ದೇಶಿ ಕ್ರಿಕೆಟ್ ಟೂರ್ನಿಯ ಪಂದ್ಯಾವಳಿಗಳು ದುಲೀಪ್ ಟ್ರೋಫಿಯೊಂದಿಗೆ ಆರಂಭವಾಗುವುದು ಸಾಮಾನ್ಯ. ಈ ಬಾರಿಯ ಟೂರ್ನಿಗೆ ಕರ್ನಾಟಕದ ಮೂವರು ಆಟಗಾರರು ಸ್ಥಾನ ಪಡೆದಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ನವದೆಹಲಿ[ಆ.07]: 2019-20ರ ದೇಸಿ ಕ್ರಿಕೆಟ್ ಋುತುವಿನ ಮೊದಲ ಪಂದ್ಯಾವಳಿ ದುಲೀಪ್ ಟ್ರೋಫಿಗೆ ತಂಡಗಳು ಪ್ರಕಟಗೊಂಡಿವೆ. ಆ.17ರಿಂದ ಸೆ.8ರ ವರೆಗೂ ನಡೆಯಲಿರುವ ಟೂರ್ನಿಯಲ್ಲಿ ಕರ್ನಾಟಕದ ಶ್ರೇಯಸ್ ಗೋಪಾಲ್, ಕರುಣ್ ನಾಯರ್ ಹಾಗೂ ರೋನಿತ್ ಮೋರೆ ಪಾಲ್ಗೊಳ್ಳಲಿದ್ದಾರೆ.
ಮತ್ತೊಂದು ಅವಧಿಗೆ ಶಾಸ್ತ್ರಿಯೇ ಟೀಂ ಇಂಡಿಯಾ ಕೋಚ್?
undefined
ಭಾರತ ಬ್ಲೂ ತಂಡಕ್ಕೆ ಶುಭ್‌ಮನ್ ಗಿಲ್, ಭಾರತ ರೆಡ್‌ಗೆ ಪ್ರಿಯಾಂಕ್ ಪಾಂಚಾಲ್ ಹಾಗೂ ಭಾರತ ಗ್ರೀನ್ ತಂಡಕ್ಕೆ ಫೈಯಜ್ ಫಜಲ್ ನಾಯಕರಾಗಿದ್ದಾರೆ. ಭಾರತ ಬ್ಲೂ ತಂಡದಲ್ಲಿ ಶ್ರೇಯಸ್ ಗೋಪಾಲ್ ಸ್ಥಾನ ಪಡೆದರೆ, ಭಾರತ ರೆಡ್ ತಂಡದಲ್ಲಿ ಕರುಣ್ ನಾಯರ್ ಹಾಗೂ ರೋನಿತ್ ಮೋರೆ ಕಾಣಿಸಿಕೊಳ್ಳಲಿದ್ದಾರೆ.
ದ್ರಾವಿಡ್‌ಗೆ BCCI ನೋಟಿಸ್; 2 ವಾರದಲ್ಲಿ ನೀಡಬೇಕಿದೆ ಉತ್ತರ!
ಬೆಂಗಳೂರಲ್ಲಿ ಟೂರ್ನಿ ನಡೆಯಲಿದ್ದು, ರೌಂಡ್ ರಾಬಿನ್ ಮಾದರಿ ಅನುಸರಿಸಲಾಗುತ್ತದೆ. ಈ ಬಾರಿ ರೌಂಡ್ ರಾಬಿನ್ ಹಂತದ ಪಂದ್ಯಗಳಲ್ಲಿ ಕೆಂಪು ಚೆಂಡು, ಫೈನಲ್‌ನಲ್ಲಿ ಮಾತ್ರ ಗುಲಾಬಿ ಬಣ್ಣದ ಚೆಂಡನ್ನು ಬಳಕೆ ಮಾಡಲಾಗುತ್ತದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಫೈನಲ್ ಮಾತ್ರ ಹಗಲು-ರಾತ್ರಿ ಪಂದ್ಯವಾಗಿರಲಿದೆ.