3ನೇ ಅಂಪೈರ್‌ನಿಂದ ನೋಬಾಲ್‌ ತೀರ್ಪು : ಐಸಿಸಿ ಪ್ರಯೋಗ!

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಂಪೈರ್‌ಗಳ ಪದೇ ಪದೇ ಎಡವಟ್ಟು ತೀರ್ಮಾನಗಳಿಗೆ ಸರ್ಜಿಕಲ್ ಸ್ಟ್ರೈಕ್ ಮಾಡಲು ಐಸಿಸಿ ಮುಂದಾಗಿದೆ. ಇದರ ಪರಿಣಾಮವಾಗಿ ನೋ ಬಾಲ್ ತೀರ್ಮಾನವನ್ನು ಮೂರನೇ ಅಂಪೈರ್ ನೀಡುವ ಪ್ರಯೋಗವನ್ನು ಆರಂಭಿಸಲಿದೆ. ಇದರ ಸಾಧಕ-ಬಾಧಕಗಳ ಬಗೆಗಿನ ಒಳನೋಟ ಇಲ್ಲಿದೆ ನೋಡಿ... 


ನವದೆಹಲಿ(ಆ.07): ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಸದ್ಯದಲ್ಲೇ 3ನೇ ಅಂಪೈರ್‌ ನೋಬಾಲ್‌ ನೀಡುವ ಪ್ರಯೋಗವನ್ನು ಆರಂಭಿಸಲಿದೆ ಎಂದು ಕ್ರಿಕೆಟ್‌ ವ್ಯವಹಾರಗಳಗಳ ಪ್ರಧಾನ ವ್ಯವಸ್ಥಾಪಕ ಜೆಫ್‌ ಆಲರ್ಡೈಸ್‌ ಹೇಳಿದ್ದಾರೆ. ಆಯ್ದ ಕೆಲ ಟಿ20 ಹಾಗೂ ಏಕದಿನ ಸರಣಿಗಳಲ್ಲಿ ಮುಂದಿನ 6 ತಿಂಗಳ ಕಾಲ ಈ ಪ್ರಯೋಗ ನಡೆಸಲಿದ್ದು, ಯಶಸ್ಸು ಕಂಡರೆ ಮೈದಾನದಲ್ಲಿರುವ ಅಂಪೈರ್‌ಗಳು ನೋಬಾಲ್‌ ಘೋಷಿಸುವ ಹಕ್ಕು ಕಳೆದುಕೊಳ್ಳಲಿದ್ದಾರೆ.

8 ಕೆಟ್ಟ ತೀರ್ಪು ಕೊಟ್ಟ ಅಂಪೈರ್‌ಗೆ ’ಕುರುಡ’ನ ಪಟ್ಟ ಕೊಟ್ಟ ಅಭಿಮಾನಿ..!

Latest Videos

2016ರಲ್ಲಿ ಐಸಿಸಿ ತಂತ್ರಜ್ಞಾನದ ಸಹಾಯದಿಂದ ಈ ಪ್ರಯೋಗ ನಡೆಸಿತ್ತು. ಇಂಗ್ಲೆಂಡ್‌ ಹಾಗೂ ಪಾಕಿಸ್ತಾನ ನಡುವಿನ ಸರಣಿಯಲ್ಲಿ 3ನೇ ಅಂಪೈರ್‌ ನೋಬಾಲ್‌ ಘೋಷಿಸಿದ್ದರು. ಅದೇ ಪ್ರಯೋಗವನ್ನು ಈ ಬಾರಿ ನವೀಕರಿಸಲಾದ ತಂತ್ರಜ್ಞಾನದ ಬಳಕೆಯಿಂದ ಮಾಡಲಾಗುತ್ತದೆ ಎಂದು ಜೆಫ್‌ ತಿಳಿಸಿದ್ದಾರೆ.

