ಏಕದಿನ ಕ್ರಿಕೆಟ್ ಚಾಂಪಿಯನ್ಸ್ ಟ್ರೋಫಿಗೆ ಗುಡ್’ಬೈ..!

First Published Apr 27, 2018, 5:28 PM IST
Highlights

2020ರಲ್ಲಿ ಆಸ್ಟ್ರೇಲಿಯಾದಲ್ಲಿ ಮುಂದಿನ ಆವೃತ್ತಿಯ ಟಿ20 ವಿಶ್ವಕಪ್ ನಡೆಯಲಿದ್ದು, ಸತತ 2 ವರ್ಷಗಳ ಕಾಲ ವಿಶ್ವಕಪ್ ಆಯೋಜನೆಗೊಳ್ಳಲಿದೆ. ಚಾಂಪಿಯನ್ಸ್ ಟ್ರೋಫಿಯನ್ನು ರದ್ದುಗೊಳಿಸಲು ಬಿಸಿಸಿಐ ಪ್ರಾರಂಭದಿಂದಲೂ ವಿರೋಧ ವ್ಯಕ್ತಪಡಿಸುತ್ತಾ ಬಂದಿತ್ತು, ಆದರೆ ಐಸಿಸಿ ಸಭೆಯಲ್ಲಿ ಪಂದ್ಯಾವಳಿಯನ್ನು ಟಿ20 ವಿಶ್ವಕಪ್’ನೊಂದಿಗೆ ಬದಲಿಸಲು ಬಿಸಿಸಿಐ ಸಹ ಮತ ಚಲಾಯಿಸಿತು ಎಂದು ಐಸಿಸಿ ಸಿಇಓ ರಿಚರ್ಡ್‌ಸನ್ ಸ್ಪಷ್ಟಪಡಿಸಿದ್ದಾರೆ.

ಕೋಲ್ಕತಾ[ಏ.27]: ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಯನ್ನು ಸ್ಥಗಿತಗೊಳಿಸಲು ಐಸಿಸಿ ನಿರ್ಧರಿಸಿದ್ದು, ಅದರ ಬದಲಿಗೆ ಟಿ20 ವಿಶ್ವಕಪ್ ಆಯೋಜಿಸಲು ಮುಂದಾಗಿದೆ. 2021ರಲ್ಲಿ ಭಾರತದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯಬೇಕಿತ್ತು. ಆದರೀಗ ಅದೇ ವರ್ಷ ಭಾರತ ಟಿ20 ವಿಶ್ವಕಪ್‌ಗೆ ಆತಿಥ್ಯ ವಹಿಸಲಿದೆ. 
2020ರಲ್ಲಿ ಆಸ್ಟ್ರೇಲಿಯಾದಲ್ಲಿ ಮುಂದಿನ ಆವೃತ್ತಿಯ ಟಿ20 ವಿಶ್ವಕಪ್ ನಡೆಯಲಿದ್ದು, ಸತತ 2 ವರ್ಷಗಳ ಕಾಲ ವಿಶ್ವಕಪ್ ಆಯೋಜನೆಗೊಳ್ಳಲಿದೆ. ಚಾಂಪಿಯನ್ಸ್ ಟ್ರೋಫಿಯನ್ನು ರದ್ದುಗೊಳಿಸಲು ಬಿಸಿಸಿಐ ಪ್ರಾರಂಭದಿಂದಲೂ ವಿರೋಧ ವ್ಯಕ್ತಪಡಿಸುತ್ತಾ ಬಂದಿತ್ತು, ಆದರೆ ಐಸಿಸಿ ಸಭೆಯಲ್ಲಿ ಪಂದ್ಯಾವಳಿಯನ್ನು ಟಿ20 ವಿಶ್ವಕಪ್’ನೊಂದಿಗೆ ಬದಲಿಸಲು ಬಿಸಿಸಿಐ ಸಹ ಮತ ಚಲಾಯಿಸಿತು ಎಂದು ಐಸಿಸಿ ಸಿಇಓ ರಿಚರ್ಡ್‌ಸನ್ ಸ್ಪಷ್ಟಪಡಿಸಿದ್ದಾರೆ.

2021ರ ವಿಶ್ವಕಪ್‌ನಲ್ಲಿ 16 ತಂಡಗಳು ಪಾಲ್ಗೊಳ್ಳಲಿವೆ. ಇದೇ ವೇಳೆ 2019-23ರ ವರೆಗಿನ ಭವಿಷ್ಯ ಪಂದ್ಯಾವಳಿಗಳ ಪಟ್ಟಿಯನ್ನು ಐಸಿಸಿ ಪ್ರಕಟಿಸಿದೆ. 2019, 2023ರಲ್ಲಿ ಏಕದಿನ ವಿಶ್ವಕಪ್, 2020, 2021ರಲ್ಲಿ ಟಿ20 ವಿಶ್ವಕಪ್, 2021, 2023ರಲ್ಲಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್. 2019-21ರ ವರೆಗೂ ಟೆಸ್ಟ್ ಚಾಂಪಿಯನ್‌ಶಿಪ್‌ನ ಮೊದಲ ಅವಧಿ ನಡೆದರೆ, 2021-23ರ ವರೆಗೂ 2ನೇ ಅವಧಿ ಜಾರಿಯಲ್ಲಿರಲಿದೆ. 

click me!