‌

ಉದ್ಘಾಟನಾ ಪಂದ್ಯದಲ್ಲಿ ಪುಣೆ, ಹರಾರ‍ಯಣ ವಿರುದ್ಧ 43-34 ಅಂಕಗಳ ಅಂತರದಲ್ಲಿ ಜಯ ಸಾಧಿಸಿತು. ಶೇಕ್‌ ಅಬ್ದುಲ್ಲಾ ಅದ್ಭುತ ಆಟದ ನೆರವಿನಿಂದ ಪುಣೆ ತಂಡ ಜಯಭೇರಿ ಬಾರಿಸಿತು. ಅಬ್ದುಲ್ಲಾ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಪ್ರೊ ಕಬಡ್ಡಿಯಲ್ಲಿ 20 ನಿಮಿಷಗಳಂತೆ 2 ಅವಧಿಗೆ ಪಂದ್ಯ ನಡೆಸಿದರೆ ಇಲ್ಲಿ ತಲಾ 10 ನಿಮಿಷಗಳ 4 ಕ್ವಾರ್ಟರ್‌ಗಳಲ್ಲಿ ಪಂದ್ಯ ನಡೆದಿದ್ದು ಭಿನ್ನವಾಗಿತ್ತು.

ಇದನ್ನೂ ಓದಿ: ಬಂಡಾಯ ಕಬಡ್ಡಿ ಲೀಗ್‌: ಮೈಸೂರಿನಲ್ಲಿ 17 ಪಂದ್ಯ

ಪಂದ್ಯದ ಮೊದಲ ಕ್ವಾರ್ಟರ್‌ನಲ್ಲಿ ಮುನ್ನಡೆ ಸಾಧಿಸಿದ್ದ ಪುಣೆ ತಂಡಕ್ಕೆ ಹರಾರ‍ಯಣ 2ನೇ ಕ್ವಾರ್ಟರ್‌ನಲ್ಲಿ ತಿರುಗೇಟು ನೀಡಿತ್ತು. ಆದರೆ ನಂತರದ 2 ಕ್ವಾರ್ಟರ್‌ಗಳಲ್ಲಿ ಮುನ್ನಡೆ ಸಾಧಿಸಿದ ಪುಣೆ 9 ಅಂಕಗಳ ಅಂತರದಲ್ಲಿ ಜಯಿಸಿತು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ಔಟ್, ಶುಭ್‌ಮನ್ ಗಿಲ್ ಇನ್: ಅಸಲಿ ಸತ್ಯ ಬಿಚ್ಚಿಟ್ಟ ರವಿಚಂದ್ರನ್ ಅಶ್ವಿನ್!
ಮೊದಲ ಸಲ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸಂಬಳ ಕಟ್! ಬಿಸಿಸಿಐ ಮಹತ್ವದ ತೀರ್ಮಾನ?