
ಬೆಂಗಳೂರು(ಜೂ.24): ಕೊಹ್ಲಿ ವಿರುದ್ಧ ಟೀಕೆಗಳು ಮುಂದುವರಿದಿದ್ದು, ಇದೀಗ ಭಾರತ ತಂಡದ ಮಾಜಿ ಸ್ಪಿನ್ನರ್, ಕರ್ನಾಟಕದ ಇಎಎಸ್ ಪ್ರಸನ್ನ ಸಹ ಕೊಹ್ಲಿ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ನಾಯಕನೇ ಬಾಸ್ ಆದರೆ, ಕೋಚ್'ನ ಅವಶ್ಯಕತೆಯಾದರೂ ಏಕೆ? ಎಂದು ಪ್ರಶ್ನಿಸಿದ್ದಾರೆ.
ನನ್ನ ಪ್ರಕಾರ ಬ್ಯಾಟಿಂಗ್ ಕೋಚ್ ಬಾಂಗರ್ ಹಾಗೂ ಫೀಲ್ಡಿಂಗ್ ಕೋಚ್ ಶ್ರೀಧರ್ ಅವರ ಸೇವೆಯೂ ಅಗತ್ಯವಿಲ್ಲ' ಎಂದು ಪ್ರಸನ್ನ ಕಿಡಿಕಾರಿದ್ದಾರೆ. ಕೋಚ್ ನೇಮಕ ಮಾಡುವ ಬದಲು ಒಬ್ಬ ದೈಹಿಕ ತರಬೇತುದಾರ ನೇಮಕ ಮಾಡಿಕೊಂಡರೆ ಸಾಕು ಎಂದಿದ್ದಾರೆ.
‘ಕೊಹ್ಲಿ ಉತ್ತಮ ಆಟಗಾರ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಅವರು ಉತ್ತಮ ನಾಯಕ ಹೌದೋ, ಅಲ್ಲವೋ ಎಂಬುದು ತಿಳಿದಿಲ್ಲ' ಎಂದು ಪ್ರಸನ್ನ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.