ಸ್ಪಿನ್ ಎದುರಿಸಲು ಸಾಧ್ಯವಿಲ್ಲವೆಂದರೆ ಭಾರತ ಪ್ರವಾಸ ಕೈಗೊಳ್ಳಬೇಡಿ

Published : Feb 03, 2017, 11:48 AM ISTUpdated : Apr 11, 2018, 01:02 PM IST
ಸ್ಪಿನ್ ಎದುರಿಸಲು ಸಾಧ್ಯವಿಲ್ಲವೆಂದರೆ ಭಾರತ ಪ್ರವಾಸ ಕೈಗೊಳ್ಳಬೇಡಿ

ಸಾರಾಂಶ

ಸಾಧ್ಯವಾದಷ್ಟು ಬೇಗ ಸ್ಪಿನ್ ಎದುರಿಸುವುದನ್ನು ಕಲಿಯಿರಿ. ಸ್ಪಿನ್ ಎದುರಿಸಲು ಸಾಧ್ಯವಿಲ್ಲವೆಂದರೆ ಭಾರತ ಪ್ರವಾಸ ಕೈಗೊಳ್ಳುವುದೇ ಬೇಡ ಎಂದು ಆಸ್ಟ್ರೇಲಿಯಾದ ಮಾದ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕೆಪಿ ತಿಳಿಸಿದ್ದಾರೆ.

ನವದೆಹಲಿ(ಫೆ.03): ಉಪಖಂಡದಲ್ಲಿ ಆಡಲಿಳಿಯುವ ಮುನ್ನ ಆದಷ್ಟು ಬೇಗ ಸ್ಪಿನ್ನರ್'ಗಳನ್ನು ಎದುರಿಸಲು ಕಲಿಯಿರಿ. ಇಲ್ಲವಾದರೆ ಮುಖಭಂಗ ಅನುಭವಿಸುವುದು ಗ್ಯಾರಂಟಿ ಎಂದು ಆಸೀಸ್ ತಂಡಕ್ಕೆ ಇಂಗ್ಲೆಂಡ್'ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್'ಸನ್ ಎಚ್ಚರಿಕೆಯ ಕಿವಿಮಾತುಗಳನ್ನಾಡಿದ್ದಾರೆ.

ಸಾಧ್ಯವಾದಷ್ಟು ಬೇಗ ಸ್ಪಿನ್ ಎದುರಿಸುವುದನ್ನು ಕಲಿಯಿರಿ. ಸ್ಪಿನ್ ಎದುರಿಸಲು ಸಾಧ್ಯವಿಲ್ಲವೆಂದರೆ ಭಾರತ ಪ್ರವಾಸ ಕೈಗೊಳ್ಳುವುದೇ ಬೇಡ ಎಂದು ಆಸ್ಟ್ರೇಲಿಯಾದ ಮಾದ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕೆಪಿ ತಿಳಿಸಿದ್ದಾರೆ.

ನೀವು ಭಾರತಕ್ಕೆ ಹೋದ ತಕ್ಷಣ ಅಲ್ಲಿನ ಪಿಚ್'ನಲ್ಲಿ ಸ್ಪಿನ್ ಎದುರಿಸಲು ಅಭ್ಯಾಸ ಮಾಡಿ. ಅಲ್ಲಿ ಅಭ್ಯಾಸ ನಡೆಸಿದರೆ ಯಾವ ಪಿಚ್'ನಲ್ಲಿ ಬೇಕಾದರೂ ಆತ್ಮವಿಶ್ವಾಸದಿಂದ ಚೆಂಡನ್ನು ಎದುರಿಸಲು ಸಾಧ್ಯವೆಂದಿದ್ದಾರೆ.

ಆಸ್ಟ್ರೇಲಿಯಾ ತಂಡವು ಸಾಲ್ಕು ಪಂದ್ಯಗಳ ಟೆಸ್ಟ್ ಸರಣಿಗಾಗಿ ಭಾರತ ಪ್ರವಾಸ ಕೈಗೊಳ್ಳಲಿದೆ. ಇದೇ ತಿಂಗಳು 23ರಿಂದ ಪುಣೆಯಲ್ಲಿ ಮೊದಲ ಪಂದ್ಯ ಆರಂಭವಾಗಲಿದೆ. ನಂತರ ಬೆಂಗಳೂರು, ರಾಂಚಿ ಹಾಗೂ ಧರ್ಮಶಾಲದಲ್ಲಿಯೂ ಟೆಸ್ಟ್ ಪಂದ್ಯಗಳು ನಡೆಯಲಿವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಡ್ಡು ಬಿಟ್ಟುಕೊಟ್ಟು ಮರಿ ಜಡೇಜಾಗೆ 14.2 ಕೋಟಿ ಖರ್ಚು ಮಾಡಿದ ಸಿಎಸ್‌ಕೆ! ಯಾರು ಈ ಪ್ರಶಾಂತ್ ವೀರ್?
ದೇಶೀ ಕ್ರಿಕೆಟ್‌ನ Uncapped ಜೋಡೆತ್ತು ಖರೀದಿಸಲು ದಾಖಲೆ ಮೊತ್ತ ಖರ್ಚು ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್‌!