"

ವಿಶ್ವಕಪ್ 2019: ಅಂಪೈರ್‌ ಗಳ ಭಾರೀ ಎಡವಟ್ಟು

ತಂತ್ರಜ್ಞಾನ ಬಳಕೆ ಹೇಗೆ?

ಪ್ರತಿ ಎಸೆತದ ದೃಶ್ಯವನ್ನು ಕೆಲವೇ ಸೆಕೆಂಡ್‌ಗಳಲ್ಲಿ 3ನೇ ಅಂಪೈರ್‌ಗೆ ಲಭ್ಯಗೊಳಿಸಲಾಗುತ್ತದೆ. ಒಂದೊಮ್ಮೆ ಎಸೆತ ನೋಬಾಲ್‌ ಆಗಿದ್ದರೆ ಅವರು ಮೈದಾನದಲ್ಲಿರುವ ಅಂಪೈರ್‌ಗಳ ಗಮನಕ್ಕೆ ತರುತ್ತಾರೆ. ಕೆಲ ಸೆಕೆಂಡ್‌ಗಳ ವಿಳಂಬದೊಂದಿಗೆ ದೃಶ್ಯ 3ನೇ ಅಂಪೈರ್‌ಗೆ ಲಭ್ಯವಾದರೂ, ಸೂಪರ್‌ ಸ್ಲೋ ಮೋಷನ್‌ನಲ್ಲಿರುವ ಕಾರಣ ಬೌಲರ್‌ ಕ್ರೀಸ್‌ ದಾಟಿದ್ದಾರೋ ಇಲ್ಲವೋ ಎನ್ನುವುದು ಸ್ಪಷ್ಟವಾಗಿ ತಿಳಿಯಲಿದೆ.

ಸವಾಲುಗಳೇನು?

ಐಸಿಸಿ ಕ್ರಿಕೆಟ್‌ ಸಮಿತಿ ಪ್ರತಿ ಏಕದಿನ ಹಾಗೂ ಟಿ20ಯಲ್ಲೂ 3ನೇ ಅಂಪೈರ್‌ ನೋಬಾಲ್‌ ಘೋಷಿಸಬೇಕು ಎಂದು ಪ್ರಸ್ತಾಪಿಸಿದೆ. ಆದರೆ 2018ರಲ್ಲಿ ಪುರುಷರ ಸೀಮಿತ ಓವರ್‌ ಮಾದರಿಯಲ್ಲಿ 84000 ಎಸೆತಗಳನ್ನು ಬೌಲ್‌ ಮಾಡಲಾಗಿದೆ. ಇಷ್ಟೊಂದು ಪ್ರಮಾಣದ ಎಸೆತಗಳನ್ನು ಗಮನಿಸಲು ಸಾಧ್ಯವೇ ಎನ್ನುವ ಪ್ರಶ್ನೆ ಎದ್ದಿದೆ. ಅಲ್ಲದೇ ಕಳೆದ ವರ್ಷ 80 ಸ್ಥಳಗಳಲ್ಲಿ ಏಕದಿನ, ಟಿ20 ಪಂದ್ಯಗಳು ನಡೆದಿವೆ. ಅಷ್ಟೊಂದು ಸ್ಥಳಗಳಲ್ಲಿ ತಂತ್ರಜ್ಞಾನ ಬಳಕೆಗೆ ವ್ಯವಸ್ಥೆ ಕಲ್ಪಿಸಲು ಸಾಧ್ಯವೇ ಎನ್ನುವ ಪ್ರಶ್ನೆ ಸಹ ಐಸಿಸಿಯನ್ನು ಕಾಡುತ್ತಿದೆ. ಇದೇ ಕಾರಣದಿಂದಾಗಿ ಕೆಲ ಆಯ್ದ ಸರಣಿಗಳಲ್ಲಿ ಮಾತ್ರ ತಂತ್ರಜ್ಞಾನದ ಪ್ರಯೋಗ ನಡೆಸಲು ಐಸಿಸಿ ನಿರ್ಧರಿಸಿದೆ.
 

click me!