ಆಸೀಸ್ ಕ್ರಿಕೆಟಿಗರಿಗೆ ಬೋಲ್ಟ್ ಓಟದ ಪಾಠ

By Suvarna Web DeskFirst Published Nov 21, 2017, 4:28 PM IST
Highlights

ಬೋಲ್ಟ್ ನೀಡಿದ ಹಲವು ಉಪಯುಕ್ತ ಸಲಹೆಗಳು ಮುಂಬರುವ ಆ್ಯಷಸ್ ಸರಣಿಯಲ್ಲಿ ನೆರವಾಗಲಿದೆ ಎಂದು ಆಸ್ಟ್ರೇಲಿಯಾ ಬ್ಯಾಟ್ಸ್'ಮನ್ ಪೀಟರ್ ಹ್ಯಾಂಡ್ಸ್'ಕಂಬ್ ಹೇಳಿದ್ದಾರೆ.

ಸಿಡ್ನಿ(ನ.21): ಇಂಗ್ಲೆಂಡ್ ವಿರುದ್ಧ ಆ್ಯಷಸ್ ಟೆಸ್ಟ್ ಸರಣಿಗೆ ಸರ್ವ ರೀತಿಯಲ್ಲೂ ಸಜ್ಜಾಗುತ್ತಿರುವ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರರಿಗೆ ವಿಶ್ವದ ವೇಗದ ಓಟಗಾರ, ಮಾಜಿ ಅಥ್ಲೀಟ್ ಜಮೈಕಾದ ಉಸೇನ್ ಬೋಲ್ಟ್ ಓಟದ ಪಾಠವನ್ನು ಹೇಳಿಕೊಡುತ್ತಿ ದ್ದಾರೆ.

ಹೌದು, ವಿಕೆಟ್‌'ಗಳ ನಡುವೆ ದಾಂಡಿಗರ ಓಟದ ವೇಗದ ತೀವ್ರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಈ ಕ್ರಮಕೈಗೊಂಡಿದ್ದು, ಆಸ್ಟ್ರೇಲಿಯಾ ಆಟಗಾರರಿಗೆ ಬೋಲ್ಟ್ ತರಬೇತಿ ನೀಡುತ್ತಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಬೋಲ್ಟ್, ‘ನಾನು ಗಮನಿಸಿದ ಪ್ರಕಾರ ಕ್ರಿಕೆಟಿಗರು ಓಡುವಾಗ ತೀವ್ರತೆಯಿಂದ ಓಡುವುದಿಲ್ಲ. ನಿಧಾನವಾಗಿ ಓಡಲು ಆರಂಭಿಸುತ್ತಾರೆ. ಇದರ ಬಗ್ಗೆ ಗಮನ ಹರಿಸಿದರೆ ನಿಜವಾಗಲೂ ಅವರ ವೇಗ ಹೆಚ್ಚಾಗಲಿದೆ’ ಎಂದಿದ್ದಾರೆ.

ಬೋಲ್ಟ್ ನೀಡಿದ ಹಲವು ಉಪಯುಕ್ತ ಸಲಹೆಗಳು ಮುಂಬರುವ ಆ್ಯಷಸ್ ಸರಣಿಯಲ್ಲಿ ನೆರವಾಗಲಿದೆ ಎಂದು ಆಸ್ಟ್ರೇಲಿಯಾ ಬ್ಯಾಟ್ಸ್'ಮನ್ ಪೀಟರ್ ಹ್ಯಾಂಡ್ಸ್'ಕಂಬ್ ಹೇಳಿದ್ದಾರೆ.

click me!