ದ್ರೋಣಾಚಾರ್ಯ ಪ್ರಶಸ್ತಿಗೆ ದ್ರಾವಿಡ್ ಹೆಸರು

First Published Apr 27, 2018, 4:30 PM IST
Highlights

ಭಾರತ ಕಿರಿಯರ ಕ್ರಿಕೆಟ್ ತಂಡದ ಕೋಚ್, ಕನ್ನಡಿಗ ರಾಹುಲ್ ದ್ರಾವಿಡ್ ಅವರ ಹೆಸರನ್ನು ‘ದ್ರೋಣಾಚಾರ್ಯ’ ಹಾಗೂ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೆಸರನ್ನು ‘ಖೇಲ್ ರತ್ನ’ ಪ್ರಶಸ್ತಿಗೆ ಬಿಸಿಸಿಐ ಶಿಫಾರಸು ಮಾಡಿದೆ. ಇದೇ ವೇಳೆ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಅವರ ಹೆಸರನ್ನು ಜೀವಮಾನದ ಶ್ರೇಷ್ಠಸಾಧನೆಗೆ ನೀಡುವ ‘ಧ್ಯಾನ್ ಚಂದ್’ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ಕೋಲ್ಕತಾ(ಏ.27]: ಭಾರತ ಕಿರಿಯರ ಕ್ರಿಕೆಟ್ ತಂಡದ ಕೋಚ್, ಕನ್ನಡಿಗ ರಾಹುಲ್ ದ್ರಾವಿಡ್ ಅವರ ಹೆಸರನ್ನು ‘ದ್ರೋಣಾಚಾರ್ಯ’ ಹಾಗೂ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೆಸರನ್ನು ‘ಖೇಲ್ ರತ್ನ’ ಪ್ರಶಸ್ತಿಗೆ ಬಿಸಿಸಿಐ ಶಿಫಾರಸು ಮಾಡಿದೆ. ಇದೇ ವೇಳೆ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಅವರ ಹೆಸರನ್ನು ಜೀವಮಾನದ ಶ್ರೇಷ್ಠಸಾಧನೆಗೆ ನೀಡುವ ‘ಧ್ಯಾನ್ ಚಂದ್’ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

'ವಿವಿಧ ಪ್ರಶಸ್ತಿಗಳಿಗೆ ಹಲವು ಕ್ರಿಕೆಟಿಗರ ಹೆಸರುಗಳನ್ನು ಶಿಫಾರಸು ಮಾಡಲಾಗಿದೆ. ದ್ರೋಣಾಚಾರ್ಯ ಪ್ರಶಸ್ತಿಗೆ ಸ್ವತಃ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯೇ ದ್ರಾವಿಡ್ ಹೆಸರನ್ನು ನಾಮನಿರ್ದೇಶನ ಮಾಡಿದೆ’ ಎಂದು ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ ಹೇಳಿದ್ದಾರೆ.  
ಅರ್ಜುನಕ್ಕೆ ಶೂಟರ್ ಶಹ್ಜಾರ್, ಶ್ರೇಯಸಿ ಹೆಸರು: ಶೂಟರ್‌ಗಳ ಶ್ರೇಯಸಿ ಸಿಂಗ್, ಅಂಕೂರ್ ಮಿತ್ತಲ್, ಶಾಹ್ಜರ್ ರಿಜ್ವಿ ಹಾಗೂ ಪೂಜಾ ಘಾಟ್ಕರ್ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಭಾರತ ರೈಫಲ್ ಸಂಸ್ಥೆ ನಾಮ ನಿರ್ದೇಶನ ಮಾಡಿದೆ. ರಿಜ್ವಿ 2 ದಿನಗಳ ಹಿಂದೆಯಷ್ಟೇ ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ವಿಶ್ವಕಪ್‌ನ 10 ಮೀ. ಏರ್ ಪಿಸ್ತೂಲ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಅಲ್ಲದೇ ಮೆಕ್ಸಿಕೊದಲ್ಲಿ ನಡೆದ ವಿಶ್ವಕಪ್ ನಲ್ಲಿ ಸ್ವರ್ಣ ಗೆದ್ದಿದ್ದರು. ಶ್ರೇಯಸಿ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಗೋಲ್ಡ್ ಕೋಸ್ಟ್ ಕಾಮನ್ ವೆಲ್ತ್‌ನಲ್ಲಿ ಡಬಲ್ ಟ್ರ್ಯಾಪ್‌ನಲ್ಲಿ ಐತಿಹಾಸಿಕ ಚಿನ್ನ ಗೆದ್ದಿದ್ದರು. ಘಾಟ್ಕರ್ ಹಾಗೂ ಮಿತ್ತಲ್ ಕಳೆದ ವರ್ಷ ನಡೆದಿದ್ದ ವಿಶ್ವಕಪ್‌ನಲ್ಲಿ ಕ್ರಮವಾಗಿ ಚಿನ್ನ ಹಾಗೂ ಬೆಳ್ಳಿ ಜಯಿಸಿದ್ದರು.

click me!