
ಗಯಾನ[ನ.09]: ಬಹುನಿರೀಕ್ಷಿತ ಮಹಿಳಾ ಟಿ20 ಕ್ರಿಕೆಟ್ ವಿಶ್ವಕಪ್‌ಗೆ ಇಂದು ಚಾಲನೆ ದೊರೆತಿದೆ. ಭಾರತ ಮತ್ತು ನ್ಯೂಜಿಲೆಂಡ್ ವನಿತೆಯರ ನಡುವೆ ಮೊದಲ ಪಂದ್ಯ ನಡೆದಿದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಹರ್ಮನ್ ಪ್ರೀತ್ ಕೌರ್ ಅವರ ಭರ್ಜರಿ ಶತಕದ ನೆರವಿನಿಂದ 20 ಓವರ್ ಗಲ್ಲಿ 194 ರನ್ ದಾಖಲಿಸಿದೆ.
ನ್ಯೂಜಿಲೆಂಡ್ ಗೆ 195 ರನ್ ಗಳ ಗುರಿ ನೀಡಿದ್ದು ಭಾರತ ಶುಭಾರಂಭ ಮಾಡುವುದು ಬಹುತೇಕ ಖಚಿತವಾಗಿದೆ. ನ್ಯೂಜಿಲೆಂಡ್ ನ್ನು ಕಾಡಿದ ಕೌರ್ 51 ಎಸೆತಗಳಲ್ಲಿ 103 ರನ್ ಗಳಿಸಿದರು. ಇದರಲ್ಲಿ 7 ಬೌಂಡರಿ ಮತ್ತು 8 ಭರ್ಜರಿ ಸಿಕ್ಸರ್ ಗಳಿದ್ದವು. ರೋಡ್ರಿಗಸ್ ಅರ್ಧಶತಕ ದಾಖಲಿಸಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ, ಆರಂಭಿಕ ಆಘಾತ ಎದುರಿಸಬೇಕಾಯಿತು. ಆರಂಭದಲ್ಲೇ ತಾಹುಹು ಎಸೆತದಲ್ಲಿ ತಾನಿಯಾ ಭಾಟಿಯಾ ಹಾಗೂ ಸ್ಮೃತಿ ಮಂದನಾ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು.
ಬಳಿಕ 45 ಎಸೆತಗಳಲ್ಲಿ 59 ರನ್ ಪೇರಿಸಿದ್ದ ಜೆಮಿಯಾ ರೊಡ್ರಿಗಸ್ ಜೆಸ್ ವಾಟ್ಕಿನ್ ಎಸೆತದಲ್ಲಿ ಕೇಟಿ ಮಾರ್ಟಿನ್‌ಗೆ ಕ್ಯಾಚಿತ್ತರೆ, 7 ಎಸೆತಗಳಲ್ಲಿ 15 ರನ್ ಗಳಿಸಿದ್ದ ದಯಾಲನ್ ಹೇಮಲತಾ ಕ್ಯಾಸ್ಪೆರೆಕ್ ಎಸೆತದಲ್ಲಿ ತಾಹುಹುಗೆ ಕ್ಯಾಚಿತ್ತು ಪೆವಿಲಿಯನ್‌ಗೆ ಮರಳಿದರು. ಆದರೆ ನಂತರ ಕೌರ್ ಆರ್ಭಟಿಸಿದರು.
ನ.9ರಿಂದ 24ರ ವರೆಗೂ ನಡೆಯಲಿರುವ 6ನೇ ಆವೃತ್ತಿಯ ಮಹಾಸಮರ ಆರಂಭವಾಗಿದೆ. ಇಷ್ಟು ವರ್ಷ ಪುರುಷರ ವಿಶ್ವಕಪ್ ವೇಳೆಯೇ ಮಹಿಳೆಯರ ಪಂದ್ಯಾವಳಿ ಸಹ ನಡೆಸಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಪ್ರತ್ಯೇಕವಾಗಿ ಮಹಿಳಾ ವಿಶ್ವಕಪ್ ಆಯೋಜಿಸಲಾಗಿದ್ದು, ತಂಡಗಳಿಗೆ ಅಂಪೈರ್ ತೀರ್ಪು ಮೇಲ್ಮನವಿ ಪದ್ಧತಿ (ಡಿಆರ್‌ಎಸ್) ಬಳಕೆಗೆ ಅವಕಾಶವನ್ನು ಇದೇ ಮೊದಲ ಬಾರಿಗೆ ನೀಡಲಾಗಿದೆ. ಟೂರ್ನಿಯಲ್ಲಿ ಭಾರತ ಸೇರಿ ಒಟ್ಟು 10 ತಂಡಗಳು ಪಾಲ್ಗೊಳ್ಳಲಿದ್ದು, 8 ತಂಡಗಳು ನೇರವಾಗಿ ಅರ್ಹತೆ ಪಡೆದುಕೊಂಡವು. ಜುಲೈನಲ್ಲಿ ನೆದರ್‌ಲೆಂಡ್ಸ್‌ನಲ್ಲಿ ನಡೆದ ಅರ್ಹತಾ ಪಂದ್ಯಾವಳಿಯಲ್ಲಿ ಫೈನಲ್‌ಗೇರಿದ ಐರ್ಲೆಂಡ್ ಹಾಗೂ ಬಾಂಗ್ಲಾದೇಶ ತಂಡಗಳು 9 ಹಾಗೂ 10ನೇ ತಂಡಗಳಾಗಿ ವಿಶ್ವಕಪ್‌ನಲ್ಲಾಡುವ ಅವಕಾಶ ಪಡೆದವು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.