2021ರ ಏಕದಿನ ವಿಶ್ವಕಪ್‌: ಭಾರತಕ್ಕಿಲ್ಲ ನೇರ ಪ್ರವೇಶ?

By Web Desk  |  First Published Feb 13, 2019, 9:11 AM IST

ಬದ್ಧವೈರಿ ಪಾಕಿಸ್ತಾನ ವಿರುದ್ಧ ದ್ವಿಪಕ್ಷೀಯ ಸರಣಿಯನ್ನು ಭಾರತ ಮಹಿಳಾ ತಂಡ ನಿರಾಕರಿಸಿದೆ.  ಪಾಕ್ ವಿರುದ್ಧದ ಸರಣಿಗೆ ಹಿಂದೇಟು ಹಾಕಿರುವ ಭಾರತ ಇದೀಗ 2021ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಗೆ ನೇರ ಅರ್ಹತೆಯನ್ನ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ.
 


ನವದೆಹಲಿ(ಫೆ.13): ಪಾಕಿಸ್ತಾನ ವಿರುದ್ಧ ದ್ವಿಪಕ್ಷೀಯ ಸರಣಿ ಆಡಲು ನಿರಾಕರಿಸಿರುವ ಭಾರತ ತಂಡಕ್ಕೆ 2021ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ಗೆ ನೇರ ಅರ್ಹತೆ ಸಿಗುವುದು ಅನುಮಾನವೆನಿಸಿದೆ. ಐಸಿಸಿ ಏಕದಿನ ಚಾಂಪಿಯನ್‌ಶಿಪ್‌ ಪಟ್ಟಿಯಲ್ಲಿ 12 ಅಂಕಗಳೊಂದಿಗೆ ಭಾರತ, ಪಾಕಿಸ್ತಾನ ತಂಡಗಳು ಕ್ರಮವಾಗಿ 3 ಹಾಗೂ 4ನೇ ಸ್ಥಾನದಲ್ಲಿವೆ. 

ಇದನ್ನೂ ಓದಿ: ಪಾಕ್ ವೇಗಿ ಶೋಯಿಬ್ ಅಕ್ತರ್ ಕ್ರಿಕೆಟ್‌ಗೆ ವಾಪಾಸ್

Latest Videos

ಪಾಕಿಸ್ತಾನ ವಿರುದ್ಧ ಸರಣಿ ಆಡದಿದ್ದರೆ ಭಾರತದ ಖಾತೆಯಿಂದ 6 ಅಂಕ ಕಡಿತಗೊಳಿಸಿ ಆ ಅಂಕಗಳನ್ನು ಪಾಕಿಸ್ತಾನಕ್ಕೆ ನೀಡಲಾಗುತ್ತದೆ. ಹೀಗಾಗಿ ಭಾರತ ಮಹಿಳಾ ತಂಡ ಐಸಿಸಿ ವಿಶ್ವಕಪ್ ಟೂರ್ನಿಗೆ ನೇರ ಅರ್ಹತೆಯನ್ನ ಕಳೆದುಕೊಳ್ಳಲಿದೆ. 

ಇದನ್ನೂ ಓದಿ: ತಲೆಗೆ ಚೆಂಡು ಬಡಿದು ಮೈದಾನದಲ್ಲೇ ಕುಸಿದು ಬಿದ್ದ ಟೀಂ ಇಂಡಿಯಾ ವೇಗಿ

ವಿಶ್ವಕಪ್‌ಗೆ ಆತಿಥೇಯ ನ್ಯೂಜಿಲೆಂಡ್‌ ಜತೆ ಅಗ್ರ 4 ತಂಡಗಳಿಗೆ ಅವಕಾಶವಿರಲಿದೆ. ಅಗ್ರ 4ರಲ್ಲಿ ನ್ಯೂಜಿಲೆಂಡ್‌ ಕೂಡಾ ಇದ್ದರೆ ಅಗ್ರ 5 ತಂಡಗಳಿಗೆ ನೇರ ಪ್ರವೇಶ ಸಿಗಲಿದೆ. ವಿಶ್ವಕಪ್‌ನಲ್ಲಿ ಒಟ್ಟು 8 ತಂಡಗಳು ಆಡಲಿದ್ದು, ಇನ್ನುಳಿದ ಸ್ಥಾನಗಳಿಗಾಗಿ ಅರ್ಹತಾ ಸುತ್ತು ನಡೆಯಲಿದೆ.

click me!