ವಿಶ್ವಕಪ್ ಟ್ರೋಫಿ ಪ್ರಶಸ್ತಿ ಮೊತ್ತ ಬಹಿರಂಗ- ಗೆದ್ದ ತಂಡಕ್ಕೆ ಕೋಟಿ ಕೋಟಿ!

By Web Desk  |  First Published May 17, 2019, 6:33 PM IST

2019ರ ವಿಶ್ವಕಪ್ ಟೂರ್ನಿ ಪ್ರಶಸ್ತಿ ಮೊತ್ತವನ್ನು ಐಸಿಸಿ ಬಹಿರಂಗ ಪಡಿಸಿದೆ. ಈ ಬಾರಿಯ ಒಟ್ಟು ಪ್ರಶಸ್ತಿ ಮೊತ್ತ ಬರೋಬ್ಬರಿ 70 ಕೋಟಿ ರೂಪಾಯಿ. ಗೆದ್ದ ತಂಡಕ್ಕೆ, ರನ್ನರ್ ಅಪ್ ಹಾಗೂ ಪ್ರತಿ ಗೆಲುವಿಗೆ ತಂಡ ಪಡೆಯೋ ಪ್ರಶಸ್ತಿ ಮೊತ್ತವೆಷ್ಟು? ಇಲ್ಲಿದೆ ವಿವರ.


ದುಬೈ(ಮೇ.17): ವಿಶ್ವಕಪ್ ಟೂರ್ನಿ ಆರಂಭಕ್ಕೆ ಇನ್ನು ಕೆಲ ದಿನಗಳು ಮಾತ್ರ ಬಾಕಿ. ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲಾ ತಂಡಗಳು ಅಭ್ಯಾಸ ಆರಂಭಿಸಿದೆ. ಟೀಂ ಇಂಡಿಯಾ ಮೇ 22ರಂದು ವಿಶ್ವಕಪ್ ಟೂರ್ನಿಗಾಗಿ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದೆ. ತಂಡಗಳ ಅಭ್ಯಾಸ ನಡುವೆ ವಿಶ್ವಕಪ್ ಟೂರ್ನಿ ಪ್ರಶಸ್ತಿ ಮೊತ್ತ ಬಹಿರಂಗವಾಗಿದೆ. ಈ ಬಾರಿಯ ವಿಶ್ವಕಪ್ ಟೂರ್ನಿಯ ಒಟ್ಟು ಪ್ರಶಸ್ತಿ ಮೊತ್ತ 70.11 ಕೋಟಿ ರೂಪಾಯಿ.

ಇದನ್ನೂ ಓದಿ: ವಿಶ್ವಕಪ್ 2019: ಕೇದಾರ್ ಜಾಧವ್ ಬದಲು ರಾಯುಡುಗೆ ಸ್ಥಾನ?

Tap to resize

Latest Videos

2019ರ ವಿಶ್ವಕಪ್ ಟೂರ್ನಿ ಗೆದ್ದ ತಂಡಕ್ಕೆ ಪ್ರಶಸ್ತಿ ಮೊತ್ತವಾಗಿ ಬರೋಬ್ಬರಿ 28.07 ಕೋಟಿ ರೂಪಾಯಿ ಸಿಗಲಿದೆ. ಇನ್ನು ರನ್ನರ್ ಅಪ್ ಸ್ಥಾನ ಪಡೆಯುವ ತಂಡಕ್ಕೆ 14.02 ಕೋಟಿ  ರೂಪಾಯಿ ಬಹುಮಾನ ಸಿಗಲಿದೆ. ಇನ್ನು ಸೆಮಿಫೈನಲ್ ಪಂದ್ಯದಲ್ಲಿ ಸೋಲು ಅನುಭವಿಸಿ ಟೂರ್ನಿಯಿಂದ ಹೊರನಡೆಯುವ ತಂಡ 5.60 ಕೋಟಿ ರೂಪಾಯಿ ಬಹುಮಾನ ಪಡೆಯಲಿದೆ.

ಐಸಿಸಿ ವಿಶ್ವಕಪ್ 2019 ಪ್ರಶಸ್ತಿ ಮೊತ್ತ:

ವಿನ್ನರ್:  28.07 ಕೋಟಿ ರೂಪಾಯಿ
ರನ್ನರ್ ಅಪ್:14.02 ಕೋಟಿ  ರೂಪಾಯಿ
ಸೋತ ಸೆಮಿಫೈನಲ್ ತಂಡ: 5.60 ಕೋಟಿ ರೂಪಾಯಿ
ಲೀಗ್ ಹಂತದ ಪ್ರತಿ ಗೆಲುವಿಗೆ: 28 ಲಕ್ಷ ರೂಪಾಯಿ

click me!