ಟೆಸ್ಟ್‌ ರ‍್ಯಾಂಕಿಂಗ್: ಅಗ್ರ ಸ್ಥಾನ ಉಳಿಸಿಕೊಂಡ ಭಾರತ

By Web DeskFirst Published May 3, 2019, 4:06 PM IST
Highlights

ಐಸಿಸಿ ವಾರ್ಷಿಕ ಶ್ರೇಯಾಂಕಪಟ್ಟಿ ಪ್ರಕಟಗೊಂಡಿದ್ದು, ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಸ್ಥಾನ ಉಳಿಸಿಕೊಂಡಿದ್ದು, ಏಕದಿನ ಶ್ರೇಯಾಂಕದಲ್ಲಿ ವಿಶ್ವಕಪ್ ಟೂರ್ನಿಗೂ ಮುನ್ನ ನಂಬರ್ ಒನ್ ಸ್ಥಾನಕ್ಕೇರುವ ಕನವರಿಕೆಯಲ್ಲಿದೆ.

ದುಬೈ[ಮೇ.03]: ಐಸಿಸಿ ವಾರ್ಷಿಕ ರ‍್ಯಾಂಕಿಂಗ್ ಪಟ್ಟಿ ಪ್ರಕಟಗೊಳಿಸಿದ್ದು, ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ಅಗ್ರಸ್ಥಾನ ಕಾಯ್ದುಕೊಂಡಿದೆ. 

2016-17, 2017-18ರ ಪ್ರದರ್ಶನವನ್ನು ಪರಿಗಣಿಸಿ ಈ ಶ್ರೇಯಾಂಕವನ್ನು ಪ್ರಕಟಿಸಲಾಗಿದೆ. ಏಕದಿನ ಮಾದರಿಯಲ್ಲಿ ಇಂಗ್ಲೆಂಡ್‌ ಅಗ್ರಸ್ಥಾನ ಉಳಿಸಿಕೊಂಡಿದ್ದರೂ, ವಿಶ್ವಕಪ್‌ಗೂ ಮುನ್ನ 2ನೇ ಸ್ಥಾನದಲ್ಲಿರುವ ಭಾರತ ಅಗ್ರಸ್ಥಾನಕ್ಕೇರುವ ಸಾಧ್ಯತೆ ಇದೆ. ಪಾಕಿಸ್ತಾನ ವಿರುದ್ಧ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಇಂಗ್ಲೆಂಡ್‌ ಸೋತರೆ, ಇಂಗ್ಲೆಂಡ್‌ ಅಗ್ರಸ್ಥಾನ ಕಳೆದುಕೊಳ್ಳಲಿದೆ. ಟೆಸ್ಟ್‌ನಲ್ಲಿ ನ್ಯೂಜಿಲೆಂಡ್‌ 2ನೇ ಸ್ಥಾನದಲ್ಲಿದೆ.

ಇನ್ನು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಏಕದಿನ ಶ್ರೇಯಾಂಕದಲ್ಲಿ 121 ಅಂಕ ಕಲೆಹಾಕಿದ್ದು, ಮೊದಲ ಸ್ಥಾನದಲ್ಲಿರುವ ಇಂಗ್ಲೆಂಡ್[123]ಗಿಂತ ಕೇವಲ 2 ಅಂಕ ಹಿನ್ನಡೆಯಲ್ಲಿದೆ. ಇನ್ನು ಟಿ20 ಶ್ರೇಯಾಂಕದಲ್ಲಿ ಪಾಕಿಸ್ತಾನ ಮೊದಲನೇ ಸ್ಥಾನದಲ್ಲಿದ್ದು, ಭಾರತ 5ನೇ ಸ್ಥಾನದಲ್ಲಿದೆ.


 

click me!