ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಮೊದಲ ಜಯಕ್ಕೆ ಲಂಕಾ ಕಾತರ!

By Web DeskFirst Published Jun 7, 2019, 11:19 AM IST
Highlights

ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಮೊದಲ ಜಯಕ್ಕೆ ಲಂಕಾ ಕಾತರ!| ಐಸಿಸಿ ಏಕದಿನ ವಿಶ್ವಕಪ್‌: ಇಂದು ಪಾಕಿಸ್ತಾನ-ಲಂಕಾ ಸೆಣಸು| ಪಾಕ್‌ ವಿರುದ್ಧ ಆಡಿರುವ 7 ಪಂದ್ಯಗಳಲ್ಲೂ ಲಂಕಾಕ್ಕೆ ಸೋಲು

ಬ್ರಿಸ್ಟಲ್‌[ಜೂ.07]: 2019ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ತಾನಾಡಿದ ಮೊದಲ ಪಂದ್ಯದಲ್ಲಿ ಆಷ್ಘಾನಿಸ್ತಾನ ವಿರುದ್ಧ ಬ್ಯಾಟಿಂಗ್‌ ವೈಫಲ್ಯ ಕಂಡರೂ, ಬೌಲಿಂಗ್‌ನಲ್ಲಿ ಮಿಂಚಿ ಶುಭಾರಂಭ ಮಾಡಿದ್ದ ಶ್ರೀಲಂಕಾಕ್ಕೆ ಶುಕ್ರವಾರ ಮತ್ತೊಂದು ಕಠಿಣ ಸವಾಲು ಎದುರಾಗಲಿದೆ. ಕಡೆಗಣಿಸಲು ಸಾಧ್ಯವಿಲ್ಲದ ಸರ್ಫರಾಜ್‌ ಅಹ್ಮದ್‌ ಪಡೆಯನ್ನು ಎದುರಿಸಲಿರುವ ಶ್ರೀಲಂಕಾ, ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಮೊದಲ ಗೆಲುವಿಗಾಗಿ ಹಾತೊರೆಯುತ್ತಿದೆ. 1975ರಿಂದ 2011ರ ವರೆಗೂ ವಿಶ್ವಕಪ್‌ಗಳಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ 7 ಬಾರಿ ಮುಖಾಮುಖಿಯಾಗಿದ್ದು, ಏಳೂ ಬಾರಿ ಪಾಕಿಸ್ತಾನವೇ ಗೆಲುವಿನ ನಗೆ ಬೀರಿದೆ.

2ನೇ ಜಯದ ಗುರಿ: ಸತತ 11 ಸೋಲುಗಳ ಬಳಿಕ ದಿಢೀರನೆ ಪುಟಿದೆದ್ದ ಪಾಕಿಸ್ತಾನ, ಇಂಗ್ಲೆಂಡ್‌ ವಿರುದ್ಧ 14 ರನ್‌ಗಳ ರೋಚಕ ಗೆಲುವು ಸಾಧಿಸಿತ್ತು. ಇನ್ನು, ಆಷ್ಘಾನಿಸ್ತಾನ ವಿರುದ್ಧ ಬ್ಯಾಟಿಂಗ್‌ ವೈಫಲ್ಯಕಂಡರೂ, ಅತ್ಯುತ್ತಮ ಬೌಲಿಂಗ್‌ ಪ್ರದರ್ಶನದಿಂದಾಗಿ ಶ್ರೀಲಂಕಾ 34 ರನ್‌ಗಳ ಗೆಲುವು ಕಂಡಿತ್ತು. ಉಭಯ ತಂಡಗಳು ಗೆಲುವಿನ ಹಳಿಯಲ್ಲೇ ಮುನ್ನುಗ್ಗುವ ಉತ್ಸಾಹದಲ್ಲಿವೆ.

ಒಟ್ಟು ಮುಖಾಮುಖಿ: 153

ಪಾಕಿಸ್ತಾನ: 90| ಶ್ರೀಲಂಕಾ: 58| ಟೈ: 01| ರದ್ದು: 04

ವಿಶ್ವಕಪ್‌ನಲ್ಲಿ ಪಾಕ್‌ vs ಲಂಕಾ

ಪಂದ್ಯ: 07| ಪಾಕಿಸ್ತಾನ: 07| ಶ್ರೀಲಂಕಾ: 00

ಸಂಭವನೀಯ ಆಟಗಾರರ ಪಟ್ಟಿ

ಪಾಕಿಸ್ತಾನ: ಇಮಾಮ್‌, ಫಖರ್‌, ಬಾಬರ್‌, ಹಫೀಜ್‌, ಸರ್ಫರಾಜ್‌ (ನಾಯಕ), ಆಸಿಫ್‌ ಅಲಿ, ಶೋಯಿಬ್‌, ವಾಹಬ್‌, ಹಸನ್‌ ಅಲಿ, ಶದಾಬ್‌, ಆಮೀರ್‌.

ಶ್ರೀಲಂಕಾ: ಕರುಣರತ್ನೆ(ನಾಯಕ), ಕುಸಾಲ್‌ ಪೆರೇರಾ, ತಿರಿಮನ್ನೆ, ಕುಸಾಲ್‌ ಮೆಂಡಿಸ್‌, ಮ್ಯಾಥ್ಯೂಸ್‌, ಧನಂಜಯ, ಉಡಾನ, ಲಕ್ಮಲ್‌, ಮಾಲಿಂಗ, ಪ್ರದೀಪ್‌.

ಸ್ಥಳ: ಬ್ರಿಸ್ಟಲ್‌, ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋಟ್ಸ್‌ರ್‍ 1

ಪಿಚ್‌ ರಿಪೋರ್ಟ್‌

ಬ್ರಿಸ್ಟಲ್‌ನ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದು ದೊಡ್ಡ ಮೊತ್ತ ನಿರೀಕ್ಷೆ ಮಾಡಬಹುದಾಗಿದೆ. ಇಲ್ಲಿ ನಡೆದಿರುವ 17 ಏಕದಿನ ಪಂದ್ಯಗಳಲ್ಲಿ 7ರಲ್ಲಿ ಮಾತ್ರ ಮೊದಲು ಬ್ಯಾಟ್‌ ಮಾಡಿದ ತಂಡ ಗೆದ್ದಿದೆ. ಈ ವರ್ಷ ನಡೆದಿರುವ 2 ಪಂದ್ಯಗಳಲ್ಲೂ ಗುರಿ ಬೆನ್ನತ್ತಿದ ತಂಡವೇ ಜಯಿಸಿದೆ. ಟಾಸ್‌ ಗೆಲ್ಲುವ ತಂಡ ಮೊದಲು ಫೀಲ್ಡ್‌ ಮಾಡುವ ಸಾಧ್ಯತೆ ಹೆಚ್ಚು.

click me!